ತುಮಕೂರು : 2.5 ಕೆ.ಜಿ.ಗಾಂಜಾ ವಶ!!

 ತುಮಕೂರು :

      ದ್ವಿಚಕ್ರ ವಾಹನದಲ್ಲಿ ಅಪರಿಚಿತ ವ್ಯಕ್ತಿಗಳಿಬ್ಬರು ಗಾಂಜಾ ಮಾರಾಟ ಮಾಡುತ್ತಿರುವಾಗ ಗಾಂಜಾ ಸಮೇತ ಸಿಕ್ಕಿಬಿದ್ದಿದ್ದಾರೆ.

       ನಗರದ ಮಾರುತಿ ಟಾಕೀಸ್ ಮತ್ತು ಟಿ.ಹೆಚ್.ಎಸ್. ಆಸ್ಪತ್ರೆಯ ಪಕ್ಕದಲ್ಲಿರುವ ಕಾಂಪ್ಲೆಕ್ಸ್ ಮುಂಭಾಗದಲ್ಲಿ ದ್ವಿಚಕ್ರ ವಾಹನದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಗಾಂಜಾ ಮಾರುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಸಿಪಿಐ ಚಂದ್ರಶೇಖರ್ ರವರು ದಾಳಿ ನಡೆಸಿ ಇಬ್ಬರು ಆರೋಪಿಗಳಾದ ಇರ್ಫಾನ್ ಮತ್ತು ಜಿತೇಂದ್ರ ರ ಬಳಿಯಿದ್ದ 2.5ಕೆ.ಜಿ.ಗಾಂಜಾ ಸಮೇತ ವಶಪಡಿಸಿಕೊಂಡು, ಆರೋಪಿಗಳನ್ನು ಬಂಧಿಸಲಾಗಿದೆ.

       ಆರೋಪಿಗಳ ಪತ್ತೆಗೆ ಶ್ರಮಿಸಿದ ಸಿಪಿಐ ಕೆ.ಆರ್. ಚಂದ್ರಶೇಖರ್, ಪಿಎಸ್‍ಐ ವಿಜಯಲಕ್ಷ್ಮಿ ಹಾಗೂ ಸಿಬ್ಬಂಧಿ ವರ್ಗವನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದಿಸಿರುತ್ತಾರೆ.

(Visited 21 times, 1 visits today)

Related posts

Leave a Comment