ತುಮಕೂರು :
ಗುತ್ತಿಗೆ ಪದ್ದತಿ ರದ್ದು ಮಾಡಿ, ನೇರ ನೇಮಕಾತಿಗೆ ಅವಕಾಶ ಕಲ್ಪಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಖಾಯಿ ಇರುವ ವಾಟರ್‍ಮನ್ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ತುಮಕೂರು ಜಿಲ್ಲಾ ನೀರು ಸರಬರಾಜು ನೌಕರರ ಸಂಘ(ರಿ)ದ ಸದಸ್ಯರು ಇಂದು ಪಾಲಿಕೆಯ ಎದುರು ಪ್ರತಿಭಟನಾ ಧರಣಿ ನಡೆಸಿದರು.
ಪ್ರತಿಭಟನಾ ನಿರತ ವಾಟರ್‍ಮನ್‍ಗಳನ್ನು ಉದ್ದೇಶಿಸಿ ಮಾತನಾಡಿದ ಕೆ.ಕುಮಾರ್, ಮಹಾನಗರಪಾಲಿಕೆಯಲ್ಲಿ ಕಳೆದ 20-25 ವರ್ಷಗಳಿಂದ ಅತಿ ಕಡಿಮೆ ವೇತನಕ್ಕೆ ದುಡಿಯುತ್ತಿರುವ ನೀರು ಗಂಟೆಗಳಿಗೆ ಇದುವರೆಗೂ ಖಾಯಂ ಆಗಿಲ್ಲ. ಅಲ್ಲದೆ ವೇತನವೂ ಸರಿಯಾದ ಸಮಯಕ್ಕೆ ದೊರೆಯುವುದಿಲ್ಲ. ಪ್ರತಿಭಾರಿಯೂ ಪ್ರತಿಭಟನೆ ಮಾಡಿಯೇ ವೇತನ ಪಡೆಯಬೇಕಾದ ಸ್ಥಿತಿ ಇದೆ.ಸ್ವತಃ ರಾಜ್ಯಪಾಲರೆ ಪಾಲಿಕೆಗಳಲ್ಲಿ ಗುತ್ತಿಗೆ ನೌಕರರ ಪದ್ದತಿಯನ್ನು ರದ್ದು ಮಾಡುವಂತೆ ಸೂಚನೆ ನೀಡಿದ್ದರೂ ಇದುವರೆಗೂ ಅದನ್ನು ರಾಜ್ಯ ಸರಕಾರಗಕಳು ಜಾರಿಗೆ ತಂದಿಲ್ಲ. ಈ ಹಿಂದೆ ಹಲವು ಬಾರಿ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ.ಅಲ್ಲದೆ 5-04-2022 ರಂದು ಮನವಿ ಸಲ್ಲಿಸಿ, 19-04-2022ರೊಳಗೆ ನಮ್ಮ ಸೇವೆ ಖಾಯಂ ಗೊಳಿಸದಿದ್ದಲ್ಲಿ 20 ರಿಂದ ಮುಷ್ಕರ ನಡೆಸುವುದಾಗಿ ತಿಳಿಸಿದ್ದೇವೆ. ಆದರೆ ಇದುವರೆಗೂ ಪಾಲಿಕೆ ಆಡಳಿತ ನಮ್ಮ ಮನವಿಗೆ ಮನ್ನಣೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಇಂದಿನಿಂದ ಹೋರಾಟ ಆರಂಭಿಸಿರುವುದಾಗಿ ತಿಳಿಸಿದರು.
ನೀರುಗಂಟಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ, ಅವರೊಂದಿಗೆ ಮುಷ್ಕರದಲ್ಲಿ ಪಾಲ್ಗೊಂಡು ಮಾತನಾಡಿದ 15ನೇ ವಾರ್ಡಿನ ಪಾಲಿಕೆ ಕೌನ್ಸಿಲರ್ ಶ್ರೀಮತಿ ಗಿರಿಜಾ ಧನಿಯಕುಮಾರ್,ಕಳೆದ 15-20 ವರ್ಷದಿಂದ ಅತಿ ಕಡಿಮೆ ವೇತನಕ್ಕೆ ಇವರು ದುಡಿಯುತಿದ್ದಾರೆ. ಇವರ ಸೇವೆಯನ್ನು ಖಾಯಂ ಗೊಳಿಸಬೇಕು ಎಂಬ ಕಾರಣದಿಂದ 2019ರಲ್ಲಿ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ವಿಚಾರಗಳನ್ನು ಚರ್ಚೆ ಮಾಡಿ, ಇವರ ಸೇವೆಯನ್ನು ಖಾಯಂಗೊಳಿಸಲು ಪೌರಾಡಳಿತ ಇಲಾಖೆಗೆ ನಿರ್ಣಯ ಕಳುಹಿಸಿಕೊಡಲಾಗಿದೆ.ಆದರೆ ಇದುವರೆಗೂ ರಾಜ್ಯ ಸರಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ.ನೀರುಗಂಟಿಗಳು ಮಕ್ಕಳು,ಸಂಸಾರವಿದೆ.ಇಂದಿನ ಬೆಲೆ ಹೆಚ್ಚಳದ ಕಾಲದಲ್ಲಿ ಮಕ್ಕಳ ಓದು,ಮನೆ ಬಾಡಿಗೆ ಇವುಗಳನ್ನು ನಾವು ಪರಿಗಣಿಸ ಬೇಕಿದೆ.ಬಅಲ್ಲದೆ ನೇರ ಪಾವತಿಯ ಮೂಲಕ ಅವರ ಬೆವರಿನ ಹಣ ಅವರಿಗೆ ಸೇರುವಂತೆ ಮಾಡಬೇಕು.ಈ ನಿಟ್ಟಿನಲ್ಲಿ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಇಂದೇ ಮೇಯರ್ ಮತ್ತು ಆಯುಕ್ತರೊಂದಿಗೆ ಮಾತನಾಡಿ,ಸಮಸ್ಯೆಯ ಪರಿಹಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.
ನೀರುಗಂಟಿಗಳು ಹಗಲು ರಾತ್ರಿ ಎನ್ನದೆ ಕೆಲಸ ಮಾಡಿದ್ದರಿಂದ ಇಂದು ನಾವು ನೆಮ್ಮದಿಯಿಂದ ಇದ್ದೇವೆ.ಇಲ್ಲದಿದ್ದಲ್ಲಿ ದಿನಕ್ಕೆ ಕುಡಿಯುವ ನೀರಿನ ವಿಚಾರವಾಗಿಯೇ ಸಾವಿರಾರು ಪೋನ್ ಕರೆಗಳಿಗೆ ಉತ್ತರಿಸಬೇಕಿತ್ತು.ಈಗ ಎಲ್ಲರೂ ಒಗ್ಗೂಡಿ ಕೆಲಸ ಬಹಿಷ್ಕರಿಸಿ ಮುಷ್ಕರ ನಿರತವಾಗಿರುವುದಿಂದ ಮುಂದಿನ ಎರಡು ಮೂರು ದಿನಗಳಲ್ಲಿ ನೀರಿನ ಕೊರತೆ ತಲೆದೊರಲಿದೆ.ಹಾಗಾಗಿ ಪಾಲಿಕೆಯ ಆಡಳಿತ ಶೀಘ್ರವಾಗಿ ಸಮಸ್ಯೆ ಬಗೆಹರಿಸಿ, ಜನರಿಗೆ ಬೇಸಿಗೆಯಲ್ಲಿ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಎಲ್ಲಾ ನೀರುಗಂಟಿಗಳು ಕೆಲಸ ಬಹಿಷ್ಕರಿಸಿ, ಪಾಲ್ಗೊಂಡಿದ್ದರು.

(Visited 3 times, 1 visits today)