ಮಧುಗಿರಿ:

      ನರೇಗಾ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ ಸಾಮಾಜಿಕ ಕಾರ್ಯಕರ್ತನ ದೂರಿಗೆ ಜಿಪಂ ಒಂಬುಡ್ಸ್ ಮನ್ ಸಿಂಗನಹಳ್ಳಿ ಗ್ರಾಮ ಪಂಚಾಯಿತಿಯ ವೆಂಗಮ್ಮನಹಳ್ಳಿ ಗ್ರಾಮದಲ್ಲಿ ಸ್ಥಳ ಪರಿಶೀಲನೆ ನಡೆಸಿದರು.

      ಆರ್ ಟಿಐ ಕಾರ್ಯಕರ್ತ ಗಂಗಾಧರ್ ನೀಡಿರುವ ದೂರಿನಲ್ಲಿ ಹಳೆಯ ಬಾವಿ ಮತ್ತು ಹಳೆಯ ದನದ ಕೊಟ್ಟಿಗೆಗಳನ್ನು ತೋರಿಸಿ ನರೇಗಾ ಯೋಜನೆಯಡಿ ಕಾಮಗಾರಿಗೆ ಮುನ್ನವೇ ಹಣ ಡ್ರಾ ಮಾಡಲಾಗಿದ್ದು ಕೃಷಿ ಹೊಂಡ ನಿರ್ಮಾಣವನ್ನು ಹಳೆಯ ಬಾವಿಯನ್ನು ತೋರಿಸಲಾಗಿದೆ ,ಹಳೆಯ ಗುಡಿಸಲಿನ ಶೀಟಿನ ಮನೆ ಗಳನ್ನು ತೋರಿಸಿ ದನದ ಕೊಟ್ಟಿಗೆ ಎಂದು ಹೇಳಿ ಹಳೆ ಶೆಡ್ ಗಳನ್ನು ತೋರಿಸಿ ಬಿಲ್ ಪಡೆಯಲಾಗಿದೆ ಎಂದು ಆರೋಪಿಸಿದ್ದರು .

      ಸರ್ವೆ ನಂಬರ್ 5/6ರಲ್ಲಿ ಹಳೆಬಾವಿ ಯನ್ನು ಕೃಷಿ ಹೊಂಡ ಎನ್ನಲಾಗಿದ್ದು 13/4 ರಲ್ಲಿ ನೂತನವಾಗಿ ಕೃಷಿಹೊಂಡ ನಿರ್ಮಿಸಿ ಕೊಡಲಾಗಿದೆ ಮತ್ತು ದನದ ಕೊಟ್ಟಿಗೆ ನಿರ್ಮಾಣ ಸ್ಥಳಗಳಿಗೆ ಓಂಬುಡ್ಸ್ ಮನ್ ವೆಂಕಟೇಶ್ವರ ರಾವ್ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸಿಂಗನಹಳ್ಳಿ ಪಿಡಿಒ ವೆಂಕಟೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

      ಓಂಬುಡ್ಸ್ ಮನ್ ವೆಂಕಟೇಶ್ವರ್ ರಾವ್ ಅವರು ಪತ್ರಕರ್ತರೊಂದಿಗೆ ಮಾತನಾಡಿ ಈ ಬಗ್ಗೆ ಸ್ಥಳ ಪರಿಶೀಲನೆ ನಡೆದಿದ್ದು ದೂರುದಾರರು ಮತ್ತು ಆರೋಪಿತರ ಎದುರು ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ ಮುಂದಿನ 4ತಿಂಗಳೊಳಗೆ ಜಿಪಂಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.

(Visited 19 times, 1 visits today)