ತುಮಕೂರು:


ಮಧುಗಿರಿ ಬೆ.ವಿ.ಕಂ. ವ್ಯಾಪ್ತಿಯಲ್ಲಿನ ಮಧುಗಿರಿ, ಕೊಡಿಗೇನಹಳ್ಳಿ, ಕೊರಟಗೆರೆ, ಶಿರಾ ನಗರ, ಶಿರಾ ಗ್ರಾಮೀಣ, ಪಾವಗಡ ಉಪವಿಭಾಗಗಳಲ್ಲಿ 438363 ಗ್ರಾಹಕರಿಂದ ಒಟ್ಟು 366 ವಿದ್ಯುತ್ ಮಾರ್ಗಗಳಿಂದ 16520.34 ಕಿ.ಮೀ. ಉದ್ದದ 11ಕೆವಿ ಮಾರ್ಗ ಮತ್ತು 24985.99 ಕಿ.ಮೀ. ಎಲ್.ಟಿ. ಮಾರ್ಗ ಮತ್ತು 31255 ಸಂಖ್ಯೆಯ ವಿವಿಧ ಸಾಮಥ್ರ್ಯದ ಪರಿವರ್ತಕಗಳು ಬರುತ್ತಿರುವುದರಿಂದ ಸಾರ್ವಜನಿಕರು ಈ ಕೆಳಕಂಡ ನಿಯಮಗಳನ್ನು ಪಾಲಿಸಬೇಕು ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ಸೈಯದ್ ಮಹಮೂದ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಮಳೆಗಾಲ ಪ್ರಾರಂಭವಾಗಿರುವುದರಿಂದ ಭಾರಿ ಗಾಳಿ ಮತ್ತು ಮಳೆಗೆ ಮರಗಿಡಗಳು ಬೆ.ವಿ.ಕಂ.ನ ಮಾರ್ಗಗಳ ಮೇಲೆ ಬಿದ್ದು, ತಂತಿಗಳು ತುಂಡಾಗಿ ಅಪಾಯವಾಗುವ ಸಂಭವವಿದ್ದು, ಮೇಲ್ಕಂಡ ಶಾಖೆಗೆ ಒಳಪಡುವ ಸಾರ್ವಜನಿಕರು ಮಾರ್ಗಗಳ ಕೆಳಗೆ ತೋಟಗಳನ್ನು ನಿರ್ಮಿಸುವುದು, ಕಟ್ಟಡ ನಿರ್ಮಾಣ ಕೆಲಸ, ವಿದ್ಯುತ್ ಕಂಬಗಳಿಗೆ ತಂತಿ/ಹಗ್ಗ ಕಟ್ಟಿ ಬಟ್ಟೆ ಒಣಗಿಸುವುದು, ಸಾಕು ಪ್ರಾಣಿಗಳನ್ನು ಕಟ್ಟುವುದು, ಮನೆಗಳಿಗೆ ಅನಧೀಕೃತ ವಿದ್ಯುತ್ ಸಂಪರ್ಕ ಪಡೆಯಲು ಕೊಕ್ಕೆ ಹಾಕುವುದು.
ಹುಲ್ಲಿನ ಬಣವೆ ಹಾಕುವುದು, ವಿದ್ಯುತ್ ಕಂಬಗಳಿಗೆ ಹಾಕಿರುವ ಆಧಾರ ತಂತಿಗಳನ್ನು ತೆಗೆಯುವುದು, ಇತ್ಯಾದಿ ಕೆಲಸಗಳನ್ನು ಮಾಡುವುದರಿಂದ ಅಪಾಯಗಳು ಹೆಚ್ಚಾಗುವ ಸಾಧ್ಯತೆಗಳಿದ್ದು, ಇಂತಹ ಅಪಾಯಕಾರಿ ಕೆಲಸಗಳನ್ನು ಕಡ್ಡಾಯವಾಗಿ ಮಾಡಬಾರದು ಮತ್ತು ಅನಧೀಕೃತ ವ್ಯಕ್ತಿಗಳಿಂದ ಯಾವುದೇ ರೀತಿಯ ವಿದ್ಯುತ್ ಕೆಲಸಗಳನ್ನು ಮಾಡಿಸಬಾರದೆಂದು ಸೂಚನೆ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 1912 ಅಥವಾ ಮಧುಗಿರಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಮಾಯಕಣ್ಣ ನಾಯಕ್ ಮೊ.ಸಂ. 9448279053/ 08137-284376, ಕೊಡಿಗೇನಹಳ್ಳಿ ಸ.ಕಾ.ನಿ.ಇಂ(ವಿ) ಪಂಪಾಪತಿ ಮೊ.ಸಂ. 9448279054/ 08137-279868, ಶಿರಾ ನಗರ ಸ.ಕಾ.ನಿ.ಇಂ(ವಿ) ಶಾಂತರಾಜು ಮೊ.ಸಂ. 9448279055/ 08135-277221, ಶಿರಾ ಗ್ರಾಮೀಣ ಸ.ಕಾ.ನಿ.ಇಂ(ವಿ) ಗೋವಿಂದರಾಯ ಮೊ.ಸಂ. 9448279056/ 08135-275887, ಕೊರಟಗೆರೆ ಸ.ಕಾ.ನಿ.ಇಂ(ವಿ) ಬಿ.ಜಿ. ಅರಸುರಾಜು ಮೊ.ಸಂ. 9448279058ನ್ನು ಸಂಪರ್ಕಿಸಬಹುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(Visited 3 times, 1 visits today)