ತುಮಕೂರು:

      ಗುತ್ತಿಗೆದಾರರಿಂದ ಲಂಚ ಪಡೆಯುವ ಸಂದರ್ಭದಲ್ಲಿ ತುಮಕೂರು ನಗರದ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮರಿಯಪ್ಪ(54) ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.

      ಇಂದು  ಮಧ್ಯಾಹ್ನ 1.10 ಗಂಟೆ ಸಮಯದಲ್ಲಿ ಕಛೇರಿಯಲ್ಲಿ ವಸಂತನರಸಾಪುರದ ಗುತ್ತಿಗೆದಾರ ಜಗದೀಶಯ್ಯ ರವರಿಂದ 10 ಸಾವಿರ ಲಂಚದ ಹಣ ಪಡೆಯುತ್ತಿದ್ದಾಗ ಎಸಿಬಿ ಪಿ ಐ ಹಾಲಪ್ಪರವರು ದಾಳಿ ನಡೆಸಿ ಹಣ ಮತ್ತು ಆರೋಪಿಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ.

      ಬಲೆಗೆ ಬಿದ್ದಿರುವ ಮರಿಯಪ್ಪ ಅವರ ಮೇಲೆ ಮಹಾನಗರ ಪಾಲಿಕೆಯ ತಾಂತ್ರಿಕ ಶಾಖೆಯಲ್ಲಿ‌ ಸಾರ್ವಜನಿಕರಿಗೆ ಸರ್ಕಾರಿ ಕೆಲಸಕ್ಕೆ ವಿಳಂಬಮಾಡುತ್ತಿದ್ದು ಹಣ ನೀಡದೇ ಕೆಲಸ ಮಾಡಿಕೊಡುವುದಿಲ್ಲ ಎಂಬ ಆಪಾದನೆಯಿತ್ತು. ಗುತ್ತಿಗೆದಾರರು ಹೆದರಿ ಯಾವುದೇ ರೀತಿಯ ಲಿಖಿತ ರೂಪದಲ್ಲಿ ದೂರು ನೀಡಿರಲಿಲ್ಲ. ಆದರೆ ಜಗಧೀಶ್ ನೀಡಿರುವ ದೂರನ್ನಾದರಿಸಿ ಹಣ ಪಡೆಯುವಾಗ ನೇರವಾಗಿ ಧಾಳಿ ನೆಡಸಿ ಬಂಧಿಸಲಾಗಿದೆ.

      ಪರಿಸರ ಶಾಖೆಯ ಅಭಿಯಂತರರು ನಡೆದುಕೊಳ್ಳುವ ರೀತಿ ಜನರಿಗೆ ಬಹಳ ತೊಂದರೆಯಾಗುತ್ತಿದೆ. ಪರಿಸರ ಶಾಖೆಯ ಪರಿಸರ ಅಭಿಯಂತರ ಮೇಲೆ ಧಾಳಿಯಾಗಬೇಕಿತ್ತು ಎಂದು ಮಹಾನಗರ ಪಾಲಿಕೆಯ ಆವರಣದಲ್ಲಿ ಚರ್ಚೆನಡೆಯುತ್ತಿದ್ದವು. ಸಾರ್ವಜನಿಕರು ಹಾಕುತ್ತಿದ್ದ ಹಿಡಿಶಾಪ ಅಧಿಕಾರಿಗಳ ಭ್ರಷ್ಟಾಚಾರ ಎತ್ತಿತೋರಿಸುತ್ತಿತ್ತು. ಎಸಿಬಿ ಡಿವೈಎಸ್‍ಪಿ ಡಿ ಪಿ.ರಘುಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಡಿಸೆಂಬರ್ ೩ ರ ವರೆಗೆ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

(Visited 124 times, 1 visits today)