ತುಮಕೂರು:

      ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಜೀವನದ ಆರೋಗ್ಯ ಸುಧಾರಣೆ ಸೇರಿದಂತೆ ಇತರೆ ಜೀವನದ ಭದ್ರತೆಗಾಗಿ ಜೀವವಿಮೆ ಅವಶ್ಯವಾಗಿದ್ದು, ‘ಎಕ್ಸೈಡ್ ಲೈಫ್’ ಇನ್ಷೂರೆನ್ಸ್ ಮೂಲಕ ಗ್ರಾಹಕರಿಗೆ ಹೊಸ ವಿಮಾ ಯೋಜನೆಯನ್ನು ಕಲ್ಪಿಸಲಾಗುತ್ತಿದೆ ಎಂದು ವಿಮಾ ಕಂಪೆನಿಯ ತರಬೇತುದಾರ ಆಶಿಕ್ ಮನೋಹರ್ ತಿಳಿಸಿದರು.

     ನಗರದಲ್ಲಿಂದು ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2015ರಲ್ಲಿ ಪ್ರಾರಂಭವಾದ ದಿನದಿಂದಲೂ ಎಕ್ಸೈಡ್ ಲೈಫ್ ಇನ್ಷೂರೆನ್ಸ್ ದೇಶಾದ್ಯಂತ ಟೈಯರ್2 ಮತ್ತು ಟೈಯರ್ 3 ನಗರಗಳ ಜನರೊಂದಿಗೆ ಸಕ್ರಿಯವಾಗಿದ್ದು ಅವರಿಗೆ ವಿಮೆಯ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳಲು ಮತ್ತು ಅವರಿಗೆ ಅವರ ಭವಿಷ್ಯಕ್ಕೆ ಸೂಕ್ತ ಹಣಕಾಸು ನಿರ್ಧಾರ ಕೈಗೊಳ್ಳಲು ಮಾಹಿತಿಯೊಂದಿಗೆ ಸನ್ನದ್ಧವಾಗಿಸುತ್ತಿದೆ ಎಂದರು.

      ಎಕ್ಸೈಡ್ ಲೈಫ್ ಇನ್ಷೂರೆನ್ಸ್‍ನಲ್ಲಿ ನಾವು ಪ್ರತಿ ವ್ಯಕ್ತಿಯೂ ಆರ್ಥಿಕವಾಗಿ ರಕ್ಷಣೆ ಹೊಂದಿರುವುದು ಮುಖ್ಯ ಎಂದು ನಂಬಿದ್ದೇವೆ. `ಅತ್ಯಂತ ಬೇಗ ಪ್ರಾರಂಭಿಸುವುದು’, `ಒಗ್ಗೂಡಿಸುವುದರ ಶಕ್ತಿ’ ಮತ್ತು `ತಕ್ಕಷ್ಟು ಜೀವವಿಮೆ’ಯ ಪರಿಕಲ್ಪನೆಗಳನ್ನು ಪ್ರತಿ ಭಾರತೀಯರು ಅರ್ಥ ಮಾಡಿಕೊಳ್ಳಬೇಕು” ಎಂದರು.

      ಹಣಕಾಸು ಜವಾಬ್ದಾರಿಯ ಪರಿಕಲ್ಪನೆಯು ತಕ್ಕಷ್ಟು ಜೀವವಿಮೆಯ ರಕ್ಷಣೆಯ ಆಲೋಚನೆಯ ಅಂತರಂಗದಲ್ಲಿದೆ. ಇದು ನಮ್ಮ 2018ರ ಹಣದ ರೂಢಿಗಳ ಸಮೀಕ್ಷೆಯ ಮೂಲಕ ಅನಾವರಣಗೊಂಡಿದ್ದು ಇದರಲ್ಲಿ ವೈಯಕ್ತಿಕ ವಿಮೆಯ ರಕ್ಷಣೆ ಸಮೀಕ್ಷೆ ನಡೆಸಲಾದ ಶೇ.30ರಷ್ಟು ಜನರಲ್ಲಿ ಅನಿಶ್ಚಿತವಾಗಿದೆ ಎಂದು ಹೇಳಿದರು.

      ಭಾರತ ಸರ್ಕಾರ ಹಣಕಾಸು ಸಾಕ್ಷರತೆ ಹಾಗೂ ವಿಮಾಉದ್ಯಮದ ಕುರಿತು ಹೆಚ್ಚು ಒತ್ತು ನೀಡಿದ್ದರೂ ಜನರು ಇನ್ನೂ ಅವರಿಗೆ ಮತ್ತು ಅವರ ಕುಟುಂಬಕ್ಕೆ ತಕ್ಕಷ್ಟು ರಕ್ಷಣೆ ಪಡೆಯಲು ಹೋರಾಟ ನಡೆಸುತ್ತಿದ್ದಾರೆ. ಈ ಸಮೀಕ್ಷೆಯ ಫಲಿತಾಂಶವು ಭಾರತೀಯರು ಹಣಕಾಸು ತಿಳಿವಳಿಕೆಯ ನಿಟ್ಟನಲ್ಲಿ ಸರಿಯಾದ ದಿಕ್ಕಿನತ್ತ ಮುನ್ನಡೆಯುತ್ತಿದ್ದರೂ ಸಂಪೂರ್ಣ ಹಣಕಾಸು ಜವಾಬ್ದಾರಿಯನ್ನು ದೃಢೀಕರಿಸುವ ನಿಟ್ಟಿನಲ್ಲಿ ಸಮಾನ ಅಂತರ ಕಾಯ್ದುಕೊಂಡಿದ್ದಾರೆ. ಆದ್ದರಿಂದ ಭಾರತದಲ್ಲಿ ಟೈಯರ್ 2 ಮತ್ತು ಟೈಯರ್ 3 ನಗರಗಳಲ್ಲಿ ಕಡಿಮೆ ಹಣಕಾಸು ಸಾಕ್ಷರತೆ ಇರುವ ಹಿನ್ನೆಲೆಯಲ್ಲಿ ನಾವು ಈ ಉಪಕ್ರಮದ ಮೂಲಕ ಜನರಿಗೆ ಆರ್ಥಿಕವಾಗಿ ಯೋಜಿಸಲು ನೆರವಾಗುತ್ತಿದ್ದೇವೆ ಎಂದರು.

      ಎಕ್ಸೈಡ್ ಲೈಫ್‍ಇನ್ಷೂರೆನ್ಸ್ ಪ್ರಕಟಿಸಿದ 2018ರ ಹಣಕಾಸು ರೂಢಿಗಳ ಸಮೀಕ್ಷೆಯ ಪ್ರಕಾರ, ಸಮೀಕ್ಷೆಗೆ ಒಳಪಟ್ಟ ಶೇ.30ರಷ್ಟು ಭಾರತೀಯರಿಗೆ ಅವರ ಜೀವನಕ್ಕೆ ತಕ್ಕಷ್ಟು ರಕ್ಷಣೆ ಕುರಿತು ತಿಳಿದಿಲ್ಲ ಶೇ.87ರಷ್ಟು ಜನರಿಗೆ ಅದರ ಕುರಿತು ತಿಳಿದೇ ಇಲ್ಲ ಅಥವಾ ಅವರು ತಮ್ಮನ್ನು ಸಿದ್ಧಗೊಳಿಸಿಕೊಂಡಿಲ್ಲ. ಶೇ.46ರಷ್ಟು ಜನರು ಅವರಿಗೆ ಅವರ ವಾರ್ಷಿಕ ಆದಾಯದ 10 ಪಟ್ಟು ವಿಮೆಯ ರಕ್ಷಣೆ ಅಗತ್ಯವಿದೆ ಎಂದು ಭಾವಿಸುತ್ತಾರೆ, ಶೇ.29ರಷ್ಟು ಜನರು ಮಾತ್ರ ಇದನ್ನು ಪಡೆದಿದ್ದಾರೆ. ಈ ಡಿಜಿಟಲ್ ಸಮೀಕ್ಷೆಯನ್ನು ಎಕ್ಸೈಡ್ ಲೈಫ್ ಇನ್ಷೂರೆನ್ಸ್ ಭಾರತದ 12 ಪ್ರಮುಖ ನಗರಗಳಲ್ಲಿ ನಡೆಸಿದ್ದು ಹಣಕಾಸು ಜವಾಬ್ದಾರಿ ಮತ್ತು ವಿವೇಚನೆ ಕುರಿತು ನಾಗರಿಕರ ಅಭಿಪ್ರಾಯ ಅರ್ಥ ಮಾಡಿಕೊಳ್ಳುವ ಉದ್ದೇಶ ಹೊಂದಿತ್ತು ಎಂದು ತಿಳಿಸಿದರು.

      ಸುದ್ದಿಗೋಷ್ಠಿಯಲ್ಲಿ ಎಕ್ಸಿಡ್ ಲೈಫ್ ಇನ್ಷುರೆನ್ಸ್‍ನ ತರಬೇತುದಾರ ತೇಜೇಂದ್ರ ಪ್ರಸಾದ್, ಶಾಖಾ ವ್ಯವಸ್ಥಾಪಕ ಸತೀಶ್ ಉಪಸ್ಥಿತರಿದ್ದರು.

(Visited 26 times, 1 visits today)