ಟಿಎಂಸಿಸಿ ಎಟಿಎಂ ಕೇಂದ್ರಕ್ಕೆ ಸಚಿವ ಜೆಸಿಎಂ ಚಾಲನೆ

ತುಮಕೂರು :

      ನಗರದ ಜೆ.ಸಿ. ರಸ್ತೆಯಲ್ಲಿರುವ ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್‍ನ ಪ್ರಧಾನ ಕಚೇರಿಯಲ್ಲಿಂದು ನೂತನವಾಗಿ ಆರಂಭಿಸಲಾಗಿರುವ ಎಟಿಎಂ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಉದ್ಘಾಟಿಸಿದರು.

      ನಂತರ ಮಾತನಾಡಿದ ಸಚಿವ ಮಾಧುಸ್ವಾಮಿ ಅವರು,ತ ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ಗ್ರಾಹಕರಿಗೆ ಬಹಳ ವ್ಯಾಪಕ ಮತ್ತು ವಿಸ್ತಾರವಾದ ಸೇವೆ ನೀಡುತ್ತಿದೆ. ಸಹಕಾರ ಕ್ಷೇತ್ರದಲ್ಲಿ ಈ ರೀತಿಯ ಸೇವೆ ನೀಡುವುದು ಬಹಳ ಅಪರೂಪ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

      ಬ್ಯಾಂಕ್ ಅಧ್ಯಕ್ಷರಾದ ಜಯಕುಮಾರ್ ಅವರು ಈಗ ಎಟಿಎಂ ಸೇವೆಯನ್ನು ಸಹ ಗ್ರಾಹಕರಿಗೆ ನೀಡುತ್ತಿದ್ದು, ಈ ಎಟಿಎಂನಲ್ಲಿ ಯಾವುದೇ ಬ್ಯಾಂಕ್ ಡೆಬಿಟ್, ಕ್ರೆಡಿಟ್ ಕಾರ್ಡ್‍ಗಳನ್ನು ಬಳಸಿ ಹಣ ಡ್ರಾ ಮಾಡುವಂತಹ ಸೌಲಭ್ಯವನ್ನು ಒದಗಿಸಿಕೊಟ್ಟಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ ಎಂದರು.

      ಟಿಎಂಸಿಸಿ ಬ್ಯಾಂಕ್ ಅಧ್ಯಕ್ಷ ಎನ್.ಎಸ್. ಜಯಕುಮಾರ್ ಮಾತನಾಡಿ, ಗ್ರಾಹಕರು ಮತ್ತು ಜನರ ನಿರೀಕ್ಷೆಗೆ ತಕ್ಕಂತೆ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ.

      ಇಂದು ಆರಂಭಿಸಿರುವ ಎಟಿಎಂ ಕೇಂದ್ರದಲ್ಲಿ ಎಲ್ಲ ರೀತಿಯ ಕ್ರೆಡಿಟ್, ಡೆಬಿಟ್ ಕಾರ್ಡ್‍ಗಳನ್ನು ಬಳಸಲು ಅನ್ವೇಷಣೆ ನಡೆಸಿ ಈ ಕೇಂದ್ರ ಉದ್ಘಾಟಿಸಲಾಗಿದೆ. ಇದರಿಂದ ಜನತೆಗೆ ತುಂಬಾ ಉಪಯುಕ್ತವಾಗಲಿದೆ ಎಂದು ಹೇಳಿದರು.

      ಮುಂದಿನ ದಿನಗಳಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್ ವತಿಯಿಂದ ಒನ್ ಮ್ಯಾನ್ ಬ್ರಾಂಚ್ ತೆರೆಯಲು ಉದ್ದೇಶಿಸಲಾಗಿದೆ. ಪ್ರಥಮ ಹಂತವಾಗಿ ಗುಬ್ಬಿ ಗೇಟ್ ಹಾಗೂ ಯಲ್ಲಾಪುರದಲ್ಲಿ ಈ ಬ್ರಾಂಚ್ ಸ್ಥಾಪಿಸಲಾಗುತ್ತದೆ. ನಂತರ ಗ್ರಾಮೀಣ ಪ್ರದೇಶದ ಜನರಿಗೂ ಸೇವೆ ಒದಗಿಸುವ ಉದ್ದೇಶದಿಂದ ಹೆಗ್ಗೆರೆ, ಕ್ಯಾತ್ಸಂದ್ರ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಒನ್ ಮ್ಯಾನ್ ಬ್ರಾಂಚ್ ಸ್ಥಾಪಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದರು.

      ಬ್ಯಾಂಕ್‍ನ ಗ್ರಾಹಕರಿಗೆ 2 ಲಕ್ಷ ರೂ. ವರೆಗೆ ಅಪಘಾತ ವಿಮೆಯನ್ನು ಮಾಡಿಸಲಾಗುತ್ತಿದೆ. ಗ್ರಾಹಕರಿಂದ ಯಾವುದೇ ರೀತಿಯ ಪ್ರೀಮಿಯಂ ಕಟ್ಟಿಸಿಕೊಳ್ಳುತ್ತಿಲ್ಲ. ಸೇವಾ ಮನೋಭಾವದಿಂದ ಈ ಕಾರ್ಯ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.  ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಬ್ಯಾಂಕ್ ಸಿಇಓ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

(Visited 8 times, 1 visits today)

Related posts

Leave a Comment