ತುಮಕೂರು:

     ರಾಷ್ಟ್ರದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಸಾಹೇ ವಿಶ್ವವಿದ್ಯಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ತುಮಕೂರಿನ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ ಹಾಗೂ ಆಸ್ಪತ್ರೆಯಲ್ಲಿ ‘ಕೊವೀಡ್ 19 ಪರಿಕ್ಷಾ ಪ್ರಯೋಗಾಲಯದ ಆರಂಭವನ್ನು ರಾಜ್ಯದ ವೈದ್ಯಕೀಯ ಸಚಿವ ಡಾ.ಸುಧಾಕರ್ ಸೆ. 19 ರಂದು ನೇರವೇರಿಸಲಿದ್ದಾರೆ.

      ನಗರದ ಸಮೀಪದ ಆಗಲಕೋಟೆಯಲ್ಲಿರುವ ಆಸ್ಪತ್ರೆಯಲ್ಲಿ ವಿಶೇಷ ಘಟಕವನ್ಮ್ನ ಸೆ.19ದಂದು ಬೆಳಿಗ್ಗೆ ಬೆಳಿಗ್ಗೆ 11ಕ್ಕೆ ಉದ್ಗಾಟನೆಗೊಳ್ಳಲಿರುವ ಕಾರ್ಯಕ್ರಮದಲ್ಲಿ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ,  ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಡಾ.ಜಿ.ಎಸ್. ಆನಂದ್, ಸಾಹೇ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಬಾಲಕೃಷ್ಣ ಶೆಟ್ಟಿ, ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ , ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗೇಂದ್ರಪ್ಪ, ಜಿಲ್ಲಾ ಸರ್ಜನ್ ಡಾ. ವೀರಭದ್ರಯ್ಯ, ಶ್ರೀ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಸಿಇಓ ಡಾ. ದೇವದಾಸ್ ಪಿ.ಕೆ, ಪ್ರಾಂಶುಪಾಲರಾದ ಡಾ. ಎ.ಜಿ.ಶ್ರೀನಿವಾಸಮೂರ್ತಿ, ವೈದಕೀಯ ಅಧೀಕ್ಷಕರಾದ ಎನ್.ಎಸ್. ಡಾ.ವೆಂಕಟೇಶ್ ಅವರು ಕಾರ್ಯಕ್ರವ್ಮದಲ್ಲಿ ಹಾಜರಿರುವರು.

(Visited 7 times, 1 visits today)