ತುಮಕೂರು: ಶ್ರೀ ಸಿದ್ಧಾರ್ಥ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಆಯೋಜಿಸಿರುವಂತಹ ಕ್ಯಾಂಪಸ್ ನೇಮಕಾತಿ ಡ್ರೆöÊವ್ ಎಂಬ ಉದ್ಯೋಗ ಮೇಳವನ್ನು ವಿದ್ಯಾರ್ಥಿಗಳು ಸರಿಯಾಗಿ ಬಳಸಿಕೊಳ್ಳಬೇಕು, ಸಿಕ್ಕ ಅವಕಾಶವನ್ನು ಸದುಪ ಯೋಗಪಡಿಸಿಕೊಳ್ಳಿ ಎಂದು ಶ್ರೀ ಸಿದ್ಧಾರ್ಥ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಟಿ. ಗೋವಿಂದರಾಜು ತಿಳಿಸಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿ ದ್ಯಾಲಯದ ಆವರಣದಲ್ಲಿನ ಎಸ್‌ಎಸ್‌ಐಟಿಐ ಕೇಂದ್ರದಲ್ಲಿ ಆಯೋಜಿಸಿದ್ದಂತಹ ಕ್ಯಾಂಪಸ್ ನೇಮಕಾತಿ ಡ್ರೆöÊವ್ ಉದ್ಯೋಗ ಮೇಳದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬ ವಿದ್ಯಾರ್ಥಿಯು ಕ್ಯಾಂಪಸ್ ನೇಮಕಾತಿ ಡ್ರೆöÊವ್ ನಲ್ಲಿ ಭಾಗವಹಿಸಿ ಉದ್ಯೋಗವನ್ನು ಪಡೆದು ಕೊಂಡು ಉತ್ತಮವಾದ ವೃತ್ತಿ ಜೀವನವನ್ನು ನಿಮ್ಮದಾಗಿಸಿಕೊಳ್ಳಿ. ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಉದ್ಯೋಗವನ್ನು ಪಡೆದುಕೊಳ್ಳಬೇಕು ಎನ್ನುವುದೇ ಈ ಕ್ಯಾಂಪಸ್ ನೇಮಕಾತಿ ಡ್ರೆöÊವ್‌ನ ಉದ್ದೇಶ. ಪ್ರತಿಯೊಬ್ಬ ವಿದ್ಯಾರ್ಥಿಯು ಉದ್ಯೋಗವನ್ನು ಪಡೆದುಕೊಂಡರೆ ನಮ್ಮ ಶ್ರಮಕ್ಕೆ ಬೆಲೆ ಸಿಕ್ಕಂತಾಗುತ್ತದೆ ಎಂದು ಹೇಳಿದರು.
ನಂತರ ಮಾತನಾಡಿದ ನ್ಯಾಶ್ ಇಂಡಸ್ಟಿçÃಸ್ ಕಂಪನಿಯ ಶ್ರೀನಿವಾಸ್, ಪ್ರಗತಿ ಎಚ್.ಆರ್ ಸರ್ವೀಸಸ್ ಕಂಪನಿಯ ವೆಂಕಟೇಶ್, ಹಾಗೂ ವಾಹಿನಿ ಪೈಪ್ಸ್ ಪ್ರೆöÊವೇಟ್ ಲಿಮಿಟೆಡ್ ಕಂಪನಿಯ ಗೋವಿಂದರಾಜು ತಮ್ಮ ಕಂಪನಿಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ, ಉದ್ಯೋಗಕ್ಕೆ ಬೇಕಾಗ ಅರ್ಹತೆಗಳ ಕುರಿತು ಮಾತನಾಡಿದರು.
ಈ ಕಾಂಪಸ್ ನೇಮಕಾತಿ ಡ್ರೆöÊವ್ ಕಾರ್ಯಕ್ರಮದಲ್ಲಿ ನಾಶ್ ಇಂಡಸ್ಟಿçÃಸ್, ಪ್ರಗತಿ ಎಚ್‌ಆರ್ ಸರ್ವಿಸಸ್, ಮತ್ತು ವಾಹಿನಿ ಪೈಪ್ಸ್ ಪ್ರೆöÊವೇಟ್ ಲಿಮಿಟೆಡ್ ಕಂಪನಿಗಳು ಭಾಗವಹಿಸಿ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸಂದರ್ಶನ ಮಾಡಿ ಸುಮಾರು ೬೯ ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಆಯ್ಕೆಮಾಡಲಾಗಿದೆ.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತಾಧಿಕಾರಿಗಳಾದ ಖಲಂದರ್ ಪಾಷಾ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಾಗೂ ಕ್ಯಾಂಪಸ್ ಡ್ರೆöÊವ್ ಕಾರ್ಯಕ್ರಮಕ್ಕೆ ಶುಭಾಶಯಗಳನ್ನು ತಿಳಿಸಿ, ಉಳಿದ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರ್ಥ ಕೈಗಾರಿಕಾ ತರಬೇತಿ ಕೇಂದ್ರದ ಎಲ್ಲಾ ಆಡಳಿತ ವರ್ಗದವರು, ಎಲ್ಲಾ ವಿಭಾಗದ ಮುಖ್ಯಸ್ಥರೂ ಹಾಗೂ ಎಲ್ಲಾ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.
(Visited 1 times, 1 visits today)