ತುಮಕೂರು:

      ನಗರದ ಅಶೋಕ ರಸ್ತೆಯಲ್ಲಿರುವ ಎಂಪ್ರೆಸ್ ಸರಕಾರಿ ಬಾಲಕೀಯರ ಪ್ರೌಢಶಾಲೆಯಲ್ಲಿ ಇನ್ಸ್‍ಪೈರ್ ರೌಂಡ್ ಟೇಬಲ್-327 ಸಂಸ್ಥೆ ವತಿಯಿಂದ ಮಕ್ಕಳ ಮೇಲೆ ನಡೆಯುವ ಲೈಂಗಿಕ ಕಿರುಕುಳ ಹಾಗೂ ಹೆಣ್ಣು ಮಕ್ಕಳ ಸುರಕ್ಷತೆ ಕುರಿತಂತೆ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

      ಎಂಪ್ರೆಸ್ ಸರಕಾರಿ ಬಾಲಕೀಯರ ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದ ಶ್ರೀಮತಿ ಪದ್ಮಾವತಿ ಅವರ ಅಧ್ಯಕ್ಷತೆ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ಪ್ರಸ್ತಾವಿಕ ನುಡಿಗಳನ್ನಾಡಿದ ಇನ್ಸ್‍ಪೈರ್ ರೌಂಡ್ ಟೇಬಲ್-327ನ ತುಮಕೂರು ಜಿಲ್ಲಾ ಅಧ್ಯಕ್ಷ ಸಂದೇಶಕುಮಾರ್,ರೌಂಡ್‍ಟೇಬಲ್ ರಾಜಕೀಯ ರಹಿತ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು,ಸಮಾನ ಮನಸ್ಕ ಗೆಳೆಯರು ಸೇರಿ ಸಮಾಜ ಸೇವೆಯ ಉದ್ದೇಶದಿಂದ ಹಲವು ಯೋಜನೆಗಳನ್ನು ರೂಪಿಸುತ್ತಾ ಬಂದಿದೆ. ಇದರಲ್ಲಿ ಪ್ರಮುಖವಾಗಿ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಸುರಕ್ಷತೆಗೆ ಹೆಚ್ಚು ಒತ್ತು ನೀಡುತ್ತಿದ್ದು, ಹೆಣ್ಣು ಮಕ್ಕಳು ಕಲಿಯುತ್ತಿರುವ ಸರಕಾರಿ ಶಾಲೆಗಳನ್ನು ಗುರುತಿಸಿ, ಆ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಜೊತೆಗೆ, ಮಕ್ಕಳಿಗೆ ಗುಡ್ ಟಚ್, ಬ್ಯಾಡ್‍ಟೆಚ್ ಬಗ್ಗೆ ಮಾಹಿತಿ ನೀಡುವುದು, ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದುವರೆಗೂ ಭಾರತದಾದ್ಯಂತ 6187 ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಅವಶ್ಯವಿದ್ದವರು ಇನ್ಸ್‍ಫೈರ್ ರೌಂಡ್ ಟೇಬಲ್-327ನ್ನು ಸಂಪರ್ಕಿಸಿದರೆ,ತಮ್ಮ ಕೈಲಾದ ಸೇವೆಯನ್ನು ನೀಡಲು ಸಿದ್ದರಿರುವುದಾಗಿ ತಿಳಿಸಿದರು. 

      ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಡಾ.ಗಿರಿಜಾ ಸಂಜಯ್, ಪ್ರೌಡಾ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳು ಅತ್ಯಂತ ಜಾಗರೂಕತೆಯಿಂದ ಇರಬೇಕು.ಅದರಲ್ಲಿಯೂ ಋತುಶ್ರಾವದ ಸಮಯದಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕಿದೆ.ನಿರ್ಲಕ್ಷದಿಂದ ಸೊಂಕಿಗೆ ಒಳಗಾದರೆ ಹೆಚ್ಚು ಬಾಧೆ ಪಡಬೇಕಾಗುತ್ತದೆ.ಅಲ್ಲದೆ ತಾವು ಓಡಾಡುವ ದಾರಿಯಲ್ಲಿ, ಮನೆಯ ಪರಿಸರ, ಶಾಲೆಗಳಲ್ಲಿ ಸಹಪಾಠಿಗಳು,ಗೆಳೆಯರು,ಪರಿಚಯಸ್ಥರಿಂದ ಹೇಗೆ ಅಂತರ ಕಾಯ್ದುಕೊಳ್ಳಬೇಕು. ತರವಲ್ಲದ ನಡವಳಿಕೆ ಕಂಡು ಬಂದಲ್ಲಿ ತಕ್ಷಣವೇ ಸಂಕೋಚವಿಲ್ಲದೇ ಶಿಕ್ಷಕರು ಅಥವಾ ಪೋಷಕರಿಗೆ ತಿಳಿಸಿ ರಕ್ಷಣೆ ಪಡೆಯಬೇಕು. ತಾಯಿಯಲ್ಲದೇ ಬೇರೆಯವರು ದೇಹದ ಕೆಲಭಾಗಗಳನ್ನು ಸ್ಪರ್ಶಿಸುವಂತಿಲ್ಲ, ಈ ಬಗ್ಗೆ ಒಳ್ಳೆಯ ಸ್ಪಶರ್À ಯಾವುದು. ಕೆಟ್ಟ ಸ್ಪರ್ಶ ಯಾವುದು ಎಂಬುದರ ಮಾಹಿತಿ ನೀಡಿ ಎಚ್ಚರಿಕೆ ವಹಿಸುವಂತೆ ತಿಳುವಳಿಕೆ ನೀಡಿದರು.

      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂಪ್ರೆಸ್ ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದ ಶ್ರೀಮತಿ ಪದ್ಮಾವತಮ್ಮ ಮಾತನಾಡಿ, ನಮ್ಮ ಶಾಲೆಯಲ್ಲಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಸೇರಿ 2300ಕ್ಕೂ ಅಧಿಕ ಹೆಣ್ಣು ಮಕ್ಕಳು ಕಲಿಯುತ್ತಿದ್ದು, ಇನ್ಸ್‍ಫೈರ್ ರೌಂಡ್‍ಟೇಬಲ್ ಸಂಸ್ಥೆಯವರು, ಮಕ್ಕಳಿಗೆ ಲೈಂಗಿಕ ದೌರ್ಜನ್ಯ ತೆಡೆಯುವ ನಿಟ್ಟಿನಲ್ಲಿ ಕಾರ್ಯಕ್ರಮ ಏರ್ಪಡಿಸಿರುವುದು ಸ್ವಾಗತಾರ್ಹ. ಮಕ್ಕಳು ಇಂದು ವೈದ್ಯರಾದ ಡಾ.ಗಿರಿಜಾ ಅವರು ಹೇಳಿರುವ ಕೆಲವು ಸೂಕ್ಷ್ಮ ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಎಚ್ಚರಿಕೆಯಿಂದ ನಡೆದುಕೊಳ್ಳುವಂತೆ ಸಲಹೆ ನೀಡಿದರು.

      ವೇದಿಕೆಯಲ್ಲಿ ರುಷಬ್,ಯೋಗೀಶ್,ಅರಾಧ್ಯ, ಅರ್ಜುನ, ಶಂಕರ್, ಅಂಜುಮನ್,ಶಿಕ್ಷಕರಾದ ರಾಮಯ್ಯ,ರಿಜ್ವಾನ್ ಪಾಷ ಮತ್ತಿತರರು ಉಪಸ್ಥಿತರಿದ್ದರು.

(Visited 50 times, 1 visits today)