ಹುಳಿಯಾರು: ಕಳೆದ ಮರ‍್ನಲ್ಕು ವರ್ಷಗಳಿಂದಲೂ ಹುಳಿಯಾರು ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಕೇಳಿಕೊಂಡರೂ ಸ್ಪಂಧಿಸಿಲ್ಲ. ಈ ವರ್ಷ ಬಿಸಿಲಿನ ಝಳ ಹೆಚ್ಚಾಗಿದ್ದು ಈ ಬೇಸಿಗೆಯಲ್ಲಾದರೂ ದಾಹ ತಣಿಸಲು ನೀರು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಪ್ರಯಾಣಿಕರು ಹುಳಿಯಾರು ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಮನವಿ ಮಾಡಿದ್ದಾರೆ.
ಹುಳಿಯಾರು ಮೈಸೂರು, ಚಿತ್ರದುರ್ಗ, ಹಾಸನ, ಬೆಂಗಳೂರು, ಹೊಸದುರ್ಗ, ಬಳ್ಳಾರಿ ಹೀಗೆ ರಾಜ್ಯದ ಪ್ರಮುಖ ಸ್ಥಳಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸುತ್ತದೆ. ಹಾಗಾಗಿ ಹುಳಿಯಾರು ಬಸ್ ನಿಲ್ದಾಣಕ್ಕೆ ಸಸ್ತಾçರು ಜನರು ನಿತ್ಯ ಬಂದೋಗುತ್ತಾರೆ. ಅಲ್ಲದೆ ಶಾಲಾಕಾಲೇಜಿಗೆ ಮಕ್ಕಳು, ಆಸ್ಪತ್ರೆಗಳಿಗೆ ರೋಗಿಗಳು, ಬ್ಯಾಂಕ್‌ಗಳಿಗೆ ವೃದ್ಧರು, ಅಂಗವಿಕಲರು, ವ್ಯಾಪಾರ ವಹಿವಾಟಿಗೆ ಸಹ ಇಲ್ಲಿಗೆ ಜನರು ಬರುತ್ತಾರೆ. ಆದರೆ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು, ನಾನಾ ಕಡೆಯಿಂದ ಬಸ್ ಹಿಡಿಯಲು ಆಗಮಿಸಿದ ಪ್ರಯಾಣಿಕರಿಗೆ ನೀರಿನ ಬವಣೆಯ ಬಿಸಿ ತಟ್ಟಿದೆ.
ಈ ಬಸ್ ನಿಲ್ದಣದಲ್ಲಿ ಮುದ್ದಹನುಮೇಗೌಡರು ಸಂಸದರಾಗಿದ್ದ ಸಂದರ್ಭದಲ್ಲಿ ಶುದ್ದ ನೀರಿನ ಘಟಕ ನಿರ್ಮಿಸಿದ್ದರು. ಆದರೆ ಕಳೆದ ಮರ‍್ನಲ್ಕು ವರ್ಷಗಳ ಹಿಂದೆ ಈ ಘಟಕ ಕೆಟ್ಟಿದ್ದು ದುರಸ್ತಿಗೆ ಮಾತ್ರ ಪಂಚಾಯ್ತಿ ಮುಂದಾಗಿಲ್ಲ. ಪರಿಣಾಮ ಬಸ್ ನಿಲ್ದಾಣದಲ್ಲಿ ನೀರಿನ ಸಮಸ್ಯೆ ಸೃಷ್ಟಿಯಾಗಿದೆ. ಬೇಸಿಗೆ ಕಾಲದಲಂತೂ ಪರಿಸ್ಥಿತಿ ಮತಷ್ಟು ಬಿಗಡಾಯಿಸುತ್ತದೆ. ಹಣವುಳ್ಳವರು ದುಡ್ಡು ಕೊಟ್ಟು ಮಿನರಲ್ ವಾಟರ್ ಖರೀಧಿಸಿ ಕುಡಿಯುತ್ತಿದ್ದಾರೆ. ಉಳಿದವರು ಬಾಯಾರಿಕೆಯಲ್ಲೇ ತಮ್ಮೂರು ಸೇರುವ ಅನಿವಾರ್ಯತೆ ಇದೆ.
ರಾಜ್ಯದ ಹಲವು ನಗರಗಳಿಗೆ ಹುಳಿಯಾರು ಮಾರ್ಗವಾಗಿ ಬಸ್‌ಗಳು ಓಡಾಡುವುದರಿಂದ ಅಹೋರಾತ್ರಿ ಬಸ್‌ಗಳು ಓಡಾಡುತ್ತವೆ. ರಾತ್ರಿ ಹೋಟೆಲ್‌ಗಳು ಮುಚ್ಚಿರುತ್ತವೆ. ಅಂಥಹ ಸಂದರ್ಭದಲ್ಲಿ ಪ್ರಯಾಣಿಕರ ಗೋಳು ಹೇಳತೀರದು. ರಾತ್ರಿ ತಂಗುವ ಬಸ್‌ಗಳ ಚಾಲಕ-ನಿವಾಹರ್ಕರಿಗೆ ಇದರ ಶಾಕ್ ಮುಟ್ಟುತ್ತದೆ. ಅಲ್ಲಿನ ಫುಟ್ ಫಾತ್ ವ್ಯಾಪಾರಿಗಳಿಗೂ ನೀರಿಗಾಗಿ ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ.
ಕಳೆದ ವರ್ಷ ಬಸ್ ನಿಲ್ದಾಣಲ್ಲಿನ ಪ್ರಯಣಿಕರ ನೀರಿನ ಹಾಹಾಕಾರ ನೋಡಲಾಗದೆ ಇಲ್ಲಿನ ನಿರಾಶ್ರೀತರ ಕ್ಷೇಮಾಭಿವೃದ್ಧಿ ಸಂಘದವರು ಬೇಸಿಗೆ ಕಾಲದಲ್ಲಿ ಅರವಟಿಗೆ ಸ್ಥಾಪಿಸಿ ನಿತ್ಯ ಸಂಘದ ಮಹಿಳೆಯರೇ ನೀರು ತಂದುಹಾಕಿ ಶುದ್ಧ ನೀರು ಕೊಡುತ್ತಿದ್ದರು. ಆದರೆ ಈ ವರ್ಷ ಪಂಚಾಯ್ತಿಯವರೇ ಕ್ಯಾನ್‌ನಲ್ಲಿ ನೀರು ಇಡುತ್ತೇನೆನ್ನುತ್ತಾರೆ. ಆದರೆ ಆಗೊಮ್ಮೆ, ಈಗೊಮ್ಮೆ ಕಾಟಾಚಾರಕ್ಕೆ ನೀರಿನ ಕ್ಯಾನ್ ಇಡುತ್ತಿದ್ದಾರೆ. ರಜೆಯಲ್ಲಿ, ಮುಂಜಾನೆ, ರಾತ್ರಿ ನೀರಿನ ವ್ಯವಸ್ಥೆ ಇರುವುದಿಲ್ಲ.
ಪಂಚಾಯ್ತಿಗೆ ಖಾಸಗಿ ಬಸ್ ಸುಂಕ, ಫುಟ್‌ಫಾತ್ ಸುಂಕ, ವಾಣಿಜ್ಯ ಮಳಿಗೆಗಳ ಬಾಡಿಗೆ ಹೀಗೆ ಮಾಸಿಕ ಲಕ್ಷಾಂತರ ರೂ ಸಂಗ್ರಹವಾಗುತ್ತಿದ್ದರೂ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಅಂದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಹಣವಂತರು ಮಿನರಲ್ ವಾಟರ್‌ಗಳನ್ನು ತೆಗೆದುಕೊಳ್ಳುತ್ತಾರೆ. ಬಡ ಪ್ರಯಾಣಿಕರು ಏನು ಮಾಡಬೇಕು. ಪ್ರಯಾಣಿಕರ ಅನುಕೂಲಕ್ಕಾಗಿ ಪಂಚಾಯ್ತಿ ತಕ್ಷಣ ನೀರಿನ ವ್ಯವಸ್ಥೆ ಮಾಡಬೇಕಿದೆ.
ಶೀಘ್ರ ನೀರಿನ ವ್ಯವಸ್ಥೆ ಮಾಡುತ್ತೇವೆ
ಹುಳಿಯಾರು ಬಸ್ ನಿಲ್ದಾಣದಲ್ಲಿ ಶುದ್ಧ ನೀರಿನ ಘಟಕ ನಿರ್ಮಾಣಕ್ಕೆ ೫ ಲಕ್ಷ ರೂ. ಮೀಸಲಿಡಲಾಗಿದೆ. ಅಲ್ಲದೆ ಸಾಮಾನ್ಯ ಸಭೆಯ ಅನುಮೋದನೆ ಸಹ ಸಿಕ್ಕಿದೆ. ಶೀಘ್ರದಲ್ಲೇ ಟೆಂಡರ್ ಕರೆದು ೧ ರೂ.ಕಾಯಿನ್ ಹಾಕಿ ೧ ಲೀ. ನೀರು ಹಿಡಿದುಕೊಳ್ಳುವ ಆರ್‌ಒ ಪ್ಲಾಂಟ್ ನಿರ್ಮಿಸುತ್ತೇವೆ. ಅಲ್ಲಿಯವರೆವಿಗೂ ಪಂಚಾಯ್ತಿಯಿAದಲೇ ನಿತ್ಯ ನೀರಿನ ಕ್ಯಾನ್ ಇಡುವ ವ್ಯವಸೈ ಮಾಡುತ್ತೇವೆ.
> ನಾಗಭೂಷಣ್, ಮುಖ್ಯಾಧಿಕಾರಿ, ಪಪಂ, ಹುಳಿಯಾರು.