ತುಮಕೂರು : ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿನೆ ; ಆರೋಪಿ ಅರೆಸ್ಟ್

ತುಮಕೂರು : 

       ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದ ಆರೋಪಿಯ ಬಧಿಸಲಾಗಿದೆ.

      ಸೌಮ್ಯ ( ಲಾವಣ್ಯ ಗೌಡ) ಬೆಂಗಳೂರಿನ ಕಡಬಗಲಿಯ ಜನಪ್ರಿಯ ಲೇಔಟ್’ನ ಸೌಮ್ಯ ( ಲಾವಣ್ಯ ಗೌಡ) ಎಂಬ ಆರೋಪಿಯು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಆಗಾಗ್ಗೆ ಬಂದು ಹೋಗುತ್ತಾ ತಾನು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತೇನೆಂದು ನಂಬಿಸಿ ನಿರುದ್ಯೋಗಿ ಯುವಕ ಮತ್ತು ಯುವತಿಯರಾದ ಬೆಂಗಳೂರಿನ ವಾಸಿಗಳಾದ ರಶ್ಮಿ, ರಾಜೇಶ್, ತಿಮ್ಮರಾಜು ಮತ್ತು ಸಂದೀಪ್ ಕುಮಾರ್ ಎಂಬುವವರಿಗೆ ನಂಬಿಸಿ ಅದಕ್ಕೆ ಪೂರಕವೆಂಬಂತೆ ಜಿಲ್ಲಾಧಿಕಾರಿಗಳ ಸಭಾ ನಡವಳಿಯ ಒಂದು ಪುಸ್ತಕವನ್ನು ತೋರಿಸಿ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಿ.ಸಿ, ಎ.ಡಿಸಿ, ಎ.ಸಿ ಮತ್ತು ಮುಜರಾಯಿ ಇಲಾಖೆಯ ನಿರ್ದೇಶಕರ ಆಪ್ತ ಸಹಾಯಕ ಹುದ್ದೆಗಳನ್ನು ಕೊಡಿಸುವುದಾಗಿ ಅವರುಗಳಿ೦ದ ಹಣ ಮತ್ತು ಮೂಲ ಆಂಕಪಟ್ಟಗಳನ್ನು ಪಡೆದು ಮೋಸ ಮಾಡಿದ್ದು, ಮೋಸ ಹೋದ ರಾಜೇಶ್ ಹಾಗೂ ಇತರರು ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ಕೆಲಸದ ಬಗ್ಗೆ ವಿಚಾರಿಸಲಾಗಿ ಅಲ್ಲಿ ಅವರಿಗೆ ಅಂತಹ ಯಾವುದೇ ಹುದ್ದೆಗಳು ಖಾಲಿ ಇಲ್ಲ ಹಾಗೂ ಸರ್ಕಾರದಿಂದ ಮಂಜೂರಾಗಿಲ್ಲ ಎಂದು ತಿಳಿಸಿದ ಮೇರೆಗೆ ರಾಜೇಶ್ ಹಾಗೂ ಇತರರು ನೀಡಿದ ದೂರಿನ ಮೇರೆಗೆ ಆರೋಪಿಯ ವಿರುದ್ದ ತುಮಕೂರು ನಗರ ಪೊಲೀಸ್ ಠಾಣಾ ಮೊ.ನಂ:19/2021 ಕಲಂ 406, 420 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿದೆ.

      ಪ್ರಕರಣದ ಆರೋಪಿಯ ಪತ್ತೆ ಬಗ್ಗೆ ಸಿಪಿಐ ನವೀನ್ ಬಿ. ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ತಂಡವು ಆರೋಪಿತಳಾದ ಆಧಾರ್ ಕಾರ್ಡ್ ಮಾಡಿಸುವ ಮತ್ತು ಸಾಲ ಕೊಡಿಸುವ ಏಜೆಂಟ್ ಕೆಲಸ ಮಾಡುತ್ತಿದ್ದ ಸೌಮ್ಯ @ ಲಾವಣ್ಯಳನ್ನು ಬಂಧಿಸಿ ಮೋಸ ಮಾಡಿದ 1,20,000/- ರೂ ಹಣ ಹಾಗೂ ನೊಂದ ನಿರುದ್ಯೋಗಿ ಯುವಕ ಮತ್ತು ಯುವತಿಯರ ಮೂಲ ಅಂಕಪಟ್ಟಿಗಳನ್ನು ಹಾಗೂ ಒಂದು ಮೊಬೈಲ್ ಫೋನ್ ಅನ್ನುವಶಪಡಿಸಿಕೊಂಡಿದೆ.

    ಪ್ರಕರಣದ ಆರೋಪಿಗಳ ಪತ್ತೆಗಾಗಿ ಶ್ರಮಿಸಿದ ಪೊಲೀಸರಿಗೆ ತುಮಕೂರು ಜಿಲ್ಲಾ  ಪೋಲೀಸ್
ಅಧೀಕ್ಷಕರಾದ ಡಾ|| ಕೆ. ವಂಶಿಕೃಷ್ಣ, ಐ.ಪಿ.ಎಸ್ ರವರು ಅಭಿನಂದಿಸಿರುತ್ತಾರೆ.

 

(Visited 96 times, 1 visits today)

Related posts

Leave a Comment