ಮಧುಗಿರಿ :
ದ್ವಿಚಕ್ರ ವಾಹನವೊಂದು ರಸ್ತೆ ಪಕ್ಕದ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದು, ಮಗನಿಗೆ ಗಂಬೀರ ಗಾಯಗಳಾದ ಘಟನೆ ಪಟ್ಟಣದ ಕಸಬಾ ವ್ಯಾಪ್ತಿಯ ಡಿ.ವಿ. ಹಳ್ಳಿ ಬಳಿ ನಡೆದಿದೆ.
ಸಿರಾ ಪಟ್ಟಣದ ವಾಸಿ ರತ್ನಮ್ಮ(55) ಸ್ಥಳದಲ್ಲೇ ಮೃತಪಟ್ಟವರು. ಮಗ ಗಿರೀಶ್ ಗೆ ಗಂಬೀರ ಗಾಯಗಳಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಮಗ ಇಬ್ಬರು ಸಿರಾ ದಿಂದ ಮಧುಗಿರಿಗೆ ಬರುವಾಗ ಘಟನೆ ನಡೆದಿದ್ದು, ಮಳೆ ಬರುತ್ತಿದ್ದ ಸಂದರ್ಭದಲ್ಲಿ ದ್ವಿಚಕ್ರ ವಾಹನ ಆಯತಪ್ಪಿ ರಸ್ತೆ ಬದಿಗೆ ಜಾರಿ ಬಿದ್ದಾಗ ರಸ್ತೆಯ ಬದಿಯ ಕಲ್ಲಿಗೆ ಹೊಡೆದಿದ್ದರಿಂದ ಘಟನೆ ನಡೆದಿದೆ.ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(Visited 14 times, 1 visits today)