ನಗರದಲ್ಲಿ ಮೆಟ್ರೋ ಮಳಿಗೆ ಆರಂಭವಾಗಿರುವುದು ಗ್ರಾಹಕರಿಗೆ ಅನುಕೂಲ

ತುಮಕೂರು : 

      ನಗರದ ಮಂಡಿಪೇಟೆಯಲ್ಲಿ ಮೆಟ್ರೋ ಭಾರತದ 28ನೆಯ ಮತ್ತು ಕರ್ನಾಟಕದ 7ನೇ ಮೆಟ್ರೋ ಹೋಲ್‍ಸೇಲ್ ಮಳಿಗೆಯನ್ನು ಆರಂಭಿಸಲಾಗಿದೆ.

      ದೇಶದ ಅತಿದೊಡ್ಡ ಸಂಘಟಿತ ಹೋಲ್‍ಸೇಲ್ ಮಾರಾಟಗಾರ ಮತ್ತು ಆಹಾರದ ಪರಿಣಿತಿ ಹೊಂದಿರುವ ಮೆಟ್ರೋ ಕ್ಷಾಶ್ ಅಂಡ್ ಕ್ಯಾರಿ ನಗರದಲ್ಲಿ ಆರಂಭಿಸಿರುವ ಮಳಿಗೆಯನ್ನು ಶಾಸಕ ಜಿ.ಬಿ. ಜ್ಯೋತಿಗಣೇಶ್ ಉದ್ಘಾಟಿಸಿದರು.

      ನಂತರ ಮಾತನಾಡಿದ ಅವರು, ನಗರದಲ್ಲಿ ಮೆಟ್ರೋ ಮಳಿಗೆ ಆರಂಭವಾಗಿರುವುದು ಗ್ರಾಹಕರಿಗೆ ತುಂಬಾ ಅನುಕೂಲವಾಗುತ್ತದೆ. ಬೆಂಗಳೂರಿನ ರಾಜಾಜಿನಗರದಲ್ಲಿ ಮೆಟ್ರೋ ಸ್ಟೋರ್‍ಗೆ ಹೋಗಿ ಹೋಲ್‍ಸೇಲ್‍ನಲ್ಲಿ ಸರಕುಗಳನ್ನು ತರುವುದು ತಪ್ಪಿದಂತಾಗಿದೆ ಎಂದರು.
ಮಂಗಳೂರು, ಹುಬ್ಬಳ್ಳಿಯಲ್ಲಿ ಮೆಟ್ರೋ ಹೋಲ್‍ಸೇಲ್ ಮಳಿಗೆ ಆರಂಭಿಸಲಾಗಿಲ್ಲ. ಬದಲಾಗಿ ತುಮಕೂರಿನಲ್ಲಿ ಆರಂಭಿಸಿರುವುದು ದಿನೇ ದಿನೇ ಬೆಳೆಯುತ್ತಿರುವ ತುಮಕೂರಿನ ಪ್ರಗತಿಗೆ ಪೂರಕವಾಗಲಿದೆ ಎಂದರು.

       ಮೆಟ್ರೋ ಆರಂಭದಿಂದ ಎಲ್ಲರಿಗೂ ಎಲ್ಲ ರೀತಿಯ ವಸ್ತುಗಳನ್ನು ಖರೀದಿಸಲು ಅನುಕೂಲಕರವಾಗಿದೆ ಎಂದು ಅವರು ಹೇಳಿದರು.
ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಬೆಂಗಳೂರಿಗೆ ಪರ್ಯಾಯ ನಗರವಾಗಿ ತುಮಕೂರು ಬೆಳೆಯುತ್ತಿದೆ. ವಸಂತನರಸಾಪುರದಲ್ಲಿ ಕೈಗಾರಿಕಾ ವಲಯ ಸ್ಥಾಪನೆಯಾದ ಮೇಲೆ ನಗರಕ್ಕೆ ತನ್ನದೇ ಆದ ಭವಿಷ್ಯ ರೂಪುಗೊಳ್ಳುತ್ತಿದೆ. ಅಲ್ಲದೆ ಕೇವಲ 28 ಕಿ.ಮೀ. ಅಂತರದಲ್ಲಿ ಹೆಚ್‍ಎಎಲ್ ಕೂಡ ಸ್ಥಾಪನೆಯಾಗುತ್ತಿದೆ. ಇದೆಲ್ಲಾ ತುಮಕೂರಿನ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.

       ಹಾಗೆಯೇ ಇದೀಗ ಬೆಂಗಳೂರಿನ ನಂತರ ತುಮಕೂರಿನಲ್ಲಿ ಮೆಟ್ರೋ ಹೋಲ್‍ಸೇಲ್ ಸ್ಟೋರ್ ಆರಂಭವಾಗಿರುವುದೂ ಸಹ ನಗರದ ಪ್ರಗತಿಗೆ ಮತ್ತಷ್ಟು ಪೂರಕವಾಗಲಿದ್ದು, ಈ ಹೋಲ್‍ಸೇಲ್ ಮಳಿಗೆಯವರು ಗ್ರಾಹಕರಲ್ಲಿ ನಂಬಿಕೆ, ವಿಶ್ವಾಸ ಮೂಡಿಸಲು ಉತ್ತಮವಾದ ಸರಕು ತಂದು ವ್ಯಾಪಾರ ಮಾಡಬೇಕು ಎಂದರು.

       ತುಮಕೂರಿಗೆ ಮೆಟ್ರೋ ಅತ್ಯವಶ್ಯಕವಾಗಿತ್ತು. ಬೆಂಗಳೂರಿಗೆ ಹೋಗಿ ಸದಸ್ಯತ್ವ ಪಡೆದುಕೊಂಡು ವಸ್ತುಗಳನ್ನು ಖರೀದಿಸಿ ತರಬೇಕಾಗಿತ್ತು. ಆದರೆ ನಗರದಲ್ಲೇ ಮಳಿಗೆ ತೆರೆದಿರುವುದರಿಂದ ಜಿಲ್ಲೆಯ ಜನರಿಗೆ ತುಂಬಾ ಅನುಕೂಲಕರವಾಗಲಿದೆ ಎಂದರು.
ಮೆಟ್ರೋದವರು ಹಾಕಿರುವ ಬಂಡವಾಳ ವಾಪಸ್ ಪಡೆಯಬೇಕಾದರೆ ಕನಿಷ್ಠ 10 ವರ್ಷ ಬೇಕಾಗುತ್ತದೆ ಎಂದು ಮೆಟ್ರೋ ಸಂಸ್ಥೆ ತಿಳಿಸಿದೆ ಎಂದರು.

       ನಗರದಲ್ಲಿ ಮೆಟ್ರೋ ಅತ್ಯುತ್ತಮ ಕೇಂದ್ರ ತೆರೆದಿರುವುದು ಭವಿಷ್ಯದ ದೃಷ್ಠಿಯಿಂದ ಉತ್ತಮ ಕಾರ್ಯವಾಗಿದೆ. ಈ ಸಂಸ್ಥೆ ಉತ್ತಮ ವ್ಯಾಪಾರ ಮಾಡಲಿ, ಇನ್ನಷ್ಟು ಪ್ರಗತಿ ಹೊಂದಲಿ ಎಂದು ಅವರು ಇದೇ ಸಂದರ್ಭದಲ್ಲಿ ಆಶಿಸಿದರು.

      ಮೇಯರ್ ಫರೀದಾ ಬೇಗಂ ಮಾತನಾಡಿ, 4 ಲಕ್ಷ ಜನಸಂಖ್ಯೆ ಹೊಂದಿರುವ ತುಮಕೂರು ನಗರದಲ್ಲಿ ಇಂತಹ ಹೋಲ್‍ಸೇಲ್ ಮಳಿಗೆಯ ಅವಶ್ಯಕತೆ ಇತ್ತು. ಹಾಗಾಗಿ ಈ ಮೆಟ್ರೋ ಮಳಿಗೆಯಿಂದ ಗ್ರಾಹಕರಿಗೆ ತುಂಬಾ ಅನುಕೂಲವಾಗಲಿದೆ ಎಂದರು.

     ತುಮಕೂರು ಮರ್ಚೆಂಟ್ ಕ್ರೆಡಿಟ್ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ಎನ್.ಎಸ್. ಜಯಕುಮಾರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ತುಮಕೂರಿಗೆ ಮೆಟ್ರೋ ಅಗತ್ಯವಾಗಿತ್ತು. ಇಂದಿನ ಒತ್ತಡ ಜೀವನದಲ್ಲಿ ಕುಟುಂಬಗಳು ಸದಾ ಬ್ಯುಸಿಯಾಗಿರುತ್ತವೆ. ಹೀಗಾಗಿ ಅಮೆಜಾನ್ ಮತ್ತಿತರ ಆನ್‍ಲೈನ್ ಕಂಪೆನಿಗಳಿಗೆ ಬುಕ್ ಮಾಡಿ ಸಾಮಗ್ರಿಗಳನ್ನು ಪಡೆಯುವ ಪದ್ದತಿಗೆ ಮಾರು ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಮೆಟ್ರೋದಂತಹ ಮಳಿಗೆ ಆರಂಭವಾಗಿರುವುದು ನಗರದ ಜನತೆಗೆ ತುಂಬಾ ಸಹಕಾರಿಯಾಗಿದೆ ಎಂದರು.

      ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿಯ ಮನೀಶ್ ಸಬ್ನೀಶ್ ಮಾತನಾಡಿ, ತುಮಕೂರು ಚಿಕ್ಕ ನಗರವಾದರೂ ದೊಡ್ಡ ಹೃದಯವಂತಿಕೆಯ ಜನರಿದ್ದಾರೆ. ಪುಟ 2 ಕ್ಕೆ

(Visited 3 times, 1 visits today)

Related posts

Leave a Comment