ತುಮಕೂರು:

      ಲಾಕ್‍ಡೌನ್ ಹಿನ್ನಲೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಕೂಲಿಕಾರ್ಮಿಕರಿಗೆ, ನಿರ್ಗತಿಕರಿಗೆ, ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ, ಹೋಂಗಾಡ್ರ್ಸ್‍ಗಳಿಗೆ ನಿರಂತರವಾಗಿ ಆಹಾರ ವಿತರಿಸುತ್ತಿರುವ ಆರ್. ರಾಜೇಂದ್ರ ನೇತೃತ್ವದ ಆರ್.ಆರ್. ಅಭಿಮಾನಿ ಬಳಗವು ಮಂಗಳವಾರ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ವಲಸೆ ಕಾರ್ಮಿಕರಿಗೆ ಆಹಾರ, ಮಕ್ಕಳಿಗೆ ಬಿಸ್ಕೆಟ್ ಮತ್ತು ನೀರು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

      ಪ್ರಯಾಣಿಕರಿಗೆ ಉಚಿತ ಊಟದ ಪಾಕೆಟ್ ಮತ್ತು ಕುಡಿಯುವ ನೀರನ್ನು ವಿತರಿಸಿ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ, ಕೋವಿಡ್-19 ಲಾಕ್‍ಡೌನ್ ಆದಾಗಿನಿಂದ ಯುವ ಕಾಂಗ್ರೆಸ್ ವತಿಯಿಂದ ನಗರದಲ್ಲಿ ನಿರಂತರವಾಗಿ ಬೆಳಿಗ್ಗೆ ತಿಂಡಿ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಿಕೊಂಡು ಬರಲಾಗುತ್ತಿದೆ. ನಿನ್ನೆಯಿಂದ ನಗರದ ಕೆಎಸ್ ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ವಲಸೆ ಕಾರ್ಮಿಕರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದರು.

       ಕೂಲಿಕಾರ್ಮಿಕರು ಅವರ ಸ್ವಂತ ಊರಿಗೆ ತೆರಳಲು ಬಹಳ ಕಷ್ಟವಾಗಿರುವಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕಳೆದ ಎರಡು ದಿನಗಳ ಹಿಂದೆ ಕೂಲಿ ಕಾರ್ಮಿಕರು ಅವರ ಸ್ವಂತ ಊರಿಗೆ ತೆರಳಲು ಉಚಿತವಾಗಿ ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ಬಿಟ್ಟಿದ್ದಾರೆ. ಆ ದೃಷ್ಟಿಯಿಂದ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ್ಲ ಜಿಲ್ಲೆಯವರೆಲ್ಲಾ ಒಂದೆಡೆ ಸೇರಿ ತಮ್ಮ ತಮ್ಮ ಊರುಗಳಿಗೆ ತೆರಳಲು ಇಲ್ಲಿಂದ ಪ್ರಯಾಣ ಮಾಡುವುದರಿಂದ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಆದೇಶದ ಮೇರೆಗೆ ನಿನ್ನೆಯಿಂದ ಉಚಿತ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು.

      ಇಲ್ಲಿಂದ ಕಲಬುರ್ಗಿ, ರಾಯಚೂರು, ಬಳ್ಳಾರಿ, ಮತ್ತಿತರ ಹೊರಜಿಲ್ಲೆಯ ತಮ್ಮ ಊರುಗಳಿಗೆ ಕಾರ್ಮಿಕರು ತೆರಳುತ್ತಿರುವ ಹಿನ್ನಲೆಯಲ್ಲಿ ಪ್ರಯಾಣವು ಸುಮಾರು 8 ಗಂಟೆಗಳ ಕಾಲವಿರುವುದರಿಂದ ಮಕ್ಕಳಿಗೆ ಬಿಸ್ಕೆಟ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ. ಮಧ್ಯಾಹ್ನದ ಊಟ ಮತ್ತು ಕುಡಿಯುವ ನೀರನ್ನು ಸಹ ಕೊಡಲಾಗುತ್ತಿದೆ. ಇನ್ನೂ ಎರಡು ದಿನ ಕೂಲಿಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಬಸ್ ವ್ಯವಸ್ಥೆ ಇರುವುದರಿಂದ ಆ ಎರಡು ದಿನ ಪ್ರಯಾಣಿಕರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಆರ್.ಆರ್ ಅಭಿಮಾನಿ ಬಳಗದ ಆರ್.ರವೀಂದ್ರ, ರಾಜೇಶ್‍ದೊಡ್ಮನೆ, ಬಿ.ಜಿ.ವೆಂಕಟೇಗೌಡ, ಪುಟ್ಟಣ್ಣ, ರಮೇಶ್, ದರ್ಶನ್, ರಘು, ರಾಕೇಶ್ ಸೇರಿದಂತೆ ಮತ್ತಿತರರು ಇದ್ದರು.

(Visited 158 times, 1 visits today)