ತುರುವೇಕೆರೆ:


ತುರುವೇಕೆರೆಯಲ್ಲಿ ಭಾನುವಾರ ರಾತ್ರಿ ಸತತವಾಗಿ ಸುರಿದ ಮಳೆಗೆ ತಾಲ್ಲೂಕಿನ ಬೊಮ್ಮೇನಹಳ್ಳಿ ಗ್ರಾಮ ಜಲಾವೃತವಾದ ಪರಿಣಾಮ ವ್ಯವಸ್ಥಿತ ಚರಂಡಿ ನಿರ್ಮಾಣಕ್ಕೆ ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ರಸ್ತೆ ತಡೆ ನಡೆಸುವ ಮೂಲಕ ತಾಲ್ಲೂಕು ಆಡಳಿತದ ವಿರುದ್ದ ಹಿಡಿಶಾಪ ಹಾಕಿದರು.
ತಾಲ್ಲೂಕಿನ ಗಡಿ ಭಾಗವಾದ ಬೊಮ್ಮೇನಹಳ್ಳಿ ಗ್ರಾಮ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವುದರಿಂದ ಬೆಟ್ಟದಿಂದ ಬಂದಂತಹ ನೀರು ವ್ಯವಸ್ಥಿತ ರೀತಿಯ ಚರಂಡಿಯಿಲ್ಲದೆ ರಾತ್ರಿ ಸುರಿದ ಭಾರಿ ಮಳೆಗೆ ಊರಿನೊಳಗಡೆ ನೀರು ನುಗ್ಗಿ ತಗ್ಗು ಪ್ರದೇಶವಾದ ದಲಿತ ಕಾಲೂನಿಯ ಬಹುತೇಕ ಮನೆಗಳಲ್ಲಿ ನೀರು ತುಂಬಿಕೊಂಡ ಫರಿಣಾಮ ನೀರನ್ನು ಹೊರ ಹಾಕುತ್ತಿದ್ದ ದೃಷ್ಯ ಸಾಮಾನ್ಯವಾಗಿ ಕಂಡುಬಂತು.
ಪ್ರತಿನಿತ್ಯ ಮಳೆ ಬಂತೆಂದರೆ ಇಲ್ಲಿನ ದಲಿತ ಕಾಲೂನಿ ಮಹಿಳೆಯರಿಗೆ ನೀರನ್ನು ಹೋರಹಾಕುವ ಸಮಸ್ಯೆಯಿಂದ ರೋಸಿಹೋಗಿದ್ದ ಮಂದಿ ಬೊಮ್ಮೇನಹಳ್ಳಿ ಗ್ರಾಮದ ಮುಖ್ಯರಸ್ತೆಯನ್ನು ಬಂದ್ ಮಾಡುವ ಮೂಲಕ ಚರಂಡಿ ವ್ಯವಸ್ಥೆಯನ್ನು ಸರಿಪಡಿಸುವಂತೆ ಹಾಗೂ ತಾಲ್ಲೂಕು ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ ಉರುಳಿಬಿದ್ದ ಮನೆಗಳಿಗೆ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ನೆಡಸಿದರು.
ಪ್ರತಿಭಟನೆ ವೇಳೆ ಮಳೆಯಿಂದ ಮನೆ ಕಳೆದುಕೊಂಡಿದ್ದ ಗ್ರಾಮದ ಯುವಕ ನವೀನ್ ಮಾತನಾಡಿ ಮಳೆಬಂತೆಂದರೆ ಈ ಸಮಸ್ಯೆ ನಮಗೆ ತಪ್ಪಿದ್ದಲ್ಲ ಮುಖ್ಯರಸ್ತೆಯ ಬದಿಯಲ್ಲಿ ಚರಂಡಿಯನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ಮಿಸದೆ ಬೆಟ್ಟದಿಂದ ನೀರು ನೇರವಾಗಿ ನಮ್ಮಗಳ ಮನೆಗೆ ನುಗ್ಗಿದೆ ನಾವು ವಾಸಿಸುತ್ತಿದ್ದ ಮನೆಯಲ್ಲಿ ನೀರು ತುಂಬಿಕೊಂಡಿದ್ದು, ಈಡೀ ಕಾಲೂನಿಯೇ ಜಲಾವೃತವಾಗಿದೆ ಕೂಡಲೇ ತಾಲ್ಲುಕು ಆಡಳಿತ ಚರಂಡಿಯನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದರು.
ಹನ್ನೊಂದು ಗಂಟೆ ಸುಮಾರಿಗೆ ಸ್ಥಳಕ್ಕೆ ತಹಶೀಲ್ದಾರ್ ಆಗಮಿಸಿ ಚರಂಡಿ ವ್ಯವಸ್ಥೆ ಸರಿಪಡಿಸಿಕೊಡುತ್ತೇವೆಂದು ಭರವಸೆ ನೀಡಿದ ಮೇಲೆ ರಸ್ತೆ ತಡೆಯನ್ನು ವಾಪಸ್ ಪಡೆಯಲಾಯಿತು. ನಂತರ ತಹಶೀಲ್ದಾರ್ ಗ್ರಾಮದ ಸುತ್ತು ಒಂದು ಸುತ್ತು ಸಂಚರಿಸಸಿ ವಾಸ್ತುವತೆ ಅರಿತು ಸುಮಾರು 25 ಮನೆಗಳಿಗೆ ನೀರು ನುಗ್ಗಿದ್ದು, ಕೂಡಲೇ ಇವರಿಗೆ ಸರ್ಕಾರದಿಂದ ಬರುವ ಪರಿಹಾರವನ್ನು ಒದಗಿಸಸಿಕೊಡಲಾಗುವುದೆಂದು ತಿಳಿಸಿದರಲ್ಲದೆ ಚಂರಂಡಿ ವ್ಯವಸ್ಥೆಯನ್ನು ಇಂದೇ ಕಲ್ಪಿಸಿಕೊಡುವಂತೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ಸೂಚಿಸಿದರಲ್ಲದೆ ನಿರ್ವಹಣೆ ಮೇಲ್ವಿಚಾರಣೆಗೆ ಗ್ರಾಮ ಲೆಕ್ಕಾಧಿಕಾರಿ ರಮೆಶ್ ಅವರನ್ನು ಮೊಕ್ಕಾಂ ಹೂಡುವಂತೆ ತಿಳಿಸಿದರು.
ತಹಶೀಲ್ದಾರ್ ಜೊತೆ ಕಂದಾಯ ತನಿಖಾಧಿಕಾರಿ ಶಿವಕುಮಾರ್, ಗ್ರಾಮ ಲೆಕ್ಕಾಧಿಕಾರಿ ರಮೇಶ್, ಸ್ಥಳ ಪರಿಶೀಲಿಸಿದರಲ್ಲದೆ ,ಇವರ ನಂತರ ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ ಸತೀಶ್ ಕುಮಾರ್, ಪಿ.ಡಿ.ಒ.ಸೋಮಶೇಖರ್ ಸ್ಥಳ ಪರಿಶೀಲಿಸಿದರು.
ರಸ್ತೆ ತಡೆ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಂಗಯ್ಯ, ರಂಗಸ್ವಾಮಿ, ರಂಗನಾಥ್, ಲೋಕೇಶ್, ತ್ಯಾಗರಾಜು, ನರಸಯ್ಯ, ಲಕ್ಷ್ಮಯ್ಯ, ರಂಗರಾಮಯ್ಯ, ಬಸವರಾಜು, ನಾಗರಾಜು, ಓಂಕಾರಯ್ಯ, ಗಂಗಾಧರ್ ಸೇರಿದಂತೆ ಮಹಿಳೆಯರು ಇದ್ದರು.

(Visited 1 times, 1 visits today)