ಕೊಡಿಗೇನಹಳ್ಳಿ:

      ಬಿಜೆಪಿ ಅಭ್ಯಾರ್ಥಿ ಬಸವರಾಜು ಅವರನ್ನು ನಾವೇ ಕಾಂಗ್ರೇಸ್‍ನಿಂದ ಸಂಸದರನ್ನಾಗಿ ಮಾಡಿದ್ದೇವು ಈಗ ಕೋಮುವಾದಿ ಪಕ್ಷದಿಂದ ಮತ ಕೇಳಲು ಬರುತಿದ್ದಾರೆ ತುಮಕೂರು ಜಿಲ್ಲೆಗೆ ಅವರ ಕೂಡುಗೆ ಏನು ಎಂಬುದನ್ನು ತಿಳಿಸಲಿ ಎಂದು ಉಪ ಮುಖ್ಯಮಂತ್ರಿ ಡಾ||ಜಿ.ಪರಮೇಶ್ವರ್ ಪ್ರಶ್ನಿಸಿದರು.

      ತಾಲ್ಲೂಕಿನ ಪುರವರ ಗ್ರಾಮದಲ್ಲಿ ಮೈತ್ರಿ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿಯ ಕೋಮುವಾದಿ ಸರಕಾರ ಆಡಳಿತ ನಡೆಸುತಿದ್ದು ಬಡವರ ಪರ ಎಂದು ಪ್ರಧಾನಿ ಮೋದಿ ಸುಳ್ಳು ಹೇಳಿಕೊಂಡು ಮತ್ತೆ ಚುನಾವಣೆಗೆ ಬಂದಿದ್ದಾರೆ.

      ಆದರೆ ಬಿಜೆಪಿಯುವರ ಕೂಡುಗೆ ಜಿಲ್ಲೆಗೆ ಏನಿದು ಎಂದು ಮೂದಲು ತಿಳಿಸಲಿ, ದೇಶದ ಅಭಿವೃಧ್ಧಿಗೆ ಕಾಂಗ್ರೇಸ್ ಮತ್ತು ಮಹಾ ಘಟಬಂಧನ್‍ದಿಂದ ಮಾತ್ರ ಸಾಧ್ಯ, ಮಾಜಿ ಪ್ರಧಾನಿಗಳು ನಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿರುವುದು ನಮ್ಮೆಲ್ಲರ ಪುಣ್ಯವಾಗಿದ್ದು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತಗಳ ನೀಡುವ ಮೂಲಕ ಗೌಡರನ್ನು ಗೆಲ್ಲಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ತಿಳಿಸಿದರು.

      ಇಡೀ ದೇಶವೇ ತುಮಕೂರಿನತ್ತ ಮುಖ ಮಾಡಿ ನೋಡುತಿದ್ದೆ ಇದು ಕನ್ನಡಿಗರ ಹೆಮ್ಮೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗಾಗಿ ಜೆಡಿಎಸ್-ಕಾಂಗ್ರೇಸ್ ಮೈತ್ರಿಯಾಗಿ ಮಣ್ಣಿನ ಮಗನನ್ನು ಹೆಚ್ಚು ಮತಗಳನ್ನು ನೀಡಿ ಆಶ್ರೀವಾದಿಸಿದರೆ ಮೈತ್ರಿ ಸರಕಾರದಿಂದ ಸಾಮಾಜಿಕ ನ್ಯಾಯ ಲಬಿಸುತ್ತಿದ್ದು ಬಡವರ ಪರವಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರಿ ಸೌಲಭ್ಯ ಲಭಿಸುತ್ತದೆ ಎಂದು ಎಂದು ಮಾಜಿ ಶಾಸಕ ಸುಧಾಕರ್‍ಲಾಲ್ ತಿಳಿಸಿದರು.

      ಕೇಂದ್ರ ಸರಕಾರ ಕೇವಲ ಆದಾನಿ ಮತ್ತು ಅಂಬಾನಿಯವರ ಪರವಾಗಿ ನಡೆಯುತ್ತಿದೆ ಆದರೆ ದೇವೇಗೌಡರು ಪ್ರದಾನಿಯಾಗಿದ್ದಾಗ ಮಹಿಳಾ ಮೀಸಲಾತಿ ಜಾರಿಗೆ ತಂದಿದ್ದು ಇದರ ಜತೆಯಲ್ಲಿ ಕರ್ನಾಟಕದ ನೀರಾವರಿ ಯೋಜನೆಗಳ ಅಭಿವೃಧ್ಧಿಗೆ ಶ್ರಮಿಸಿದ್ದಾರೆ ಮುಂದೆ ಈ ಭಾಗದ ಆಭಿವೃದ್ಧಿಗೆ ಮತದಾರರು ಅಪಪ್ರಚಾರಕ್ಕೆ ಕಿವಿಕೊಡದೆ ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ಹೆಚ್‍ಡಿದೇವೇಗೌಡರನ್ನು ಗೆಲ್ಲಿಸಿ ಎಂದು ಪಶು ಸಂಗೋಪನಾ ಸಚಿವ ಡಾ||ನಾಡಗೌಡ ಮನವಿ ಮಾಡಿದರು.

      ಈ ಸಂದರ್ಭದಲ್ಲಿ ಸಚಿವ ಎಸ್‍ಆರ್ ಶ್ರೀನಿವಾಸ್,ಮಾಜಿ ಶಾಸಕ ನಾರಾಯಣ್, ಶಾಸಕ ಷಫೀ ಅಹಮದ್, ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ನೀರಾವರಿ ಹೋರಾಟಗಾರ ಎನ್‍ಹೆಚ್ ಕೋನಾರೆಡ್ಡಿ, ಜಿಪಂ ಸದಸ್ಯ ಕೊಂಡವಾಡಿ ತಿಮ್ಮಯ್ಯ, ಸುವರ್ಣಮ್ಮ, ರಾಜಣ್ಣ, ತಾಪಂ ಸದಸ್ಯರಾದ ಗೋಪಾಲಪ್ಪ, ವಿಜಯಮ್ಮ, ಸೌಭಾಗ್ಯಮ್ಮ, ಮುಖಂಡರಾದ ಗಂಕಾರನಹಳ್ಳಿ ರವಿಕುಮಾರ್, ಜಗಧೀಶ್, ಹನುಮಂತಾಜು, , ಮಲ್ಲಿಕಾರ್ಜುನ್, ಕಾಂತರಾಜು, ರಮೇಶ್ ಹಾಜರಿದ್ದರು.

(Visited 18 times, 1 visits today)