ತುಮಕೂರು :

      ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತುಮಕೂರು ವಿಭಾಗದ ಜಿಲ್ಲಾ ವ್ಯಾಪ್ತಿಯಿಂದ ತಾಲ್ಲೂಕು ಕೇಂದ್ರಗಳಿಗೆ ಹಾಗೂ ತಾಲ್ಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಕ್ಕೆ ಕೊನೆಯ ವಾಹನಗಳ ಕಾರ್ಯಾಚರಣೆಯ ಸಮಯ ನಿಗಧಿಪಡಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್ ಅವರು ತಿಳಿಸಿದ್ದಾರೆ.

       ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಣಾಮದಿಂದ ದಿನಾಂಕ 31-05-2020ರವರೆಗೆ ಜಾರಿಯಾಗಿದ್ದ 04 ನೇ ಹಂತದ ಲಾಕ್ ಡೌನ್ ನ್ನು ಸರ್ಕಾರವು ದಿನಾಂಕ-01/06/2020 ರಿಂದ ಜಾರಿಗೆ ಬರುವಂತೆ ವಿನಾಯಿತಿ ನೀಡಿ 5 ನೇ ಹಂತದ ಲಾಕ್‍ಡೌನ್‍ನ್ನು ಜಾರಿಗೊಳಿಸಿರುವಂತೆ ಕಾರ್ಯಾಚರಣೆಯನ್ನು ನಡೆಸುತ್ತಿರುವುದು ಸರಿಯಷ್ಠೆ. ಸರ್ಕಾರದ ನಿರ್ದೇಶನದಂತೆ ರಾತ್ರಿ 09:00 ಗಂಟೆಯಿಂದ ಬೆಳಗ್ಗೆ 05:00 ಗಂಟೆಯವರೆಗೆ ಕಫ್ರ್ಯೂ ಜಾರಿಯಲ್ಲಿದ್ದು ಬೆಳಗ್ಗೆ 05:00 ಗಂಟೆಯಿಂದ ರಾತ್ರಿ 09:00 ಗಂಟೆಯವರೆಗೆ ವಾಹನ ಸಂಚಾರ ಇರುತ್ತದೆ.

      ತುಮಕೂರು ಜಿಲ್ಲಾ ಕೇಂದ್ರದಿಂದ ತಾಲ್ಲೂಕು ಕೇಂದ್ರ ಹಾಗೂ ತಾಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ಕೊನೆಯ ವಾಹನಗಳ ಸಮಯ ಇಂತಿದೆ. ಜಿಲ್ಲಾ ಕೇಂದ್ರದಿಂದ ತಿಪಟೂರು ತಾಲೂಕಿಗೆ ವಾಹನ ನಿರ್ಗಮನ ಸಮಯ-19:30; ತಿಪಟೂರು ತಾಲೂಕಿನಿಂದ ಜಿಲ್ಲಾ ಕೇಂದ್ರಕ್ಕೆ ವಾಹನ ನಿರ್ಗಮನ ಸಮಯ-19:00; ಜಿಲ್ಲಾ ಕೇಂದ್ರದಿಂದ ಕುಣಿಗಲ್ ತಾಲೂಕಿಗೆ ವಾಹನ ನಿರ್ಗಮನ ಸಮಯ-19:30; ಕುಣಿಗಲ್ ತಾಲೂಕಿನಿಂದ ಜಿಲ್ಲಾ ಕೇಂದ್ರಕ್ಕೆ ವಾಹನ ನಿರ್ಗಮನ ಸಮಯ-19:15; ಜಿಲ್ಲಾ ಕೇಂದ್ರದಿಂದ ತುರುವೇಕೆರೆ ತಾಲೂಕಿಗೆ ವಾಹನ ನಿರ್ಗಮನ ಸಮಯ-18:30; ತುರುವೇಕೆರೆ ತಾಲೂಕಿನಿಂದ ಜಿಲ್ಲಾ ಕೇಂದ್ರಕ್ಕೆ ವಾಹನ ನಿರ್ಗಮನ ಸಮಯ-19:00; ಜಿಲ್ಲಾ ಕೇಂದ್ರದಿಂದ ಚಿಕ್ಕನಾಯಕನಹಳ್ಳಿ ತಾಲೂಕಿಗೆ ವಾಹನ ನಿರ್ಗಮನ ಸಮಯ-19:15; ಚಿಕ್ಕನಾಯಕನಹಳ್ಳಿ ತಾಲೂಕಿನಿಂದ ಜಿಲ್ಲಾ ಕೇಂದ್ರಕ್ಕೆ ವಾಹನ ನಿರ್ಗಮನ ಸಮಯ-19:00; ಜಿಲ್ಲಾ ಕೇಂದ್ರದಿಂದ ಶಿರಾ ತಾಲೂಕಿಗೆ ವಾಹನ ನಿರ್ಗಮನ ಸಮಯ-20;00; ಶಿರಾ ತಾಲೂಕಿನಿಂದ ಜಿಲ್ಲಾ ಕೇಂದ್ರಕ್ಕೆ ವಾಹನ ನಿರ್ಗಮನ ಸಮಯ-19:30; ಜಿಲ್ಲಾ ಕೇಂದ್ರದಿಂದ ಪಾವಗಡ ತಾಲೂಕಿಗೆ ವಾಹನ ನಿರ್ಗಮನ ಸಮಯ-19:00; ಪಾವಗಡ ತಾಲೂಕಿನಿಂದ ಜಿಲ್ಲಾ ಕೇಂದ್ರಕ್ಕೆ ವಾಹನ ನಿರ್ಗಮನ ಸಮಯ-18;15; ಜಿಲ್ಲಾ ಕೇಂದ್ರದಿಂದ ಕೊರಟಗೆರೆ ತಾಲೂಕಿಗೆ ವಾಹನ ನಿರ್ಗಮನ ಸಮಯ-19:30; ಕೊರಟಗೆರೆ ತಾಲೂಕಿನಿಂದ ಜಿಲ್ಲಾ ಕೇಂದ್ರಕ್ಕೆ ವಾಹನ ನಿರ್ಗಮನ ಸಮಯ-19:30; ಜಿಲ್ಲಾ ಕೇಂದ್ರದಿಂದ ಮಧುಗಿರಿ ತಾಲೂಕಿಗೆ ವಾಹನ ನಿರ್ಗಮನ ಸಮಯ-19:15; ಮಧುಗಿರಿ ತಾಲೂಕಿನಿಂದ ಜಿಲ್ಲಾ ಕೇಂದ್ರಕ್ಕೆ ವಾಹನ ನಿರ್ಗಮನ ಸಮಯ-19:15; ಜಿಲ್ಲಾ ಕೇಂದ್ರದಿಂದ ಗುಬ್ಬಿ ತಾಲೂಕಿಗೆ ವಾಹನ ನಿರ್ಗಮನ ಸಮಯ-20;00; ಗುಬ್ಬಿ ತಾಲೂಕಿನಿಂದ ಜಿಲ್ಲಾ ಕೇಂದ್ರಕ್ಕೆ ವಾಹನ ನಿರ್ಗಮನ ಸಮಯ-19:30 ಸಮಯ ನಿಗಧಿಪಡಿಸಲಾಗಿದೆ.

      ತುಮಕೂರು ವಿಭಾಗದ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನಿಂಗ್‍ಗೆ ಒಳಪಡಿಸಲಾಗುತ್ತಿದ್ದು, ಸಾರ್ವಜನಿಕ ಪ್ರಯಾಣಿಕರ ಅನೂಕೂಲಕ್ಕಾಗಿ ಸಂಸ್ಥೆಯ ಬಸ್ ನಿಲ್ಧಾಣಗಳು ಇಲ್ಲದ ಹೋಬಳಿ ಕೇಂದ್ರಗಳು ಹಾಗೂ ಜಂಕ್ಷನ್ ಪಾಯಿಂಟ್‍ಗಳಾದ ಹುಳಿಯಾರ್, ಮಾಯಸಂದ್ರ, ಕೆ.ಬಿ.ಕ್ರಾಸ್, ಕೊಂಡ್ಲಿಕ್ರಾಸ್, ಕ್ಯಾತಸಂದ್ರ, ದೊಡ್ಡಾಲದಮರ, ಕಳ್ಳಂಬೆಳ್ಳ ಹಾಗೂ ಬಡವನಹಳ್ಳಿ ಮುಖ್ಯ ಕೇಂದ್ರಗಳಲ್ಲಿ ಸಂಸ್ಥೆಯ ವತಿಯಿಂದ ಸಿಬ್ಬಂದಿಗಳೊಂದಿಗೆ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು/ ಪ್ರಯಾಣಿಸಲು ಅನೂಕೂಲ ಕಲ್ಪಿಸಲಾಗಿದೆ.

       ತುಮಕೂರು ನಗರ ವ್ಯಾಪ್ತಿಯಲ್ಲಿ ನಗರ ಸಾರಿಗೆಗಳನ್ನು ಪ್ರತಿ ಒಂದು ಗಂಟೆಗೊಮ್ಮೆ ಬೆಳಗ್ಗೆ 07:00 ರಿಂದ ಸಂಜೆ 19:00 ಗಂಟೆಯವರೆಗೆ ತುಮಕೂರು ಬಸ್ ನಿಲ್ದಾಣದಿಂದ ಕ್ಯಾತ್ಸಂದ್ರ; ತುಮಕೂರು ಬಸ್ ನಿಲ್ದಾಣದಿಂದ ಶೆಟ್ಟಿಹಳ್ಳಿ; ತುಮಕೂರು ಬಸ್ ನಿಲ್ದಾಣದಿಂದ ಗೂಳರಿವೆ; ತುಮಕೂರು ಬಸ್ ನಿಲ್ದಾಣದಿಂದ ಬೆಳಗುಂಬ ಮಾರ್ಗಗಳಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

(Visited 16 times, 1 visits today)