ತುಮಕೂರು:


ಗುಜರಾತ್‍ನಲ್ಲಿ ನಡೆದ ಅಥ್ಲೇಟಿಕ್ಸ್ ಫೆಡರೇಶನ್ ಬಾಲಕರ ವಿಭಾಗದಲ್ಲಿ 110 ಮೀಟರ್ ಓಟವನ್ನು ಕೇವಲ 14.2 ಸೆಕೆಂಡ್‍ಗಳಲ್ಲಿ ಓಡಿ ಗುರಿಮುಟ್ಟಿ ಚಿನ್ನದ ಪದಕ ಪಡೆದು ಕೊಲಂಬಿಯದಲ್ಲಿ ನಡೆಯಲಿರುವ ವಿಶ್ವಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ತುಮಕೂರು ನಗರದ ಮಂಜುನಾಥ ಪುತ್ರ ಕೃಷಿಕ್ ಪಡೆದು ನಾಡಿಗೆ ಕೀರ್ತಿಯನ್ನು ತಂದಿದ್ದಾರೆ.
ವಿಶ್ವಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ತುಮಕೂರು ನಗರದ ಕೃಷಿಕ್ ಅವರನ್ನ ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಮುಂಜಾನೆ ಗೆಳೆಯರ ಬಳಗದ ವತಿಯಿಂದ ಅಂತರಾಷ್ಟ್ರೀಯ ಹಿರಿಯ ಕ್ರೀಡಾಪಟು ಟಿ.ಕೆ ಆನಂದ್ ಮತ್ತು ಸದಸ್ಯರು ಅಭಿನಂದಿಸಿದರು.
ಪತ್ರಕರ್ತ ಎಸ್ ನಾಗಣ್ಣ ಮಾತನಾಡಿ ಶತಮಾನಗಳಿಂದಲೂ ತುಮಕೂರು ನಗರದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಅನೇಕ ದಿಗ್ಗಜರು ಇಲ್ಲಿ ಇದ್ದಾರೆ 12 ವರ್ಷಗಳಿಂದ ತುಮಕೂರು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದೆ ಇಂದಿನ ಮಕ್ಕಳು ಐಎಎಸ್ ಐಪಿಎಸ್ ಮತ್ತು ಇಂಜಿನಿಯರಿಂಗ್ ಪದವಿಗಳನ್ನು ಪಡೆದು ಉನ್ನತ ಹುದ್ದೆಗಳಿಗೆ ಆಸೆ ಪಡುತ್ತಿರುವ ಕಾಲಘಟ್ಟದಲ್ಲಿ ಕ್ರೀಡಾ ಕ್ಷೇತ್ರವನ್ನು ತನ್ನ ಉಸಿರಾಗಿಸಿಕೊಂಡು ಕೃಷಿಕ್ ಅವರ ತಂದೆ ಮಂಜುನಾಥ್ ಅವರ ಸಾಧನೆಗೆ ಶ್ಲಾಘನೀಯ ಎಂದು ಅವರು ತಿಳಿಸಿದರು.
ಮುಂಜಾನೆ ಗೆಳೆಯರ ಬಳಗದ ಅಧ್ಯಕ್ಷ ಧನಿಯಕುಮಾರ್ ಅವರು ಮಾತನಾಡಿ ವಿಶ್ವಮಟ್ಟಕ್ಕೆ ಆಯ್ಕೆಯಾಗಿರುವ ಕೃಷಿಕ್ ಉತ್ತಮ ದೇಹದಾಡ್ಯ ಹೊಂದಿದ್ದು ಅವರು ಕ್ರೀಡಾಕ್ಷೇತ್ರದಲ್ಲಿ ಉತ್ತಮ ಹೆಸರು ಹೊಂದಿದ್ದು ಅದೇ ರೀತಿಯಾಗಿ ನಮ್ಮ ತುಮಕೂರಿನ ಹೆಸರನ್ನು ಕೂಡ ಬೆಳೆಸಿದ್ದಾರೆ ಎಂದು ತಿಳಿಸಿದರು ಇಂದಿನ ಯುವಕರು ಸಾಧನೆ ಮಾಡುವ ಸಮಯದಲ್ಲಿ ಮೊಬೈಲ್ ಹಿಡಿದು ಹಾಳಾಗುತ್ತಿದ್ದಾರೆ ಪ್ರತಿನಿತ್ಯ ಕ್ರೀಡಾಂಗಣಕ್ಕೆ ಬಂದು ಅಭ್ಯಾಸ ಮಾಡುವವರಿಗೆ ಸಾಧನೆ ಲಭಿಸುತ್ತದೆ ಅಲ್ಲದೆ ಉತ್ತಮ ಆರೋಗ್ಯ ಕೂಡ ಅವರದಾಗಿರುತ್ತದೆ ಅವರದಾಗುತ್ತದೆ ಹಿನ್ನೆಲೆಯಲ್ಲಿ ಇಂದಿನ ಯುವಕರು ಸೋಮಾರಿತನವನ್ನು ಬಿಟ್ಟು ಪ್ರತಿನಿತ್ಯ ಕ್ರೀಡಾಂಗಣಕ್ಕೆ ಬಂದು ಅಭ್ಯಾಸದಲ್ಲಿ ತೊಡಗಿದ್ದಾರೆ ಏನಾದರೂ ಒಂದು ಸಾಧನೆ ಮಾಡಬಹುದು ಎಂದು ಅವರು ತಿಳಿಸಿದರು.
ಅಂತರಾಷ್ಟ್ರೀಯ ಕ್ರೀಡಾಪಟು ಆನಂದ್ ಅವರು ಮಾತನಾಡಿ ವಿಶ್ವಮಟ್ಟಕ್ಕೆ ಆಯ್ಕೆಯಾಗಿರುವ ಅಥ್ಲೆಟಿಕ್ಸ್ ಕೃಷಿಕ್ ಅವರ ತಂದೆ ಕೂಡ ವಿಶ್ವಮಟ್ಟದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂಬ ದೃಷ್ಟಿಕೋನದಿಂದ ಮಗನು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲೆಂದು ಇನ್ನಿಲ್ಲದ ಶ್ರಮ ಪಟ್ಟು ಮಗನ ಸಾಧನೆಗೆ ಹಗಲಿರುಳು ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು.
ಬಿಜೆಪಿ ಮುಖಂಡ ಚಂದ್ರಶೇಖರ್ ಮಾತನಾಡಿ ಅಂದಿನ ಕಾಲದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರು ಮಕ್ಕಳನ್ನು ಕಬಡ್ಡಿ ಆಡಿಸುವ ಮೂಲಕ ಸೈನ್ಯವನ್ನು ಕಟ್ಟುತ್ತಿದ್ದರು ಕ್ರೀಡೆ ಎಂಬುದು ಕೇವಲ ಮನರಂಜನೆಯಲ್ಲ ಮನುಷ್ಯನ ಜೀವನದ ಒಂದು ಭಾಗವಾಗಿದೆ ಆದರೆ ಇಂದಿನ ಯುವಕರು ಕೇವಲ ಪದವಿ, ಹುದ್ದೆಗಾಗಿ ಆಸೆಪಡುತ್ತಿದ್ದಾರೆ ಪ್ರಪಂಚದ ಭೂಪಟದಲ್ಲಿ ಇಂದು ಭಾರತ ಕ್ರೀಡಾ ಕ್ಷೇತ್ರದಲ್ಲಿ ತಲೆಯೆತ್ತಿ ನಿಂತಿದೆ ಎಂದರು.
ಈ ವೇಳೆ ಅಥ್ಲೆಟಿಕ್ ಕ್ರೀಡಾಪಟು ಕೃಷಿಕ್ ಅವರ ತಂದೆ ಮಂಜುನಾಥ್ ಮಾತನಾಡಿ ನನ್ನ ಮಗ ವಿಶ್ವಮಟ್ಟದ ಅಥ್ಲೆಟಿಕ್ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸುತ್ತಿರುವುದು ಬಹಳ ಖುಷಿ ತಂದಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಪದ್ಮನಾಭರಾವ್, ನಿವೃತ್ತ ಪ್ರಾಂಶುಪಾಲರಾದ ವೆಂಕಟೇಶ್, ಅಥ್ಲೆಟಿಕ್ ಕೋಚ್ ಶಿವಪ್ರಸಾದ್, ಹೆಚ್.ಎಂ.ಟಿ., ಬಾಲರಾಜು, ಇಂಜಿನಿಯರ್ ಪ್ರಕಾಶ್, ವಕೀಲರಾದ ಶ್ರೀನಿವಾಸ್, ಕ್ರೀಡಾಪಟು ರಮೇಶ್, ದಿನೇಶ್, ಹಿರಿಯ ಕ್ರೀಡಾಪಟು ಚಿಕ್ಕತಿಮ್ಮಯ್ಯ, ನರೇಶ್, ನಟರಾಜು, ಸ್ವಾಮಿ ಹಾಗೂ ಕ್ರೀಡಾಪಟುಗಳು ಹಾಜರಿದ್ದರು.

(Visited 5 times, 1 visits today)