ಲಾಕ್‌ಡೌನ್‌ ಸಂಕಷ್ಟ ಅನುಭವಿಸುತ್ತಿರುವ ಬಡವರಿಗೆ ಬಿ.ಸುರೇಶ್‍ಗೌಡ ಸಹಾಯ ಹಸ್ತ!!

ತುಮಕೂರು :

      ತಾಲ್ಲೂಕಿನ ನಾಗವಲ್ಲಿಯಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದ ಸಂಕಷ್ಟ ಅನುಭವಿಸುತ್ತಿರುವ ಬಡವರಿಗೆ ಮಾಜಿ ಶಾಸಕ ಸುರೇಶ್‌ಗೌಡ ಆಹಾರ ಸಾಮಗ್ರಿ ಕಿಟ್, ಹಣ್ಣು ತರಕಾರಿಗಳನ್ನು ವಿತರಿಸಿದರು. 

      ಕೊರೊನಾ, ಲಾಕ್ ಡೌನ್ ಕಾರಣದಿಂದ ತುಮಕೂರು ಗ್ರಾಮಾಂತರ ಕ್ಷೇತ್ರದ ಜನರು ತೀರಾ ಸಂಕಷ್ಟಕ್ಕೆ ಸಿಲುಕಿದ್ದು, ಗ್ರಾಮಾಂತರ ಕ್ಷೇತ್ರದಿಂದ ಬೆಂಗಳೂರು ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ನೆಲೆಸಿರುವ ಉದ್ಯಮಿಗಳು, ಶ್ರೀಮಂತರು, ಸಾಪ್ಟವೇರ್ ಎಂಜಿನಿಯರ್ ಗಳು ಕ್ಷೇತ್ರಕ್ಕೆ ನೆರವಾಗುವ ನಿಟ್ಟಿನಲ್ಲಿ ಮುಂದೆ ಬರಬೇಕು ಎಂದು ಮಾಜಿ ಶಾಸಕ ಬಿ.ಸುರೇಶಗೌಡ ಮನವಿ ಮಾಡಿದರು.

      ಜಿ.ಪಂ. ಸದಸ್ಯೆ ಅನಿತಾಸಿದ್ದೇಗೌಡ, ಗ್ರಾ.ಪಂ. ಅಧ್ಯಕ್ಷೆ ಪಾರ್ವತಮ್ಮ,ಉಪಾಧ್ಯಕ್ಷೆ ಮಂಜುಳಾ, ಸದಸ್ಯ ರಮೇಶ್, ಮಾಜಿ ಅಧ್ಯಕ್ಷ ನಾಗಣ್ಣ, ಸುಮಿತ್ರಮ್ಮ, ಆರಾಧ್ಯ, ಗೋಪಿ,ನಾರಾಯಣಪ್ಪ, ಪ್ರಕಾಶ್, ಗಿರೀಶ್,ಪಾಪಣ್ಣ, ನವೀನ್ ಮತ್ತಿತರರು ಉಪಸ್ಥಿತರಿದ್ದರು.

(Visited 68 times, 1 visits today)

Related posts

Leave a Comment