ಚಿಕ್ಕನಾಯಕನಹಳ್ಳಿ:

      ಪಟ್ಟಣದಲ್ಲಿ ನವೆಂಬರ್ 26ರಂದು ಕನಕ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ತೀರ್ಮಾನಿಸಿತು.
      ಶಾಸಕ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಪುರಸಭಾ ಮಾಜಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಪ್ರತಿ ಕನಕ ಜಯಂತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 3 ಜನರನ್ನು ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಸನ್ಮಾನ ಮಾಡಲಾಗುತ್ತಿದೆ. ಕನಕ ಜಯಂತಿಯಲ್ಲಿ ಕುರುಬ ಸಮಾಜದ ಮಠಗಳಿಂದ ಒಬ್ಬೋಬ್ಬರಿಗೆ ಸನ್ಮಾನ ಮಾಡಲಾಗುತ್ತದೆ. ಇದೇ ರೀತಿ ಈ ಬಾರಿಯು ಮುಂದುವರೆಸಿಕೊಂಡು ಹೋಗುವಂತೆ ಸಲಹೆ ನೀಡಿದರು.ತಾಲ್ಲೂಕು ಕಛೇರಿಯಲ್ಲಿ 26ರಂದು 10 ಗಂಟೆಗೆ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ 10.30ಕ್ಕೆ ಪುರಸಭೆಯ ಮುಂಭಾಗದಿಂದ ವಿವಿಧ ಕಲಾ ತಂಡಗಳ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಕನ್ನಡ ಸಂಘದ ವೇದಿಕೆಯಲ್ಲಿ ಜಯಂತಿ ನಡೆಸಲು ಸಭೆ ತೀರ್ಮಾನಿಸಿತು ನಂತರ ಕುರುಬ ಸಮಾಜದ ಎಲ್ಲಾ ಮಠಗಳ ಒಬ್ಬೋಬ್ಬರನ್ನು ತೆಗೆದುಕೊಂಡು ಸಮಿತಿ ರಚಿಸಲು ತೀರ್ಮಾನಿಸಿತು.

      ಪೂರ್ವಭಾವಿ ಸಭೆಯಲ್ಲಿ ತಹಶಿಲ್ದಾರ್ ಸೋಮಪ್ಪ ಕಡಕೋಳ, ಕನ್ನಡ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ, ಪುರಸಭಾ ಸದಸ್ಯರಾದ ಸಿ.ಡಿ.ಸುರೇಶ್, ಮಲ್ಲೇಶಯ್ಯ, ಜಯಮ್ಮ, ಸಿ.ಬಿ.ತಿಪ್ಪೇಸ್ವಾಮಿ, ಸಿ.ಎಮ್.ರಂಗಸ್ವಾಮಯ್ಯ, ಲಕ್ಷ್ಮಿಪಾಂಡುರಂಗಯ್ಯ.ಜಯದೇವ್, ಮಠದ ಗೌಡರಾದ ಸಿ.ಎಮ್. ಬೀರಲಿಂಗಯ್ಯ, ಮತ್ತಿತರರು ಉಪಸ್ಥಿತರಿದ್ದರು.

(Visited 12 times, 1 visits today)