ತುಮಕೂರು:

      ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 36 ಸಾಧಕರನ್ನು ಪ್ರಸಕ್ತ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ ತಿಳಿಸಿದ್ದಾರೆ.

      ಪ್ರಶಸ್ತಿಗೆ ಆಯ್ಕೆಯಾದವರಿಗೆ ನವೆಂಬರ್ 1ರಂದು ಸಂಜೆ 4 ಗಂಟೆಗೆ ನಗರದ ಗಾಜಿನಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಂಗಭೂಮಿ, ಪತ್ರಿಕೋದ್ಯಮ, ಸಾಹಿತ್ಯ, ಕ್ರೀಡೆ, ಜಾನಪದ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಪ್ರಶಸ್ತಿಗೆ ಆಯ್ಕೆಯಾದವರ ಕ್ಷೇತ್ರವಾರು ಪಟ್ಟಿ ಇಂತಿದೆ.

ರಂಗಭೂಮಿ ಕ್ಷೇತ್ರ:

      ಶಿರಾ ತಾಲ್ಲೂಕು ಕಟಾವೀರನಹಳ್ಳಿ ಗ್ರಾಮದ ಜಿ.ಕೆ.ರಂಗನಾಥ, ತುಮಕೂರು ತಾಲ್ಲೂಕು ಮರಳೂರಿನ ಬಿ.ರಾಮಂಜಿನೇಯ, ಭೈರವೇಶ್ವರ ನಗರದ ಡಿ.ಎನ್.ನವಿಲೇಶ್, ಗೂಳೂರಿನ ಜಿ.ಕೆ.ರಂಗಸ್ವಾಮಯ್ಯ, ತುರುವೇಕೆರೆಯ 11ನೇ ವಾರ್ಡ್‍ನ ಎಂ.ಡಿ.ಶಿವನಂಜಪ್ಪ, ತುಮಕೂರು ನಗರ ಶಿರಾ ಗೇಟ್ ಟೂಡಾ ಲೇಔಟ್‍ನ ಹೆಚ್.ಮಂಜುಳ.

ಪತ್ರಿಕಾರಂಗ ಕ್ಷೇತ್ರ:

      ತುರುವೇಕೆರೆ ತಾಲೂಕು ಬ್ರಾಹ್ಮಣರ ಬೀದಿಯ ವಿಜಯಕರ್ನಾಟಕ ವರದಿಗಾರ ಆರ್.ಸತ್ಯನಾರಾಯಣ್, ಕುಣಿಗಲ್ ಪಟ್ಟಣದ ಸಂಜೆವಾಣಿ ದಿನಪತ್ರಿಕೆಯ ರಾಮಚಂದ್ರ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಬ್ರಾಹ್ಮಣರ ಬೀದಿಯ ವಿಜಯಕರ್ನಾಟಕ ವರದಿಗಾರ ವಿ.ಆರ್.ಮೇರುನಾಥ್, ತುಮಕೂರಿನ ಪ್ರಜಾಪ್ರಗತಿ ವರದಿಗಾರ ಎಲ್. ಚಿಕ್ಕೀರಪ್ಪ, ತಿಪಟೂರು ತಾಲೂಕು ಕೆ.ಆರ್.ಬಡಾವಣೆಯ ಉದಯವಾಣಿ ವರದಿಗಾರ ರಂಗಸ್ವಾಮಿ.

ಗಡಿನಾಡು ಸೇವೆ:

      ಪಾವಗಡ ತಾಲ್ಲೂಕಿನ ಕಾರನಾಗಪ್ಪ.

ಸಾಹಿತ್ಯ ಸೇವೆ:

      ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಎನ್.ಇಂದಿರಮ್ಮ ಹಾಗೂ ತುರುವೇಕೆರೆ ತಾಲ್ಲೂಕಿನ ಕೆ.ಪಿ.ನಟರಾಜ್.

 ಸಮಾಜ ಸೇವೆ:

      ಗುಬ್ಬಿ ತಾಲ್ಲೂಕಿನ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ|| ಡಿ.ಎಸ್.ಸುರೇಶ್, ತುಮಕೂರಿನ ಬನಶಂಕರಿಯ ರಾಮಕ್ಕ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೆ.ಆರ್.ಬಸವರಾಜ್ ಪಂಡಿತ್, ತುಮಕೂರು ತಾಲ್ಲೂಕು ಗಂಗನಹಳ್ಳಿಯ ವಿಕಾಸ್ ಎಜುಕೇಶನ್ ಅಕಾಡೆಮಿಯ ಅಧ್ಯಕ್ಷ ಆರ್.ದೊಡ್ಡಲಿಂಗಪ್ಪ, ತುಮಕೂರು ನಗರದ ಸಪ್ತಗಿರಿ ಬಡಾವಣೆಯ ಟಿ.ಆರ್.ರಘೋತ್ತಮರಾವ್.\

 ಸಂಗೀತ: 

      ತುಮಕೂರು ನಗರ ನೃಪತುಂಗ ಬಡಾವಣೆಯ ಬಿ.ಎಸ್.ಮಲ್ಲಿಕಾರ್ಜುನ, ಉಪ್ಪಾರಹಳ್ಳಿಯ ಹೆಚ್.ಜಿ.ಬಸವರಾಜು.

ಜಾನಪದ:

      ಮಧುಗಿರಿ ತಾಲ್ಲೂಕು ಕರಡಿ ತಿಮ್ಲಾಪುರ ಗ್ರಾಮದ ಕೋಟಮ್ಮ, ತುಮಕೂರು ತಾಲ್ಲೂಕು ಕುಂಕುಮನಹಳ್ಳಿಯ ಚಿಕ್ಕಉಡೇದಯ್ಯ, ಶಿರಾ ತಾಲ್ಲೂಕು ಬರಗೂರಿನ ನಿಂಗಮ್ಮ, ತುಮಕೂರು ತಾಲ್ಲೂಕು ಭೀಮಸಂದ್ರದ ಟಿ.ಜೆ.ಪರಮೇಶ್.

ವಿಶೇಷ ಸೇವೆ:

      ತಿಪಟೂರು ಪಟ್ಟಣದ ಎಸ್. ಎಸ್.ಗಾರ್ಡನ್‍ನ ಕೆ.ಆರ್.ಜಗದೀಶ್ ರಾವ್.

ಕ್ರೀಡೆ:

      ತುಮಕೂರು ತಾಲ್ಲೂಕು ಮೆಳೇಹಳ್ಳಿ ಗ್ರಾಮದ ಸಿದ್ಧಗಂಗಯ್ಯ, ಎಸ್.ಐ.ಟಿ. ಬಡಾವಣೆಯ ಸಿ. ಜಗದೀಶ್.

ಚಿತ್ರಕಲೆ:

  ತುಮಕೂರು ನಗರದ ಸಪ್ತಗಿರಿ ಬಡಾವಣೆಯ ಬಿ. ಶಿವಾನಂದಾರಾಧ್ಯ, ಮಹಾಲಕ್ಷ್ಮೀ ನಗರದ ಎನ್. ಎ. ಜಯಾಭಾಸ್ಕರಾಚಾರ್.

ಶಿಕ್ಷಣ ಸೇವೆ:

       ತುಮಕೂರು ತಾಲ್ಲೂಕು ಚಿಕ್ಕನಾರವಂಗಲದ ಡಾ|| ಎಲ್.ಮಣಿಗಯ್ಯ.

 ವೈದ್ಯಕೀಯ ಸೇವೆ;

      ತುರುವೇಕೆರೆ ತಾಲ್ಲೂಕು ಜನತಾ ಕ್ಲಿನಿಕ್‍ನ ಡಾ.ಎ.ನಾಗರಾಜ್.

ಸಂಘಟನೆ/ಕನ್ನಡಪರ ಹೋರಾಟ:

      ತಿಪಟೂರು ತಾಲ್ಲೂಕಿನ ಕಂದೂರು ಗ್ರಾಮದ ಎಂ.ಕುಂದೂರು, ತುಮಕೂರಿನ ಪ್ರಸನ್ನ(ಪಚ್ಚಿ). ಎಸ್‍ಐಟಿ ಬಡಾವಣೆಯ ಆರ್. ರಂಜನ್, ಸಿದ್ದಗಂಗಾ ಬಡಾವಣೆಯ ಕೆ. ಉಮಾಶಂಕರ್.

 

(Visited 50 times, 1 visits today)