ತುಮಕೂರು:


ನಗರದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಶಂಭುಕುಮಾರ್ ಅವರನ್ನು ಅಮಾನತ್ತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ತುಮಕೂರು ನಗರ ಲೋಕೋಪಯೋಗಿ ಉಪ ವಿಭಾಗದ ಸಹಾಯಕ ಇಂಜಿನಿಯರ್ ಶಂಭುಕುಮಾರ್ ಅವರನ್ನು ಅಮಾನತ್ತು ಮಾಡಲಾಗಿದ್ದು, ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆಯ ಅಧೀನ ಕಾರ್ಯದರ್ಶಿರವರು ವರದಿ ಪಡೆದು ಅಮಾನತ್ತು ಆದೇಶವನ್ನು ಹೊರಡಿಸಿರುತ್ತಾರೆ.
ಸಹಾಯಕ ಇಂಜಿನಿಯರ್ ಮೇಲೆ ದಲಿತ ದೌರ್ಜನ್ಯ ಕಾಯ್ದೆ ಮತ್ತು ಕೊಲೆ ಯತ್ನದ ಪ್ರಕರಣ ದಾಖಲಾಗಿದ್ದು, ತುಮಕೂರು ಜಿಲ್ಲೆಯ ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷನನ್ನೇ ಹತ್ಯೆಗೈಯಲು ಮುಂದಾದಾಗ ತಪ್ಪಿಸಿಕೊಂಡ ಬಿಜೆಪಿ ಮುಖಂಡ ಬೆಂಗಳೂರು ನಗರದ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕ್ರಿಮಿನಲ್ ಮೊಕದ್ದಮೆ ದಾಖಲಾದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಶಂಭುಕುಮಾರ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಈ ಆರೋಪಿತ ಇಂಜಿನಿಯರ್ ಶಂಭುಕುಮಾರನ ಪತ್ತೆಗೆ ವಿಶೇಷ ತಂಡ ರಚಿಸಿ ಬಂಧಿಸುವ ಸಲುವಾಗಿ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿದ್ದರೂ ಸಹ ಇಲಾಖೆಯ ಕಣ್ಣಿಗೆ ಮಣ್ಣೆರಚಿ ಪ್ರಭಾವಿ ರಾಜಕಾರಣಿಗಳ ಅಭಯಾಸ್ತದಿಂದ ನಿರೀಕ್ಷಣಾ ಜಾಮೀನು ಪಡೆದು ಕರ್ತವ್ಯಕ್ಕೆ ಹಾಜರಾಗಿದ್ದ.
ಕರ್ತವ್ಯಕ್ಕೆ ಹಾಜರಾದ ಒಂದು ವಾರದಲ್ಲೇ ಅಮಾನತ್ತಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕೇವಲ ಅನೈತಿಕ ಸಂಬಂಧಕ್ಕಾಗಿ ಕೇಸ್ ಹಾಕಿಸಿಕೊಂಡು ಪೊಲೀಸ್ ಇಲಾಖೆಗೆ ತಲೆಮರೆಸಿಕೊಂಡದ್ದು ಸಾಲದೆಂಬಂತೆ ಇದೀಗ ತನ್ನ ಕೆಲಸದಿಂದಲೂ ಅಮಾನತ್ತಾದ ಘಟನೆ ತುಂಬಾ ತಡವಾಗಿ ಹೊರಬಿದ್ದಿದೆ.

(Visited 494 times, 1 visits today)