BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಜಲ್ಲಿಕ್ರಷರ್ ಕಾರ್ಮಿಕನ ಮೇಲೆ ಮಾಲೀಕ ರಾಜೂಗೌಡ, ಕೈ ಕಟ್ಟಿ ಮಾರಾಂತಿಕ ಹಲ್ಲೆ
  • ಶ್ರೀರಾಮ್ ಫೈನಾನ್ಸ್ನಿಂದ ೧೫೦೦ ಮಕ್ಕಳಿಗೆ ವಿದ್ಯಾರ್ಥಿವೇತನ
  • ಸ್ಮೋಕಿಂಗ್ ಜೋನ್ ಆದ ಟಿ ಅಂಗಡಿಗಳು
  • ಪತ್ರಿಕೆಯ ವರದಿಯ ಫಲವಾಗಿ ಬಡವರ ಹಸಿವು ನೀಗಿಸಲು ಮುಂದಾದ ಆಡಳಿತ
  • ಧರ್ಮಸ್ಥಳ ಸಂಸ್ಥೆ ವ್ಯಸನಮುಕ್ತಗೊಳಿಸಿ ಮನೆಯ ದೀಪ ಬೆಳಗುತ್ತಿದೆ
  • ಕನ್ನಡ ರಾಜ್ಯೋತ್ಸವ: ಕನ್ನಡಾಂಬೆ ಭುವನೇಶ್ವರಿ ದೇವಿಯ ಮೆರವಣಿಗೆಗೆ ಡಿಸಿ ಸೂಚನೆ
  • ಕಲಬೆರಕೆ ಆಹಾರ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ
  • ಕ್ರೀಡೆಯಿ0ದ ಶಿಸ್ತು, ಛಲ, ಸಮರ್ಪಣೆ ಬೆಳೆಸಿಕೊಳ್ಳಿ: ತಹಶೀಲ್ದಾರ್
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಸಣ್ಣ ಕೈಗಾರಿಕೋದ್ಯಮಿಗಳು ತಪ್ಪದೇ ಪೇಟೆಂಟ್ ಪಡೆಯಲು ಡೀಸಿ ಸಲಹೆ!
Trending

ಸಣ್ಣ ಕೈಗಾರಿಕೋದ್ಯಮಿಗಳು ತಪ್ಪದೇ ಪೇಟೆಂಟ್ ಪಡೆಯಲು ಡೀಸಿ ಸಲಹೆ!

By News Desk BenkiyabaleUpdated:July 22, 2019 6:45 pm

ತುಮಕೂರು:

      ಸಣ್ಣ ಕೈಗಾರಿಕೋದ್ಯಮಿಗಳು ತಾವು ಹೊಸದಾಗಿ ಆವಿಷ್ಕರಿಸಿದ ಕೈಗಾರಿಕೆ/ಯಂತ್ರೋಪಕರಣಗಳ ಪೇಟೆಂಟ್(ಹಕ್ಕುಪತ್ರ)ಅನ್ನು ತಪ್ಪದೇ ಪಡೆದಿರಬೇಕೆಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್‍ಕುಮಾರ್ ಅವರು ಸಲಹೆ ನೀಡಿದರು.

      ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ಕಾಸಿಯಾ), ಜಿಲ್ಲಾ ಕೈಗಾರಿಕಾ ಕೇಂದ್ರ, ಮತ್ತಿತರ ಸರ್ಕಾರಿ ಹಾಗೂ ಸರ್ಕಾರೇತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಗರದ ಗಾಜಿನಮನೆಯಲ್ಲಿಂದು ಏರ್ಪಡಿಸಿದ್ದ “ದಕ್ಷಿಣ ಭಾರತದ ಆಗ್ರೋ ಎಕ್ಸ್‍ಪೋ ಕೃಷಿ ಮತ್ತು ಪೂರಕ ವಸ್ತುಪ್ರದರ್ಶನ” ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

      ಈ ವಸ್ತುಪ್ರದರ್ಶನಕ್ಕೆ ತಾವು ಭೇಟಿ ನೀಡಿದ ಸಂದರ್ಭದಲ್ಲಿ ಎಷ್ಟೋ ಮಳಿಗೆಗಳಲ್ಲಿರುವ ಕೈಗಾರಿಕೋದ್ಯಮಿಗಳು ತಮ್ಮ ಉತ್ಪನ್ನದ ಪೇಟೆಂಟ್ ಪಡೆಯದಿಲ್ಲದಿರುವುದು ಕಂಡುಬಂತು. ಒಂದು ದೇಶವನ್ನು ಅಭಿವೃದ್ಧಿ ದೇಶವೆಂದು ವಿಶ್ವ ಮಟ್ಟದಲ್ಲಿ ಪರಿಗಣಿಸಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಪೇಟೆಂಟ್ ಆಗಿರುವ ಅಂಶವನ್ನೂ ಸಹ ಗಣನೆಗೆ ತೆಗೆದುಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಉದ್ಯಮಿಗಳು ತಮ್ಮ ಹೊಸ ಆವಿಷ್ಕಾರ ಮಾಡಿದ ಯಂತ್ರ/ಕೈಗಾರಿಕೆ/ಉತ್ಪನ್ನಗಳಿಗೆ ತಪ್ಪದೇ ಪೇಟೆಂಟ್ ಪಡೆಯಬೇಕು. ಹೊಸದಾಗಿ ಆವಿಷ್ಕರಿಸಿದ ಯಂತಗಳ ಡಿಜೈನ್, ಪ್ರಾಸೆಸ್, ಪ್ರಾಡಕ್ಟ್‍ಗಳಿಗೆ ಪೇಟೆಂಟ್ ಪಡೆಯಲು ಅವಕಾಶವಿದ್ದು, ಎಲ್ಲರೂ ತಪ್ಪದೇ ಪೇಟೆಂಟ್ ಹೊಂದುವ ಮೂಲಕ ದೇಶವನ್ನು ಅಭಿವೃದ್ಧಿ ಹಾದಿಯಲ್ಲಿ ಸಾಗಲು ನೆರವಾಗಬೇಕು. ಇಲ್ಲದಿದ್ದಲ್ಲಿ ಬೇರೆ ರಾಜ್ಯ/ರಾಷ್ಟ್ರದವರು ನಿಮ್ಮ ಉತ್ಪನ್ನದ ಕೃತಿಸ್ವಾಮ್ಯ(ಕಾಪಿರೈಟ್)ವನ್ನು ಬಳಸಿಕೊಂಡು ರಾಯಲ್ಟಿ(ಪ್ರಭುತ್ವ)ಯ ಲಾಭವನ್ನು ಪಡೆಯುವ ಸಾಧ್ಯತೆ ಇದೆ ಎಂದು ತಿಳಿಸಿದರು.

      ಕೃಷಿ ಹಾಗೂ ಸಣ್ಣ ಕೈಗಾರಿಕೆಗಳಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುವವರಿಗಾಗಿ ವೇದಿಕೆ ಕಲ್ಪಿಸಲು ಹಾಗೂ ಅವರಿಗೆ ಉತ್ತೇಜನ ನೀಡಲು ಈ ಪ್ರದರ್ಶನವನ್ನು ಕಾಸಿಯಾ ಸಂಸ್ಥೆ ಏರ್ಪಡಿಸಿದೆ. ಮಾರುಕಟ್ಟೆಯಲ್ಲಿ ದೊಡ್ಡ ಕೈಗಾರಿಕೆಗಳಿಗಿಂತ ಸಣ್ಣ ಕೈಗಾರಿಕೆಗಳಿಗೆ ಅವಕಾಶಗಳು ಕಡಿಮೆ. ಈ ನಿಟ್ಟಿನಲ್ಲಿ ಸಣ್ಣ ಕೈಗಾರಿಕಾ ಉತ್ಪನ್ನಗಳಿಗೆ ಇಲ್ಲಿ ಮಾರುಕಟ್ಟೆ ಒದಗಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.

      ದೇಶದಲ್ಲಿ ಶೇ.50ಕ್ಕಿಂತ ಹೆಚ್ಚು ಸಣ್ಣ ಕೈಗಾರಿಕೆಗಳಿದ್ದು, ಕೇಂದ್ರ /ರಾಜ್ಯ ಸರ್ಕಾರದಿಂದ ಸಣ್ಣ ಕೈಗಾರಿಕೆಗಳನ್ನು ಹೊಸದಾಗಿ ಪ್ರಾರಂಭಿಸಲು ಹಲವಾರು ಯೋಜನೆಗಳಡಿ ಪ್ರೋತ್ಸಾಹಧನ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಹೊಸ ಹಾಗೂ ಯುವ ಕೈಗಾರಿಕೋದ್ಯಮಿಗಳು ಸರ್ಕಾರಿ ಸೌಲಭ್ಯಗಳನ್ನು ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದಾಗಿದೆ. ಉದ್ಯಮಿಗಳು ಸಣ್ಣ ಕೈಗಾರಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಲ್ಲಿ ಬೃಹತ್ ಕೈಗಾರಿಕೆಗಳಿಗಿಂತ ಹೆಚ್ಚಿನ ಆದಾಯ ಗಳಿಸುವ ಸಾಧ್ಯತೆಯಿದ್ದು, ದೇಶದ ಆರ್ಥಿಕತೆ ಇನ್ನಷ್ಟು ಭದ್ರವಾಗುತ್ತದೆ ಎಂದರಲ್ಲದೆ ಸ್ವಾತಂತ್ರ್ಯಪೂರ್ವದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಸಣ್ಣ (ಗುಡಿ)ಕೈಗಾರಿಕೆಗಳಿಂದಲೇ ದೇಶಕ್ಕೆ ಹೆಚ್ಚಿನ ಆದಾಯ ದೊರೆಯುತ್ತಿತ್ತು. ಆದರೆ ಬ್ರಿಟೀಷರ ಆಳ್ವಿಕೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಿದ್ದರಿಂದ ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ಸಿಗದೆ ನಶಿಸಿ ಹೋದವು ಎಂದು ಬೇಸರಿಸಿದರು.

      ದೇಶದಲ್ಲಿ ಪ್ರಸ್ತುತ ಶೇ.40ರಷ್ಟು ಸಣ್ಣ ಕೈಗಾರಿಕೋದ್ಯಮಿಗಳು ತಮ್ಮ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಕೃಷಿ ಮತ್ತು ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ಗಾಂಧೀಜಿಯವರ ಕನಸನ್ನು ಯುವ ಉದ್ಯಮಿಗಳು ನನಸಾಗಿಸಬೇಕು.
ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳು ಅಭಿವೃದ್ಧಿ ಹೊಂದಿದಲ್ಲಿ ಮಾತ್ರ ದೇಶದ ಕೈಗಾರಿಕಾವಲಯದ ಬೆಳವಣಿಗೆ ಸಾಧ್ಯ ಎಂದರು.

       ವಸ್ತುಪ್ರದರ್ಶನದಲ್ಲಿ 110 ಮಳಿಗೆಗಳಲ್ಲಿ ವಿವಿಧ ಕೈಗಾರಿಕೋದ್ಯಮಿ ಪ್ರದರ್ಶಕರು ಭಾಗವಹಿಸಿದ್ದು, ಅತ್ಯುತ್ತಮ ಪ್ರದರ್ಶಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೃಷಿ ಇಲಾಖೆ ಮಳಿಗೆಗೆ ಉತ್ತಮ ಡೆಕೋರೇಟೆಡ್ ಮಳಿಗೆ ಪ್ರಶಸ್ತಿ; ಉತ್ತಮ ಉತ್ಪನ್ನಗಳನ್ನು ಪ್ರದರ್ಶಿಸಿದ್ದ ಡಾಲ್ಫಿನ್ ಇರಿಗೇಷನ್, ಮಾರುತಿ ಕೃಷಿ ಉದ್ಯೋಗ, ಸಿಎಫ್‍ಸಿಎನ್ ಟೆಕ್, ಮಹಾಲಕ್ಷ್ಮಿ ಜ್ಯೂಸ್ ಎಕ್ಸ್‍ಟ್ರಾಕ್ಟ್, ಬಯೋಗ್ರೀನ್ ಅಗ್ರಿಲಿಂಕ್ ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಯಿತು.
ಅದೇ ರೀತಿ ಮೊದಲನೇ ಬಾರಿ ಪ್ರದರ್ಶನದಲ್ಲಿ ಭಾಗವಹಿಸಿದ್ದ ಉತ್ಪನ್ನ ಪ್ರದರ್ಶಕರಿಗೆ ಸ್ಟಿಲ್ಲರ್ ಹಾಗೂ ಪ್ರೋ ಹಾರ್ವೆಸ್ಟ್ ಸಂಸ್ಥೆಗೆ ಬೆಸ್ಟ್ ಇನ್ನೋವೇಟೀವ್ ಸ್ಟಾರ್ಟರ್ಸ್ ಪ್ರಶಸ್ತಿ; ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ, ಕರ್ನಾಟಕ ಆಗ್ರೋ ಕೆಮಿಕಲ್, ಭೀಷ್ಮ ಮೆಟಲ್ಸ್, ಎಂಇ ಡಿಸೈನರ್ಸ್, ಕವನ ಬಯೋ ಸಲ್ಯುಷನ್ಸ್, ಹ್ಯಾಂಡ್ ಮೇಡ್ ಅಡ್ಡ, ಮತ್ತಿತರ ಸಂಸ್ಥೆಗಳಿಗೆ ಬೆಸ್ಟ್ ಪ್ರಾಡಕ್ಟ್ ಸ್ಟಾರ್ಟರ್ಸ್ ಪ್ರಶಸ್ತಿ ನೀಡಲಾಯಿತು. ನಂತರ ಪ್ರದರ್ಶಕರ ಸಿ.ಡಿ.ಅನ್ನು ಬಿಡುಗಡೆ ಮಾಡಲಾಯಿತು.

      ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಲ್ ನಾಗರಾಜು, ಕಾಸಿಯಾ ಸಂಸ್ಥೆಯ ಅಧ್ಯಕ್ಷ ಆರ್. ರಾಜು, ಉಪಾಧ್ಯಕ್ಷ ಕೆ.ಬಿ. ಅರಸಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಜಿ. ರಾಜಗೋಪಾಲ, ಖಜಾಂಚಿ ಎಸ್.ಎಂ. ಹುಸೇನ್, ಸೌತ್ ಆಗ್ರೋ ಎಕ್ಸ್‍ಪೋ ವೈಸ್ ಛೇರ್ಮನ್ ಬೋರೆಗೌಡ, ಸಂಚಾಲಕ ಸದಾಶಿವ ಆರ್. ಅಮಿನ್, ಮತ್ತಿತರರು ಉಪಸ್ಥಿತರಿದ್ದರು.

(Visited 69 times, 1 visits today)
Previous Articleಕಪ್ಪುಪಟ್ಟಿ ಧರಿಸಿ ಡಿಸಿಸಿ ಬ್ಯಾಂಕ್ ನೌಕರರ ಪ್ರತಿಭಟನೆ!
Next Article ಕೃಷಿ ಯೋಜನೆಗಳನ್ನು ಪ್ರಾಮಾಣಿಕವಾಗಿ ರೈತರಿಗೆ ತಲುಪಿಸಲು ಸಿಇಓ ಸಲಹೆ!
News Desk Benkiyabale

Related Posts

ಜಲ್ಲಿಕ್ರಷರ್ ಕಾರ್ಮಿಕನ ಮೇಲೆ ಮಾಲೀಕ ರಾಜೂಗೌಡ, ಕೈ ಕಟ್ಟಿ ಮಾರಾಂತಿಕ ಹಲ್ಲೆ

October 10, 2026 6:10 pm news

ಶ್ರೀರಾಮ್ ಫೈನಾನ್ಸ್ನಿಂದ ೧೫೦೦ ಮಕ್ಕಳಿಗೆ ವಿದ್ಯಾರ್ಥಿವೇತನ

October 10, 2026 6:08 pm news

ಸ್ಮೋಕಿಂಗ್ ಜೋನ್ ಆದ ಟಿ ಅಂಗಡಿಗಳು

October 10, 2026 6:07 pm news
ತಾಜಾ ಸುದ್ಧಿಗಳು

ಜಲ್ಲಿಕ್ರಷರ್ ಕಾರ್ಮಿಕನ ಮೇಲೆ ಮಾಲೀಕ ರಾಜೂಗೌಡ, ಕೈ ಕಟ್ಟಿ ಮಾರಾಂತಿಕ ಹಲ್ಲೆ

October 10, 2026 6:10 pm
news

ಶ್ರೀರಾಮ್ ಫೈನಾನ್ಸ್ನಿಂದ ೧೫೦೦ ಮಕ್ಕಳಿಗೆ ವಿದ್ಯಾರ್ಥಿವೇತನ

October 10, 2026 6:08 pm
news

ಸ್ಮೋಕಿಂಗ್ ಜೋನ್ ಆದ ಟಿ ಅಂಗಡಿಗಳು

October 10, 2026 6:07 pm
news

ಪತ್ರಿಕೆಯ ವರದಿಯ ಫಲವಾಗಿ ಬಡವರ ಹಸಿವು ನೀಗಿಸಲು ಮುಂದಾದ ಆಡಳಿತ

October 09, 2026 5:43 pm
news

ಧರ್ಮಸ್ಥಳ ಸಂಸ್ಥೆ ವ್ಯಸನಮುಕ್ತಗೊಳಿಸಿ ಮನೆಯ ದೀಪ ಬೆಳಗುತ್ತಿದೆ

October 09, 2026 5:41 pm
news

ಕನ್ನಡ ರಾಜ್ಯೋತ್ಸವ: ಕನ್ನಡಾಂಬೆ ಭುವನೇಶ್ವರಿ ದೇವಿಯ ಮೆರವಣಿಗೆಗೆ ಡಿಸಿ ಸೂಚನೆ

October 09, 2026 5:39 pm
Our Youtube Channel
Our Picks

ಜಲ್ಲಿಕ್ರಷರ್ ಕಾರ್ಮಿಕನ ಮೇಲೆ ಮಾಲೀಕ ರಾಜೂಗೌಡ, ಕೈ ಕಟ್ಟಿ ಮಾರಾಂತಿಕ ಹಲ್ಲೆ

October 10, 2026 6:10 pm

ಶ್ರೀರಾಮ್ ಫೈನಾನ್ಸ್ನಿಂದ ೧೫೦೦ ಮಕ್ಕಳಿಗೆ ವಿದ್ಯಾರ್ಥಿವೇತನ

October 10, 2026 6:08 pm

ಸ್ಮೋಕಿಂಗ್ ಜೋನ್ ಆದ ಟಿ ಅಂಗಡಿಗಳು

October 10, 2026 6:07 pm

ಪತ್ರಿಕೆಯ ವರದಿಯ ಫಲವಾಗಿ ಬಡವರ ಹಸಿವು ನೀಗಿಸಲು ಮುಂದಾದ ಆಡಳಿತ

October 09, 2026 5:43 pm

ಧರ್ಮಸ್ಥಳ ಸಂಸ್ಥೆ ವ್ಯಸನಮುಕ್ತಗೊಳಿಸಿ ಮನೆಯ ದೀಪ ಬೆಳಗುತ್ತಿದೆ

October 09, 2026 5:41 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಜಲ್ಲಿಕ್ರಷರ್ ಕಾರ್ಮಿಕನ ಮೇಲೆ ಮಾಲೀಕ ರಾಜೂಗೌಡ, ಕೈ ಕಟ್ಟಿ ಮಾರಾಂತಿಕ ಹಲ್ಲೆ

By News Desk BenkiyabaleOctober 10, 2026 6:10 pm

ತುರುವೇಕೆರೆ: ತಾಲೂಕಿನ ಕೋಳಘಟ್ಟ ಗ್ರಾಮದ ಮಂಜುನಾಥ ಜಲ್ಲಿಕ್ರಷರ್ ಕಾರ್ಮಿಕನ ಮೇಲೆ ಕ್ರಷರ್ ಮಾಲೀಕ ರಾಜೂಗೌಡ ಕೈ ಕಟ್ಟಿ ಮಾರಾಂತಿಕ ಹಲ್ಲೆ…

ಶ್ರೀರಾಮ್ ಫೈನಾನ್ಸ್ನಿಂದ ೧೫೦೦ ಮಕ್ಕಳಿಗೆ ವಿದ್ಯಾರ್ಥಿವೇತನ

October 10, 2026 6:08 pm

ಸ್ಮೋಕಿಂಗ್ ಜೋನ್ ಆದ ಟಿ ಅಂಗಡಿಗಳು

October 10, 2026 6:07 pm

ಪತ್ರಿಕೆಯ ವರದಿಯ ಫಲವಾಗಿ ಬಡವರ ಹಸಿವು ನೀಗಿಸಲು ಮುಂದಾದ ಆಡಳಿತ

October 09, 2026 5:43 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.