ತುಮಕೂರು:

      ತುರುವೇಕೆರೆ ಫ್ಲೆಕ್ಸ್ ಹಾಕಿದ ವಿಚಾರ ಜೆಡಿಎಸ್, ಬಿಜೆಪಿ ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿ ಹಾಲಿ ಶಾಸಕರು ಮಾಜಿ ಶಾಸಕರು ಮತ್ತು ಪೊಲೀಸರ ಎದುರೇ ನಡೆದಿದೆ.

     ತುರುವೇಕೆರೆಯ ತಾಲ್ಲೂಕಿನ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಆಗಸ್ಟ್ 30 ಮತ್ತು 31ರಂದು ಹಮ್ಮಿಕೊಂಡಿದ್ದ ಪ್ರತಿಭಟನಾ ಪಾದ ಯಾತ್ರೆಯ ಫ್ಲೆಕ್ಸ್‍ನಲ್ಲಿ ಆಕ್ಷೇಪಣಾರ್ಹ ಪದ ಬಳಸಲಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮಾಜಿ ಶಾಸಕ ಎಂ ಟಿ ಕೃಷ್ಣಪ್ಪ ಹಾಗು ಬಿಜೆಪಿಯ ಹಾಲಿ ಶಾಸಕ ಮಸಾಲೆ ಜಯರಾಮು ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು, ಮಾರಾಮಾರಿ ಗಲಾಟೆ ನಡೆದು ಪರಿಸ್ಥಿತಿ ಕೈಮೀರುವ ಹಂತದಲ್ಲಿದ್ದಾಗ ಪೊಲೀಸರು ಲಾಟಿ ಚಾರ್ಜ್ ಮಾಡಿದ್ದಾರೆ.

      ಮಾಕಿ ಶಾಸಕೆ ಎಂಟಿ ಕೃಷ್ಣಪ್ಪ ಮತ್ತು ಅವರ ಹಿಂಬಾಲಕರ ಎದುರಿನಲ್ಲಿಯೇ ಹಾಲಿ ಶಾಸಕ ಮಸಾಲೆ ಜಯರಾಮು ತನ್ನ ಬೆಂಬಲಿಗರೊಂದಿಗೆ ಆಗಮಿಸಿ ನಗರದ ರಸ್ತೆಯ ಇಕ್ಕೆಲಗಳಲ್ಲಿ ಅನಧಿಕೃತವಾಗಿ ಹಾಕಲಾಗಿದ್ದ ಪ್ಲೆಕ್ಸ್ ಗಳನ್ನು ತಮ್ಮ ಬೆಂಬಲಿಗರನ್ನು ಬಿಟ್ಟು ಕಿತ್ತುಹಾಕಿಸಿದರು ಎನ್ನಲಾಗಿದ್ದು ಇದರ ಸಂಬಂಧ ನಡುರಾತ್ರಿ ರಸ್ತೆಯಲ್ಲಿಯೇ ಧರಣಿ ನಡೆಸಿದರು.

   ಘಟನೆಯ ವಿವರ:

      ಮಾಯಸಂದ್ರ ಹೋಬಳಿಯ ಗುಡ್ಡೇನಹಳ್ಳಿ ಬಡ ರೈತರು ಬಗರ್ ಹುಕುಂ ಜಮೀನಿನಲ್ಲಿ ತೆಂಗಿನ ಸಸಿಗಳನ್ನು ನೆಟ್ಟಿರುವುದನ್ನು ಶಾಸಕ ಮಸಾಲ ಜಯರಾಂ ತನ್ನ ಪ್ರಬಾವ ಬಳಿಸಿ ಭೂಮಿ ಕಬಳಿಸಲು ಸಸಿ ಕೀಳಿಸಿದ್ದಾರೆಂದು ಆರೋಪಿಸಿ ಆ.30ರಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಪಾದ ಯಾತ್ರೆ ಹಮ್ಮಿಕೊಳ್ಳುವ ಸಂಬಂಧ ಪಟ್ಟಣದ ಕೆಲವೆಡೆ ಫ್ಲೆಕ್ಸ್‍ಗಳನ್ನು ಹಾಕಲಾಗಿತ್ತು.

      ಫ್ಲೆಕ್ಸ್‍ಗಳಲ್ಲಿ ಕೊಲೆಗಡುಕ ಶಾಸಕ ಮಸಾಲಜಯರಾಂ ಎಂಬ ಆಕ್ಷೇಪಣಾರ್ಹ ಪದವನ್ನು ಬಳಸಲಾಗಿದೆಂದು ಪ್ರಶ್ನಿಸಿ ಬಿಜೆಪಿ ಶಾಸಕರ ಬೆಂಬಲಿಗರು ಪಟ್ಟಣದ ಪೊಲೀಸ್ ಠಾಣೆಗೆ ಹಾಗು ಪಟ್ಟಣ ಪಂಚಾಯಿತಿಗೆ ದೂರು ನೀಡಿದ್ದು, ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಮತ್ತು ಪೊಲೀಸ್ ಸಮ್ಮುಖದಲ್ಲಿಯೇ ಹಾಲಿ ಶಾಸಕರು ಎದುರು ನಿಂತು ತಮ್ಮ ಬೆಂಬಲಿಗರಿಂದ ಫ್ಲೇಕ್ಸ್ ತೆರವುಗೊಳಿಸಿದರು ಎನ್ನಲಾಗಿದೆ.

      ಫ್ಲೆಕ್ಸ್ ತೆರವುಗೊಳಿಸುತ್ತರುವ ವಿಚಾರವನ್ನು ಎದುರು ನಿಂತು ಗಮನಿಸುತ್ತಿದ್ದ ಮಾಜಿ ಶಾಸಕರು ಜೆಡಿಸ್ ಕಾರ್ಯಕರ್ತರೊಡಗೂಡಿ ಪಟ್ಟಣದ ತಾಲ್ಲೂಕು ಕಚೇರಿ ರಸ್ತೆಯಲ್ಲಿ ಹಾಲಿ ಶಾಸಕರ ಎದುರಿನಲ್ಲಿಯೇ ಏಕಾಏಕಿ ಧರಣಿಗೆ ಕುಳಿತರು.

     ಆಗ ಅಲ್ಲಿಯೇ ಇದ್ದ ಬಿಜೆಪಿ ಪಕ್ಷದ ಕಾರ್ಯಕತರೂ ಕೂಡ ಫ್ಲೆಕ್ಸ್‍ನಲ್ಲಿ ಆಕ್ಷೇಪಣಾರ್ಹ ಪದ ಬಳಿಸಿರುವ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಎದುರು ಬದುರು ಧರಣಿ ಕುಳಿತು ಎರಡು ಪಕ್ಷಗಳ ಕಡೆಯವರೂ ಪರಸ್ಪರ ನಿಂದನೆ, ಮಾಡಿ ಘೋಷಣೆ ಕೂಗಿದರು.

       ಪರಿಸ್ಥಿತಿ ಕೈಮೀರುವುದನ್ನು ಅರಿತ ಪೊಲೀಸರು ಎರಡು ಗುಂಪಿನ ನಾಯಕರನ್ನು ಮನವೊಲಿಸಲು ಪ್ರಯತ್ನಿಸಿ ಕೊನೆಗೆ ಫ್ಲೆಕ್ಸ್‍ಗಳಲ್ಲಿದ್ದ ಆಕ್ಷೇಪಣಾರ್ಹ ಪದವನ್ನು ಅಳಿಸಿ ಹಾಕಿ ಜೆಡಿಎಸ್ ಕಾರ್ಯಕರ್ತರು ಯಥಾ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಇಟ್ಟರು.

     ಈ ವೇಳೆ ಬಿಜೆಪಿ ಕಾರ್ಯಕರ್ತರು ಫ್ಲೆಕ್ಸ್ ಹರಿದು ಹಾಕುತ್ತಿದ್ದನ್ನು ಮನಗಂಡ ಪೊಲೀಸರು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದರು. ಲಾಠಿ ಪ್ರಹಾರ ನಡೆಸಿದರೂ ಮಾಜಿ ಶಾಸಕರು ಸ್ಥಳ ಬಿಟ್ಟು ಕದಲದೆ ಅಲ್ಲೇ ಉಳಿದು ಪೊಲೀಸರಲ್ಲಿ ಫ್ಲೆಕ್ಸ್ ಹರಿದ ಬಗ್ಗೆ ನ್ಯಾಯ ಕೇಳಿ ತಪ್ಪಿತಸ್ತರಿಗೆ ಶಿಕ್ಷೆಯಾಗ ಬೇಕೇಂದು ಮತ್ತೆ ಧರಣಿ ಕುಳಿತರು.

      ಸ್ಥಳಕ್ಕೆ ಆಗಮಿಸಿದ ಕುಣಿಗಲ್ ಡಿವೈಎಸ್‍ಪಿ ಜಗದೀಶ್ ಎರಡು ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರುಗಳನ್ನು ಮನವೊಲಿಸಿ ತಕ್ಕ ಮಟ್ಟಿಗೆ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಸಫಲವಾಯಿತು .

      ನಗರದ ಪರಿಸ್ಥಿತಿ ಶಾಂತಿಯುತ ವಾಗಿಲ್ಲ ಎರಡು ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರ ನಡುವಿನ ದ್ವೇಷ ತಿಳಿಯಾಗಿಲ್ಲವೆಂದೆನಿಸುತ್ತಿದೆ.
ಒಟ್ಟಾರೆ ಹಾಲಿ ಮಾಜಿಗಳ ಕಿತ್ತಾಟ ಜನರ ಮನಸ್ಥಿತಿಯನ್ನು ಕೆಣಕುತ್ತಿದೆ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯ

(Visited 19 times, 1 visits today)