ತುಮಕೂರು :

      ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಂತರಸನಹಳ್ಳಿ ಹೂವು, ಹಣ್ಣು, ತರಕಾರಿ ಮಾರುಕಟ್ಟೆ ಉಪಪ್ರಾಂಗಣದಲ್ಲಿ ಅಂಗಡಿ ಮಳಿಗೆಗಳ ಮುಂಭಾಗದ ಪುಟ್ ಪಾತ್ ರಸ್ತೆ ಮತ್ತು ಸಮಿತಿಯ ಜಾಗವನ್ನು ಅತಿಕ್ರಮಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಇದರಿಂದ ಸಾರ್ವಜನಿಕರಿಗೆ, ರೈತರಿಗೆ, ಓಡಾಡಲು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದರಿಂದ ವರ್ತಕರುಗಳನ್ನು ತಮ್ಮ ತಮ್ಮ ಅಂಗಡಿಗಳ ಒಳಭಾಗದಲ್ಲಿಯೇ ವ್ಯಾಪಾರ ವಹಿವಾಟು ನಡೆಸುವಂತೆ ತಿಳಿಸಿ ಅತಿಕ್ರಮಿಸಿದ ಜಾಗವನ್ನು ಎ.ಪಿ.ಎಂ.ಸಿ ಕಾರ್ಯದರ್ಶಿಯಾದ ಡಿ.ಆರ್.ಪುಷ್ಪ ಹಾಗೂ ನಗರ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ವಿಜಯಲಕ್ಷ್ಮೀ, ಸಂಚಾರಿ ಠಾಣೆಯ ಎಸ್‍ಎಸ್‍ಐ ಆನಂದಯ್ಯ ಇವರುಗಳು ದಿನಾಂಕ:12-03-2020 ಬೆಳಿಗ್ಗೆ 7 ರಿಂದ ಕಾರ್ಯಾಚರಣೆ ಕೈಗೊಂಡು ತೆರವುಗೊಳಿಸಿದರು.

      ಈ ಸಮಯದಲ್ಲಿ ಸಮಿತಿಯ ಸಹಾಯಕ ಕಾರ್ಯದರ್ಶಿಗಳಾದ ವೈ.ಎಂ.ಲಕ್ಷ್ಮೀಕಾಂತ, ಹೆಚ್.ಜಿ.ಶ್ರೀನಿವಾಸ, ಡಿ.ಆರ್.ಉಷಾ, ಹಾಗೂ ಸಿಬ್ಬಂದಿಗಳಾದ ರಾಜಲಕ್ಷ್ಮಿ, ಶಂಕರ, ಹನುಮಂತರಾಜು.ಟಿ.ಎಂ, ಎ.ಆನಂದಕುಮಾರ್, ಜಿ.ನಂದೀಶಯ್ಯ, ಮತ್ತು ಪೋಲೀಸ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

(Visited 6 times, 1 visits today)