ತುಮಕೂರು:

      ತುಮಕೂರು ಜಿಲ್ಲೆಯ ಪೊಲೀಸ್ ಇಲಾಖೆಗೆ ಕೊರೊನಾ ಮಹಾಮಾರಿ ಬೆಂಬಿಡದೆ ಕಾಡುತ್ತಿದ್ದು, ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರೊನಾ ಮಹಾಮಾರಿಯ ಅಬ್ಬರಕ್ಕೆ ತತ್ತರಿಸಿ ಹೋಗಿದ್ದಾರೆ.

      ಜನಸಾಮಾನ್ಯರನ್ನ ಭಯಬೀತಗೊಳಿಸಿ ಜನರನ್ನು ದುರ್ಬಲ ಮಾಡುತ್ತಿದ್ದ ಕೊರೊನಾ ಸೋಂಕು ಹಲವರ ಪ್ರಾಣವನ್ನ ಆಹುತಿ ತೆಗೆದುಕೊಳ್ಳಲು ಆತುವರಿಯುತ್ತಿತ್ತು. ದುರ್ಬಲ ಮನಸ್ಸುಗಳು ಮಹಾಮಾರಿಯ ಆರ್ಭಟಕ್ಕೆ ಹೆದರಿ ಪ್ರಾಣ ತೆಜಿಸುವ ನಿರ್ಧಾರಕ್ಕೂ ಮುಂದಾಗುತ್ತಿದ್ದಂತ ದುರ್ಘಟನೆಗಳು ನಡೆಯುತ್ತಿತ್ತು.

      ಕೊರೊನಾ ಸೋಂಕು ದೇಹದೊಳಗೆ ನುಸುಳುತ್ತಿದ್ದಂತೆ ಆತಂಕಗೊಂಡ ಜನತೆ ಮಾನಸಿಕ ದುರ್ಬಲಕ್ಕೊಳಗಾಗಿ ಚಿಕಿತ್ಸೆಗೆ ಸ್ಪಂಧಿಸದೆ ತಮ್ಮ ಆರೋಗ್ಯವನ್ನು ತಾವೇ ಬಲಿ ತೆಗೆದುಕೊಳ್ಳುವಂತಹ ಪ್ರಸಂಗಗಳು ಕೇಳಿಬರುತ್ತಿವೆ. ಆದರೆ, ಇಂತಹ ಪರಿಸ್ಥಿತಿ ಕೇವಲ ಸಾರ್ವಜನಿಕರಿಗಿದೆ ಎಂದು ಭಾವಿಸುವುದು ಬೇಡ. ಇಡೀ ವಿಶ್ವವನ್ನೇ ಆಹುತಿ ತೆಗೆದುಕೊಳ್ಳಲು ರಣಖೇಕೆ ಹಾಕುತ್ತಿದ್ದ ಕೊರೊನಾ ಸೋಂಕು, ಕೊರೊನಾ ವಾರಿಯರ್ಸ್‍ಗಳನ್ನು ಬಿಡುತ್ತಿಲ್ಲ.

      ರಾಜ್ಯದ ಸುದ್ದಿಯನ್ನ ಬದಿಗಿರಿಸಿ ತುಮಕೂರು ಜಿಲ್ಲೆಯನ್ನ ಒಮ್ಮೆ ಅವಲೋಕಿಸಿ ನೋಡಿದರೆ ತುಮಕೂರು ಜಿಲ್ಲೆಯ ಪೊಲೀಸರನ್ನ ಬೆಂಬಿಡದೇ ಕಾಡುತ್ತಿರುವ ಕೊರೊನಾ ಹೆಮ್ಮಾರಿ ಜಿಲ್ಲೆಯ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ.

      ಇಲ್ಲಾ ಪೊಲೀಸ್ ಇಲಾಖೆಯಲ್ಲಿ ಕುಣಗಲ್ ಪೊಲೀಸ್ ಠಾಣೆಗೆ ಮೊಟ್ಟಮೊದಲು ಅಡಿಯಿಟ್ಟ ಕೊರೊನಾ ಸೋಂಕು ಕುಣಿಗಲ್, ತಿಪಟೂರು, ಮಧುಗಿರಿ ಡಿವೈಎಸ್‍ಪಿ ಕಚೇರಿ, ಕೊಡಗೇನಹಳ್ಳಿ ಹಾಗೂ ಕಳ್ಳಂಬೆಳ್ಳ ಮತ್ತು ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಸೋಂಕಿನ ಅಬ್ಬರ ಅತೀ ಹೆಚ್ಚಾಗಿ ಕಂಡುಬರುತ್ತಿದ್ದು, ಮೀಸಲು ಪೊಲೀಸ್ ಪಡೆಯನ್ನು ಬಿಡದೇ ಆವರಿಸಿಬಿಟ್ಟಿದೆ.

      ಕೊರೊನಾದ ವಿರುದ್ಧ ತೊಡೆತಟ್ಟಿ ನಿಲ್ಲಲು ಸಜ್ಜಾಗಿದ್ದ ಖಾಕಿಪಡೆ ಕೊರೊನಾ ಸೋಂಕಿನಿಂದ ತತ್ತರಿಸುತ್ತಿದೆ.

      ಅದೇಷ್ಟೋ ಪೊಲೀಸ್ ಠಾಣೆಯಲ್ಲಿ ನಿರ್ಭಯವಾಗಿ ಕರ್ತವ್ಯ ನಿರ್ವಹಿಸಲಾಗದೆ ಆತಂಕಕ್ಕೆ ಒಳಗಾಗಿರುವ ಕೆಲವು ದುರ್ಬಲ ಮನಸ್ಸಿನ ಸಿಬ್ಬಂದಿಗಳು ಹಗಲಿರುಳು ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಯಾರು ಹೇಗೆ ಏನು ಎನ್ನುವಂತಹ ಪ್ರಶ್ನೆಗಳು ಇಲಾಖೆಯ ಒಳಗೆ ಮತ್ತು ಹೊರಗೆ ಕಾಡುತ್ತಿವೆ. ಆದರೂ ದೃತಿಗೆಡದೆ ಎಂತಹ ಕ್ಲಿಷ್ಟತೆಯಲ್ಲೂ ಎಲ್ಲಕೂ ಸಜ್ಜಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಪರಿಶ್ರಮ ಮೆಚ್ಚುವಂತಹದ್ದೆ.

(Visited 12 times, 1 visits today)