ಗದ್ದುಗೆಯಿಂದ ಮೋದಿ ಸರ್ಕಾರವನ್ನು ಉರುಳಿಸಿ : ಮಾಜಿ ಸಚಿವ ಟಿ.ಬಿ.ಜಯಚಂದ್ರ

ಚಿಕ್ಕನಾಯಕನಹಳ್ಳಿ :

      ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ, ಕಾಂಗ್ರೆಸ್ ಕಾರ್ಯಕರ್ತರು ಇದರ ಉಪಯೋಗ ಪಡೆದು ಪ್ರಧಾನಿ ಗದ್ದುಗೆಯಿಂದ ಮೋದಿ ಸರ್ಕಾರವನ್ನು ಉರುಳಿಸಿ ರಾಹುಲ್‍ಗಾಂಧಿಯವರನ್ನು ಪ್ರಧಾನಮಂತ್ರಿ ಮಾಡಲು ಇದು ಸಕಾಲ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

      ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆ ಮತ್ತು ಶಕ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ಗೆ ಭವಿಷ್ಯವಿಲ್ಲ ಎಂಬ ಸನ್ನಿವೇಶವನ್ನು ನಿರ್ಮಿಸಿದ್ದ ಮೋದಿ ಹೇಳಿಕೆ ಕೊಡುತ್ತಿದ್ದರು ಆದರೆ ಈಗ ಉತ್ತರ ಭಾರತದ 3 ರಾಜ್ಯಗಳಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿ ಅಧಿಕಾರದ ಗದ್ದುಗೆ ಹಿಡಿದಿದೆ, ಇಂತಹ ಸಂದರ್ಭದಲ್ಲಿ ಕಾರ್ಯಕರ್ತರು ಹಗಲು ಇರುಳು ದುಡಿದು ರಾಹುಲ್ ಗಾಂಧೀಯವರನ್ನು ಪ್ರಧಾನಮಂತ್ರಿ ಮಾಡಲು ಎಲ್ಲರೂ ಶ್ರಮಿಸುವಂತೆ ಕರೆ ನೀಡಿದರು.

      ದೇಶದಲ್ಲಿ ಆಗುತ್ತಿರುವ ಪರಿವರ್ತನೆಯನ್ನು ತಿಳಿದು ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಶಕ್ತಿ ಕಾರ್ಯಕ್ರಮದ ಮೂಲಕ ಗ್ರಾಮೀಣ ಯುವಕರನ್ನು ಕಾಂಗ್ರೆಸ್ಸಿಗೆ ಸೆಳೆಯಲು ಕಾರ್ಯಕರ್ತರು ಶ್ರಮಿಸಿ ಎಂದ ಅವರು, ರಾಫೇಲ್ ಯುದ್ದ ಸಾಮಾಗ್ರಿಗಳಲ್ಲಿ ಕೇಂದ್ರ ಸರಕಾರ ಸುಪ್ರಿಂ ಕೋರ್ಟಿಗೆ ತಪ್ಪು ವರದಿ ನೀಡಿ ವಂಚಿಸಿದ್ದಾರೆ, ಕೇಂದ್ರ ಸರಕಾರ ಪಬ್ಲಿಕ್ ಅಕೌಂಟ್ ಮುಂದೆ ಹೋಗದೇ ರಾಫೇಲ್ ಹಗರಣದಲ್ಲಿ ಸುಪ್ರಿಂ ಕೋರ್ಟಿಗೆ ಸುಳ್ಳು ಅಫಿಡೇವಿಟ್ ಹಾಕಲು ಹೊರಟಿದೆ ಎಂದ ಅವರು ಹೇಮಾವತಿ ಅಪ್ಪರ್ ಭದ್ರ ಯೋಜನೆ ಎತ್ತಿನ ಹೊಳೆ ಯೋಜನೆ ಸಹಕಾರಗೊಂಡಾಗ ಮಾತ್ರ ಜಿಲ್ಲೆ ಬರದಿಂದ ಹೊರ ಬರಲು ಸಾಧ್ಯ, ಈಗಾಗಲೇ 100 ತಾಲ್ಲೂಕುಗಳು ಬರಪ್ರದೇಶವೆಂದು ಸರಕಾರ ಘೋಷಿಸಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಬರ ಬರುವ ಮೊದಲೇ ಸರಕಾರ ಎತ್ತೇಚ್ಚೆಕೊಂಡು ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು. ಮುಂದಿನ ವರ್ಷ ನಡೆಯುವ ಪಾರ್ಲಿಮೆಂಟ್ ಚುನಾವಣೆಗೆ ಈಗಿನಿಂದಲೇ ಕಾರ್ಯಕರ್ತರು ತಯಾರಾಗಬೇಕು ಎಂದರು.

      ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, 23 ರಂದು ನಡೆಯುವ ಶಕ್ತಿ ಕಾರ್ಯಕ್ರಮ ಪಟ್ಟಣದಲ್ಲಿ ನಡೆಯುತ್ತಿದ್ದು, ಶಕ್ತಿ ಕಾರ್ಯಕ್ರಮದ ಮೂಲಕ ಹಳ್ಳಿಯ ಜನರನ್ನು ಸೆಳೆದು ಅವರನ್ನು ನೊಂದಾವಣಿ ಮಾಡಿಕೊಳ್ಳಲು ಅವರ ಮೊಬೈಲ್ ಮೂಲಕ ಸದಸ್ಯತ್ವ ಪಡೆಯಬಹುದು ಎಂದ ಅವರು, ಯು.ಪಿ.ಎ ಅಧಿಕಾರವಧಿಯಲ್ಲಿ 82 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದರು, ಮೋದಿಯವರು ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಸಾರ್ವಜನಿಕ ಸಭೆಗಳಲ್ಲಿ ಹೇಳುತ್ತಿದ್ದರು ಈಗ ದೇಶದಲ್ಲಿ ಮೋದಿ ಮುಕ್ತ ರಾಜ್ಯವಾಗುತ್ತಿದೆ ಇದಕ್ಕೆ ಸಾಕ್ಷಿ ಈಗ ನಡೆದ 3 ರಾಜ್ಯಗಳ ಚುನಾವಣೆ ಎಂದರು.

      ಕೆ.ಪಿ.ಸಿ.ಸಿ ವಕ್ತಾರ ಮರುಳೀಧರ ಹಾಲಪ್ಪ ಮಾತನಾಡಿ, ಮೋದಿ ಸರಕಾರ ಯಾವುದೇ ನಿರ್ಧಾರವನ್ನು ತೆಗೆದುಕೊಂಡರು ಅದು ರಾತ್ರಿ ವೇಳೆ, ನಾಲ್ಕುವರೆ ವರ್ಷಗಳಿಂದ ಕೇಂದ್ರ ಸರ್ಕಾರ ದೇಶದ ಜನತೆಗೆ ಸುಳ್ಳು ಹೇಳುತ್ತಾ ವಂಚಿಸಿದೆ, ಸಿ.ಬಿ.ಐ ಕಛೇರಿ, ನೋಟ್ ಅಮಾನಿಕರಣ, ಆರ್.ಬಿ.ಐ ಊರ್ಜಿತ ಪಟೇಲ್‍ರವರ ರಾಜೀನಾಮೆ ಸೇರಿದಂತೆ ಅನೇಕ ಯೋಜನೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ, ರಾಮಜನ್ಮ ಭೂಮಿ ವಿಚಾರದಿಂದ ಅಧಿಕಾರಕ್ಕೆ ಬಂದ ಮೋದಿ ಸರಕಾರ ಅದರಲ್ಲಿ ಭಾಗವಹಿಸಿದ ಹಿರಿಯರನ್ನು ಕಡೆಗಣಿಸಿ ಸರ್ವಾಧೀಕಾರಿಯಂತೆ ವರ್ತಿಸುತ್ತಿದ್ದಾರೆ ಆರೋಪಿಸಿದರು.

      ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಹನುಮಂತಪ್ಪ, ಜಿ.ಪಂ.ಸದಸ್ಯ ವೈ.ಸಿ.ಸಿದ್ದರಾಮಯ್ಯ, ಮಾಜಿ ಶಾಸಕ ಬಿ.ಲಕ್ಕಪ್ಪ, ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಉಪಾಧ್ಯಕ್ಷ ಸಿ.ಡಿ.ಚಂದ್ರಶೇಖರ್, ಕಾರ್ಯದರ್ಶಿ ಬ್ರಹ್ಮಾನಂದ, ವಕ್ತಾರ ಕೆ.ಜಿ.ಕೃಷ್ಣೇಗೌಡ, ಹೊಯ್ಸಳಕಟ್ಟೇ ಗಿರೀಶ್, ತಾ.ಪಂ.ಸದಸ್ಯೆ ಕಲಾವತಿ, ಪುರಸಭಾ ಸದಸ್ಯೆ ಉಮಾಪರಮೇಶ್ ಮತ್ತಿತರರು ಉಪಸ್ಥಿತರಿದ್ದರು.

(Visited 24 times, 1 visits today)

Related posts

Leave a Comment