ತುಮಕೂರು:

      ಕನ್ನಡ ಚಿತ್ರರಂಗದಲ್ಲಿ ಡ್ರಗ್ ದಂಧೆ ನಡೆಯುತ್ತಿರುವ ಬಗ್ಗೆ ನನಗೆ ಗೊತ್ತಿಲ್ಲ. ಅಂತೆ ಕಂತೆಗಳ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ನಟ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ.

      ನಾನು ಕಳೆದ 24 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿದ್ದೇನೆ. ಆದರೆ ಚಿತ್ರರಂಗದಲ್ಲಿ ರೈಸ್, ದಾಲ್ ಕೇಳಿದ್ದೇನೆ. ಆದರೆ ಡ್ರಗ್ ಮಾಫಿಯಾ ಕೇಳೇ ಇಲ್ಲ ಎಂದರು.

      ನಗರದ ಸಿದ್ದಗಂಗಾ ಮಠಕ್ಕೆ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಭೇಟಿ ನೀಡಿ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಚಿತ್ರರಂಗದಲ್ಲಿ ಡ್ರಗ್ ಮಾಫಿಯಾ ನಡೆಯುತ್ತಿದೆ ಎಂಬುದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಚಿತ್ರರಂಗವನ್ನು ಎಲ್ಲ ಹಿರಿಯ ಕಲಾವಿದರು ಸೇರಿ ಕಟ್ಟಿದ್ದಾರೆ. ಚಿಕ್ಕ ವಿಚಾರಕ್ಕೆ ಇಡೀ ಚಿತ್ರರಂಗಕ್ಕೆ ಕಳಂಕ ತರುವುದು ಸರಿಯಲ್ಲ ಎಂದರು.

      ಒಂದೇ ಒಂದು ವಿಚಾರವನ್ನು ಎಳೆದು ತಂದು ಚಿತ್ರರಂಗದ ದೂಷಣೆ ಮಾಡುವುದು ಬೇಡ ಎಂದ ಅವರು, ಕನ್ನಡ ಚಿತ್ರರಂಗಕ್ಕೆ ಆಗಾಗ್ಗೆ ಪೆಟ್ಟು ಬೀಳುತ್ತಲೇ ಇರುತ್ತದೆ ಎಂದರು.

     ಈಗ ಏನೇನು ನಡೆಯುತಿದೆ ಆ ಬಗ್ಗೆ ಮಾತನಾಡುವುದು ತಪ್ಪಾಗುತ್ತದೆ. ಈ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಅವರು ಹೇಳಿದರು.
ಡ್ರಗ್ ಮಾಫಿಯಾದಲ್ಲಿ ಅಗಲಿದ ನಟನ ಹೆಸರನ್ನು ಪ್ರಸ್ತಾಪ ಮಾಡುವುದು ಬೇಡ. ಅವರಿಗೆ ಕುಟುಂಬ ಇದೆ. ಸಹೋದರ. ಪತ್ನಿ, ತಂದೆ-ತಾಯಿ ಎಲ್ಲರೂ ಇದ್ದಾರೆ. ವಿನಾ ಕಾರಣ ಅವರ ಹೆಸರು ತಂದರೆ ಕುಟುಂಬಕ್ಕೆ ನೋವಾಗುತ್ತದೆ ಎಂದರು.
ಅಗಲಿದ ನಟನ ಬಗ್ಗೆ ಯಾರೂ ಸಹ ತಪ್ಪಾಗಿ ಮಾತ ನಾಡಬಾರದು. ಗೊತ್ತಿಲ್ಲದ ವಿಚಾರಗಳ ಬಗ್ಗೆ ಊಹಾ ಪೋಹಗಳನ್ನು ಸೃಷ್ಠಿಸಿ ಮಾತನಾಡುವುದರಿಂದ ಇಡೀ ಚಿತ್ರರಂಗಕ್ಕೆ ಕೊಡಲಿ ಪೆಟ್ಟು ಬೀಳಲಿದೆ ಎಂದರು.

      ನಾನು ಯಾವುದೇ ಪಾರ್ಟಿಗಳಿಗೆ ಹೋಗುವುದಿಲ್ಲ. ನನಗೇನಿದ್ದರೂ ಕರೆ ಬರುವುದು ರಾಜಕೀಯ ಪಾರ್ಟಿಗಳಿಂದ ಮಾತ್ರ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

      ನಟ ಚೇತನ್ ನನ್ನ ಬಗ್ಗೆ ಮಾತನಾಡಿರುವುದಿಲ್ಲ. ಗುಟ್ಕಾ ಜಾಹೀರಾತಿಗೆ ಅನುಮತಿ ಕೊಟ್ಟಿರುವ ಪ್ರಧಾನ ಮಂತ್ರಿಯವರ ಬಗ್ಗೆ ಮಾತನಾಡಿರಬಹುದು. ಏನಾದರೂ ಮಾತನಾ ಡುವವರು ನೇರವಾಗಿ ಮಾತನಾಡಬೇಕು ಎಂದರು. ಇಂದ್ರಜಿತ್ ಲಂಕೇಶ್ ನನಗೆ 1996 ರಿಂದಲೂ ಪರಿಚಿತರು. ಅವರು ನನ್ನ ಮೇಲೆ ಅವಲಂಬಿತರಾಗಿಲ್ಲ. ನಾನು ಅವರ ಮೇಲೆ ಅವಲಂಬಿತನಾಗಿಲ್ಲ. ಮಠಕ್ಕೆ ಬರುವ ಉದ್ದೇಶದಿಂದ ನಾವಿಬ್ಬರೂ ಜತೆಯಲ್ಲಿ ಬಂದಿದ್ದೇವೆ. ನಾನು ಯಾವುದೋ ಕಾರಣಕ್ಕೆ, ಇನ್ಯಾರೋ ಏನೋ ಹೇಳುತ್ತಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.  

      ಇಂದ್ರಜಿತ್ ಲಂಕೇಶ್ ಅವರಿಗೆ ಇರುವ ಮಾಹಿತಿ ನನಗೆ ಗೊತ್ತಿಲ್ಲ. ಅವರಿಗೆ ಗೊತ್ತಿರುವುದನ್ನು ನಾನು ಕೇಳುವುದಿಲ್ಲ. ನಾನು ನನ್ನ ಹೆಂಡತಿ ಬಳಿಯೇ ಬೇಡದ ವಿಚಾರಗಳ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

     ಜೀವನದಲ್ಲಿ ಎಲ್ಲರಿಗೂ ಸುಗಮ ಹಾದಿ ಇರುವುದಿಲ್ಲ. ಜೀವನದಲ್ಲಿ ಎಲ್ಲ ಸಂಕಷ್ಟ ಎದುರಿಸಿ ಸಾಗಬೇಕಾಗಿದೆ. ಆದರೆ ಎಲ್ಲವನ್ನು ಎದುರಿಸಿ ನಮ್ಮ ಚಿತ್ರರಂಗ ನಿಂತಿದೆ ಎಂದರು.

      ಕೊರೊನಾ ಬಗ್ಗೆ 3 ತಿಂಗಳಿನಿಂದ ಇದ್ದ ಭಯ ಈಗಿಲ್ಲ. ಎಲ್ಲವನ್ನೂ ಎದುರಿಸೋಣ ಎಂದ ಅವರು, ಕೊರೊನಾದಿಂದ ಚಿತ್ರರಂಗಕ್ಕೆ ತುಂಬಾ ನಷ್ಟವಾಗಿದೆ. ನಿರ್ಮಾಪಕರು, ನಟ, ನಟಿಯರು ತುಂಬಾ ಸಂಕಷ್ಟ ಅನುಭವಿಸಿದ್ದಾರೆ. ಇದೀಗ ಕೊಂಚ ಚೇತರಿಸಿಕೊಳ್ಳುತ್ತಿದ್ದಾರೆ ಎಂದರು.

(Visited 12 times, 1 visits today)