ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಮೋದಿ ಮತ್ತೊಮ್ಮೆ – ಶಾಸಕ ಪ್ರೀತಂಗೌಡ

ತುಮಕೂರು:

      ದೇಶ ಸಧೃಢವಾಗಿ, ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ನರೇಂದ್ರಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು, ಇದಕ್ಕೆ ಇಂದಿನಿಂದಲೇ ಮೋದಿಯವರ ಸಾಧನೆ ಕುರಿತು ಪ್ರಚಾರ ಮಾಡುವುದಾಗಿ ಸಂಕಲ್ಪ ಮಾಡಬೇಕೆಂದು ಹಾಸನದ ಶಾಸಕರಾದ ಪ್ರೀತಂಗೌಡರವರು ಕರೆ ನೀಡಿದರು.

      ತುಮಕೂರು ಜಿಲ್ಲಾ ಬಿಜೆಪಿವತಿಯಿಂದ ಸಿದ್ಧಗಂಗಾ ಫಾರ್ಮಸಿ ಕಾಲೇಜಿನಲ್ಲಿ ಆಯೋಜಿಸಿದ್ದ ಜಿಲ್ಲಾ ಪ್ರಬುದ್ಧರ ಗೋಷ್ಟಿಯನ್ನು ಉದ್ಘಾಟಿಸಿ ಮಾತನಾಡುತ್ತಾ 60 ವರ್ಷಗಳ ಕಾಲ ದೇಶದ ಅಭಿವೃದ್ಧಿಯನ್ನು ಕುಂಠಿತಗೊಳಿಸಿದ್ದ ಕಾಂಗ್ರೆಸ್ ಸರ್ಕಾರ ತೊಲಗಿಸಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿಯವರಿಗೆ ಜನ ಅಧಿಕಾರ ನೀಡಿದರು ಪ್ರಧಾನಿಯಾದ ದಿನದಿಂದಲೂ ಎಂದೂ ರಜೆಯನ್ನು ಪಡೆಯದೆ 18 ಗಂಟೆಗೂ ಹೆಚ್ಚಿನ ಕಾಲ ದೇಶದ ಏಳ್ಗೆಗಾಗಿ ದುಡಿಯುತ್ತಿದ್ದು, ವಿಶ್ವನಾಯಕರಾಗಿ ಭಾರತವನ್ನು ವಿಶ್ವಗುರು ಸ್ಥಾನಕ್ಕೆ ಕೊಂಡೊಯ್ಯದಿದ್ದಾರೆ. ದೇಶದ ಅಭಿವೃದ್ಧಿಗಾಗಿ ತನ್ನನ್ನು ತಾನು ಅರ್ಪಿಸಿರುವ ಮೋದಿಜೀ ಕಟ್ಟಕಡೆಯ ವ್ಯಕ್ತಿಗೂ ಸಹ ಯೋಜನೆಗಳು ತಲುಪಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

      ಬಿಜೆಪಿ ಪಕ್ಷವು ತನ್ನದೇ ಆದ ಉತ್ತಮ ಸಿದ್ಧಾಂತವನ್ನು ಹೊಂದಿರುವ ಜೊತೆಗೆ ಅತ್ಯುತ್ತಮ, ಬಲಿಷ್ಠ ನಾಯಕತ್ವವನ್ನು ಹೊಂದಿದೆ, ನೂರಾರು ಜನಪರ ಯೋಜನೆಯನ್ನು ನರೇಂದ್ರ ಮೋದಿಜೀಯವರ ಆಡಳಿತದಲ್ಲಿ ದೇಶಕ್ಕೆ ಕೊಟ್ಟಿದೆ. ಇವೆಲ್ಲವೂ ಸಹ ಜನಗಳಿಗೆ ತಲುಪಿದ್ದ, ನಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಲ್ಲಾ ರಂಗದಲ್ಲೂ ಸಹ ದೇಶವು ಮುಂಚೂಣಿಯಾಗಿ ನಿಲ್ಲಲಿದೆ. ಯಾವುದೇ ಒಂದು ಚಿಕ್ಕ ಕಳಂಕವಿಲ್ಲದೆ ಕುಟುಂಬ ರಾಜಕಾರಣಕ್ಕೆ ಎಡೆಮಾಡದೆ, ದೇಶದ ಅಭಿವೃದ್ಧಿಗಾಗಿ ಹಗಲಿರುಳು ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಶ್ರಮಿಸುತ್ತಿದ್ದು, ನಾವೆಲ್ಲರೂ ಅವರ ಜನಪರ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಮಾಡಬೇಕೆಂದು ಹೇಳಿದರು.

 

(Visited 32 times, 1 visits today)

Related posts

Leave a Comment