ತುಮಕೂರು : 5ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ!!

ತುಮಕೂರು:

     ದಿನೇ ದೆನೇ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರಕರಣ ಹೆಚ್ಚುತ್ತಿರುವ  ಹಿನ್ನೆಲೆಯಲ್ಲಿ  ಜನರ ಆತಂಕ ಹೆಚ್ಚುತ್ತಿದೆ.

     ಜಿಲ್ಲೆಯ ಕೆಹೆಚ್‍ಬಿ ಕಾಲೋನಿಯ ಪಿ-535 ಮೃತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಪಿ-553 ವ್ಯಕ್ತಿಗೂ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ಅವರು ತಿಳಿಸಿದ್ದಾರೆ.

       ಮೃತ ಪಿ-535 ವ್ಯಕ್ತಿಯು ಪ್ರಾಥಮಿಕ ಸಂಪರ್ಕದಲ್ಲಿದ್ದ ಅವರ ಕುಟುಂಬ ಸದಸ್ಯರ 4 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ 3 ಮಾದರಿಗಳು ನೆಗೆಟಿವ್ ಬಂದಿದ್ದು, ಮೃತ ವ್ಯಕ್ತಿಯ ಪತ್ನಿಗೆ ಪಾಸಿಟಿವ್ ಬಂದಿದ್ದು, ಅವರನ್ನು ಐಸೋಲೇಶನ್ ಮಾಡಲಾಗಿದೆ.

       ಉಳಿದಂತೆ ಮೃತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಈಗಾಗಲೇ ಐಸೋಲೇಶನ್ ಮಾಡಲಾಗಿದ್ದು, ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದು, ಅವರನ್ನು ಸಹ ಪರೀಕ್ಷೆಗೊಳಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

      ಜಿಲ್ಲೆಯಲ್ಲಿ ಈವರೆಗೆ 5 ಜನರಿಗೆ  ಸೋಂಕು ತಗಲಿದ್ದು ಇಬ್ಬರು ಮೃತಪಟ್ಟಿದ್ದು. ಇಬ್ಬರು  ಚಿಕಿತ್ಸೆ  ಪಡೆಯುತ್ತಿದ್ದು ಒಬ್ಬರು  ಗುಣಮುಖರಾಗಿದ್ದಾರೆ.

(Visited 4 times, 1 visits today)

Related posts

Leave a Comment