ತುಮಕೂರು: ಭಾರತ ಪಾಕ್ ನಡುವಿನ ಯುದ್ಧದ ಕಾರ್ಮೋಡ ಕವಿದಿರುವ ಹಿನ್ನೆಲೆಯಲ್ಲಿ ತುಮಕೂರು ರೈಲ್ವೆ ನಿಲ್ದಾಣದಲ್ಲಿ ವಿದ್ವಂಸಕ ಕೃತ್ಯ ತಪಾಸಣಾ ತಂಡವು ನಿರಂತರವಾಗಿ ಮುಂಜಾಗ್ರತಾ ಕ್ರಮವಾಗಿ ಪರಿಶೀಲನೆ ನಡೆಸುತ್ತಿದೆ.
ಅಲ್ಲದೆ ತುಮಕೂರು ನಗರದ ಪ್ರಮುಖ ಜನನಿ ಬಿಡ ಪ್ರದೇಶಗಳಾದ ಪ್ರವಾಸಿ ಮಂದಿರ, ಬಸ್ ನಿಲ್ದಾಣ, ಮಾಲ್ ಗಳು ಸೇರಿದಂತೆ ಅನೇಕ ಕಡೆಗಳಲ್ಲಿ ನೆನ್ನೆಯಿಂದ ನಿರಂತರವಾಗಿ ತಪಾಸಣೆ ನಡೆಸುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಅವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ತಂಡ ಜನರ ಬಳಿ ಜಾಗೃತಿ ಮೂಡಿಸುತ್ತಿದೆ.
ವಿದ್ವಂಸಕ ಕೃತ್ಯಗಳ ಕುರಿತು ಸುಳಿವು ದೊರೆತರೆ ತಕ್ಷಣ ಸಮೀಪದ ಪೊಲೀಸ್ ಸಿಬ್ಬಂದಿಗಳಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಅಲ್ಲದೆ ಕಟ್ಟೆಚ್ಚರ ವಹಿಸುವಂತೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಮುಂದಾಗ ಬೇಕಿದೆ ಎಂದು ಹೇಳುತ್ತಿದ್ದಾರೆ.
ನಿನ್ನೆಯಿಂದ ನಿರಂತರವಾಗಿ ತುಮಕೂರು ನಗರದಲ್ಲಿಡೆ ಪೊಲೀಸ್ ಸಿಬ್ಬಂದಿಗಳು ಭಾರೀ ಅಲರ್ಟ್ ಆಗಿದ್ದಾರೆ.
(Visited 1 times, 1 visits today)