ತುಮಕೂರು : ಡಿಜಿಟಲ್ ಲೈಬ್ರರಿ ಬಳಸಿಕೊಳ್ಳಲು ಭೂಬಾಲನ್ ಮನವಿ!!

ತುಮಕೂರು:

      ಸ್ಮಾರ್ಟ್ ಸಿಟಿ ಅಭಿಯಾನದಡಿ ಈಗಾಗಲೇ ಆರಂಭಿಸಿರುವ ಡಿಜಿಟಲ್ ಲೈಬ್ರರಿ ವ್ಯವಸ್ಥೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಭೂಬಾಲನ್ ಓದುಗರಲ್ಲಿ ಮನವಿ ಮಾಡಿದ್ದಾರೆ.

      ಕೋವಿಡ್-19 ಸೋಂಕು ಹರಡದಂತೆ ದೇಶದಾದ್ಯಂತ ಘೋಷಿಸಿರುವ ಲಾಕ್‍ಡೌನ್ ಸಂದರ್ಭದಲ್ಲಿ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಮಕ್ಕಳು, ವಯಸ್ಕರು, ವೃದ್ಧರು ಸೇರಿದಂತೆ ಎಲ್ಲಾ ರೀತಿಯ ಓದುಗರು ಈ ಡಿಜಿಟಲ್ ಲೈಬ್ರರಿಯ ಸದಸ್ಯತ್ವ ಉಚಿತವಾಗಿ ಪಡೆಯಬಹುದಾಗಿದೆ.

        ಡಿಜಿಟಲ್ ಲೈಬ್ರರಿಗೆ ವಿಶ್ವದ ಯಾವುದೇ ಸ್ಥಳದಿಂದ ಪ್ರವೇಶ ಪಡೆಯಬಹುದಾಗಿದೆ. ಈ ಲೈಬ್ರರಿಯಲ್ಲಿ 5000ಕ್ಕಿಂತ ಹೆಚ್ಚು ಇ-ಪುಸ್ತಕ, 3ಲಕ್ಷಕ್ಕಿಂತ ಹೆಚ್ಚು ಇ-ಮ್ಯಾಗಜೀನ್, 250ಕ್ಕಿಂತ ಹೆಚ್ಚು ಇ-ದಿನಪತ್ರಿಕೆ, ದೇಶದ ಅತ್ಯುತ್ತಮ ವೃತ್ತ ಪತ್ರಿಕೆಗಳ ಸಂಕ್ಷಿಪ್ತ ವಾಣಿಜ್ಯ ವರದಿಗಳು ಲಭ್ಯವಿರುತ್ತವೆ. ಓದುಗರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

       ಡಿಜಿಟಲ್ ಲೈಬ್ರರಿ ಸದಸ್ಯತ್ವ ಹೊಂದಲು  https://tumakurudigitallibrary.in/ Android App Name (Google Play Store): E-Bhandara ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

(Visited 10 times, 1 visits today)

Related posts