ತುರುವೇಕೆರೆ:

     ಆಸ್ತಿ ವಿಚಾರವಾಗಿ ಕಲಹ ನಡೆದು ಯುವತಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂಬ ಆರೋಪಗಳು ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನಲ್ಲಿ ಕೇಳಿ ಬಂದಿದೆ.

      ತುರುವೇಕೆರೆ ತಾಲೂಕಿನ ಸೋಪನಹಳ್ಳಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸುಮಾರ್ 17 ವರ್ಷದ ಯುವತಿ ದೇವಿಕ ಮೃತ ದುದೈವಿ ಎಂದು ತಿಳಿದುಬಂದಿದೆ.

       ಅಜ್ಜಿ ತಾತನಿಗೆ ಸೇರಿದ ಜಮೀನು ಹಂಚಿಕೆಯ ಹಿನ್ನೆಲೆಯಲ್ಲಿ ಹತ್ಯೆಯಾದ ಯುವತಿ ಮತ್ತು ಅವರ ತಂದೆ ಮತ್ತು ದೊಡ್ಡಪ್ಪಂದಿರ ನಡುವೆ ಮಾತಿನ ವಿವಾದ ಏರ್ಪಾಟಾಗಿ ಮಾತು ಮಿತಿಮೀರಿ ಹಲ್ಲೆಯ ಹಂತ ತಲುಪಿದ್ದು, ಯುವತಿಯ ಮನೆಗೆ ನುಗ್ಗಿ ದೊಡ್ಡಪ್ಪಂದಿರಾದ ನಂಜೇಗೌಡ, ಪಂಚಾಕ್ಷರಯ್ಯ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯಾದ ನಂತರ ದೇವಿಕ ತಾಯಿ ವಸಂತ ಮತ್ತು ತಂದೆ ದೇವಯ್ಯ ಹಲ್ಲೆಯ ಕುರಿತು ತುರುವೇಕೆರೆ ಪೊಲೀಸ್ ಠಾಣೆಗೆ ದೂರು ಕೊಡಲು ತೆರಳಿದ್ದು ಠಾಣೆಯಲ್ಲಿದ್ದ ಪೊಲೀಸರು ದೂರನ್ನು ಸ್ವೀಕಾರ ಮಾಡದೆ ಠಾಣೆಯಲ್ಲಿಯೇ ಬೆಳಗ್ಗೆಯಿಂದ ಸಂಜೆಯವರೆಗೂ ಕೂರಿಸಿಕೊಂಡಿದ್ದು, ಎಫ್‍ಐಆರ್ ಕೂಡ ದಾಖಲು ಮಾಡದೆ ಸ್ವೀಕೃತಿಯನ್ನು ನೀಡದೆ ಹಲ್ಲೆಯಾಗಿ ನೊಂದವರನ್ನೇ ಠಾಣೆಯಲ್ಲಿ ಕೂರಿಸಿಕೊಂಡು ರಕ್ಷಣೆ ನೀಡದಿರುವುದು ಈ ಹತ್ಯೆಗೆ ಬಹುಮುಖ್ಯ ಕಾರಣವಾಗಿದೆ ಎಂದು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದು, ಈ ಕೊಲೆ ಕೇವಲ ಜಮೀನಿನ ವಿಚಾರವಾಗಿ ನಡೆದಿದೆ ಎನ್ನುವುದು ಸಾರ್ವಜನಿಕರ ಅನುಮಾನವಾಗಿದೆ. ಇತ್ತ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಯುವತಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರಬಹುದೆಂಬ ಶಂಕೆ ಕೂಡ ವ್ಯಕ್ತವಾಗಿದೆ.

      ಯುವತಿಯ ದೊಡ್ಡಪ್ಪ ಪಂಚಾಕ್ಷರಯ್ಯ ಎನ್ನುವವರು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಬೆಂಗಳೂರಿನ ಕೆಲಸ ಮಾಡುತ್ತಿದ್ದು, ಇವರು ತಮ್ಮ್ನ ಪ್ರಭಾವ ಬಳಸಿ ಹತ್ಯೆಯನ್ನು ಮಾಡಿರಬಹುದೆಂಬ ಶಂಕೆ ಕೂಡ ವ್ಯಕ್ತವಾಗುತ್ತಿದೆ. ಈ ಹತ್ಯೆ ನಿಜವಾಗಲೂ ಕೊಲೆಯೋ, ಸಾವೋ ಎಂಬುದನ್ನು ಪೊಲೀಸರು ತನಿಖೆ ಕೈಗೊಂಡು ತಿಳಿಯಬೇಕಾಗಿದೆ.

(Visited 10 times, 1 visits today)