ತುರುವೇಕೆರೆ:

      ದೊಡ್ಡೇನಹಳ್ಳಿಯಿಂದ ಹುಲ್ಲೇಕೆರೆಯವರೆಗೆ ನಿರ್ಮಾಣವಾಗಿರುವ ಡಾಂಬರು ರಸ್ತೆ ಉತ್ತಮ ಗುಣಮಟ್ಟದಿಂದ ಕೂಡಿದ್ದು, ಗುತ್ತಿಗೆದಾರರು ಸುಸಜ್ಜಿತವಾದ ರಸ್ತೆ ನಿರ್ಮಾಣಮಾಡಿದ್ದು, ಗ್ರಾಮಸ್ಥರುಗಳ ಪರವಾಗಿ ಅಭಿನಂಧಿಸುವುದಾಗಿ ರಾಮಡೀಹಳ್ಳಿ ಕಿರಣ್ ತಿಳಿಸಿದರು.

      ತಾಲೂಕಿನ ದೊಡ್ಡೇನಹಳ್ಳಿಯಿಂದ ಹುಲ್ಲೇಕೆರೆಯವರೆಗೆ ನಿರ್ಮಾಣವಾಗಿರುವ ರಸ್ತೆ ಮಾರ್ಗ ಮಧ್ಯೆ ಮಾಚೇನಹಳ್ಳಿ ಸಮೀಪ ರಸ್ತೆ ಅಕ್ಕಪಕ್ಕದ ಗ್ರಾಮಸ್ಥರುಗಳೊಂದಿಗೆ ರಸ್ತೆ ಗುಣಮಟ್ಟ ಕುರಿತು ಪತ್ರಕರ್ತರೊಂದಿಗೆ ಗ್ರಾಮದ ಮುಖಂಡ ರಾಮಡೀಹಳ್ಳಿ ಕಿರಣ್ ಮಾತನಾಡಿದರು.

     ಕಳೆದ ಹದಿನೈದು ವರ್ಷಗಳಿಂದ ಈ ಭಾಗದ ರಸ್ತೆ ಕಿತ್ತು ಆಳುದ್ದ ಗುಂಡಿ ಬಿದಿದ್ದರೂ ಜನಪ್ರತಿನಿಧಿಗಳಾದವರು ದಂಡಿನಶಿವರ ಭಾಗಕ್ಕೂ ನಮಗೂ ಸಂಬಂಧವಿಲ್ಲದವರಂತೆ ವರ್ತಿಸುತ್ತಿದ್ದರು, ಸನ್ಮಾನ್ಯ ಶಾಸಕರಾದ ಮಸಾಲ ಜಯರಾಮಣ್ಣನವರು ಶಾಸಕರದ ನಂತರ 1.50ಕೋಟಿ ವೆಚ್ಚದಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ, ಅದರೆ ಅವರ ಏಳಿಗೆ ಸಹಿಸದ ಕಿಡಿಗೇಡಿಯೊಬ್ಬ ರಸ್ತೆ ಗುಣಮಟ್ಟದ ಬಗ್ಗೆ ಸ್ಥಳೀಯ ಗ್ರಾಮಸ್ಥರುಗಳನ್ನು ಬಿಟ್ಟು ಬೇರೆಯೂರಿನ ಗ್ರಾಮಸ್ಥರೊಡಗೂಡಿ ರಸ್ತೆ ಕಳಪೆಯಾಗಿದೆ ಎಂದು ಪತ್ರಿಕಾ ಹೇಳಿಕೆ ನೀಡುತ್ತಿರುವುದು ಹಸ್ಯಾಸ್ಪದ.

       ರಸ್ತೆ ನಿರ್ಮಾಣ ಸಂದರ್ಭದಲ್ಲಿ ಖುದ್ದು ನಾವೇ ನಿಂತು ಅಂದಾಜು ಪಟ್ಟಿಯನ್ನು ಕಯ್ಯಲಿಡಿದು ಗುತ್ತಿಗೆದಾರರಿಂದ ಕೆಲಸವನ್ನು ಪಡೆದಿದ್ದೇವೆ, ರಸ್ತೆ ಗುಣಮಟ್ಟದ ಕುರಿತು ಮಾತನಾಡುವ ಮಂಚೇನಹಳ್ಳಿ ಕೃಷ್ಣಮೂರ್ತಿ ರಸ್ತೆ ನಿರ್ಮಾಣ ಹಂತದಲ್ಲಿ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ರಸ್ತೆ ನಿರ್ಮಾಣದ ಬಗ್ಗೆ ಚಕಾರವೆತ್ತದೆ ಕಾಮಗಾರಿ ಮುಗಿದು ಬಿಲ್‍ಆಗುವ ಹಂತದಲ್ಲಿ ಗುಣಮಟ್ಟದ ಬಗ್ಗೆ ಪ್ರಶ್ನಿಸುತ್ತಿರುವುದು ಬ್ಲಾಕ್‍ಮೇಲ್ ತಂತ್ರದಂತೆ ನಮಗೆ ಕಾಣುತ್ತಿದೆ ಎಂದು ಸಂದೇಹ ವ್ಯಕ್ತಪಡಿಸಿದರು.

       ಹುಚ್ಚೇಗೌಡ ಮಾತನಾಡಿ ಮಂಚೇನಹಳ್ಳಿ ಕೃಷ್ಣಮೂರ್ತಿ ಹಾಗೂ ಗೊಪ್ಪೇನಹಳ್ಳಿ ಅಶೋಕ್ ಇವರುಗಳು ಅರ್ಜಿ ಮೇಸ್ಟರುಗಳು ಆರ್.ಟಿ.ಐ. ಅರ್ಜಿಗಳನ್ನು ಹಾಕಿ ಸರ್ಕಾರಿ ಅಧಿಕಾರಿಗಳಿಗೆ ಸತಾಸುಮ್ಮನೆ ತೊಂದರೆ ಕೊಡುವುದಲ್ಲದೆ ಗುತ್ತಿಗೆದಾರರುಗಳನ್ನು ಹಣಕ್ಕಾಗಿ ಬ್ಲಾಕ್‍ಮೈಲ್ ಮಾಡುವ ಪ್ರವೃತ್ತಿ ಮೈಗೂಡಿಸಿಕೊಂಡಿದ್ದಾರೆ, ಮಂಚೇನಹಳ್ಳಿ ಕೃಷ್ಣಮೂರ್ತಿ ಎನ್ನುವ ವ್ಯಕ್ತಿ ಪ್ರಾಂಶುಪಾಲರೊಬ್ಬರಿಗೆ ಹಣಕ್ಕಾಗಿ ಬೇಡಿಕೆಯಿಟ್ಟಿರುವ ಆಡಿಯೋ ನಮ್ಮ ಬಳಿಯಿದ್ದು, ಇಂತಹ ವ್ಯಕ್ತಿಗಳಿಂದ ರಸ್ತೆ ಗುಣಮಟ್ಟದ ಬಗ್ಗೆ ಹೇಳಿಸಿಕೊಳ್ಳುವ ಅವಶ್ಯಕತೆಯಿಲ್ಲ ಎಂದರು.

      ಈ ಸಂದರ್ಭದಲ್ಲಿ ಗ್ರಾಮಸ್ಥರುಗಳಾದ ಆನಂದ್, ಗುರುಪ್ರಸಾದ್, ಚಿಕ್ಕಣ್ಣ, ಜನಾರ್ಧನ್, ಸಾಗರ್, ರವಿಕುಮಾರ್, ಸೇರಿದಂತೆ ಇತರರು ಇದ್ದುರು. 

 

(Visited 9 times, 1 visits today)