ಚಿಕ್ಕನಾಯಕನಹಳ್ಳಿ:

      ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಮುಂದಿನ ಪ್ರಕ್ರಿಯೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಮಾಣ ವನ್ನು ಚುನಾವಣಾ ಆಯೋಗ ಪ್ರಕಟಿಸಿದೆ.

     ತಾಲ್ಲೂಕಿನ 27 ಗ್ರಾಮ ಪಂಚಾಯಿತಿಗಳಿಂದ ಆಯ್ಕೆಯಾಗಿರುವ 448 ಸದಸ್ಯರ ಪ್ರಮಾಣಕ್ಕೆ ತಕ್ಕಂತೆ ಮೀಸಲು ನಿಗದಿಗೊಳಿಸಿದ್ದು 27 ಪಂಚಾಯಿತಿಗಳಲ್ಲಿ ಒಟ್ಟಾರೆಎಲ್ಲಾ ವರ್ಗದಿಂದ 14 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಿದೆ. ಇದರಲ್ಲಿ ಅನುಸೂಚಿತ ಜಾತಿ 6 ಸ್ಥಾನಗಳನ್ನು ಮೀಸಲಿರಿಸಿದ್ದು ಈ 6ರಲ್ಲಿ 3 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಅನುಸೂಚಿತ ಪಂಗಡಕ್ಕೆ 3 ಸ್ಥಾನಗಳನ್ನು ಮೀಸಲಿರಿಸಿದ್ದು ಈ 3ರಲಿ 2 ಸ್ಥಾನಗಳು ಮಹಿಳೆಗೆ ಮೀಸಲಿರಿಸಿದೆ. ಹಿಂದುಳಿದವರ್ಗ(ಎ) ಗೆ 3 ಸ್ಥಾನಗಳನ್ನು ಮೀಸಲಿರಿಸಿದ್ದು ಈ 3ರಲ್ಲಿ 2 ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ. ಹಿಂದುಳಿದವರ್ಗ(ಬ) 1 ಸ್ಥಾನ ಮೀಸಲಿರಿಸಿದೆ. ಸಾಮಾನ್ಯ ಸ್ಥಾನಗಳಿಗೆ 14 ಸ್ಥಾನಗಳನ್ನು ಮೀಸಲಿರಿಸಿದ್ದು ಈ 14 ರಲ್ಲಿ 7 ಸ್ಥಾನಗಳು ಮಹಿಳೆಯರಿಗೆ ಮೀಸಲಿರಿಸಲಾಗಿದೆ.

      ತಾಲ್ಲೂಕುವಾರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳನ್ನು ಆಯ್ಕೆ ಮಾಡುವಾಗ ಮೊದಲು ಅಧ್ಯಕ್ಷ ಸ್ಥಾನವನ್ನು ಆಯ್ಕೆ ಮಾಡಬೇಕಿದೆ. ನಂತರ ಉಪಾಧ್ಯಕ್ಷ ಸ್ಥಾನ ಆಯ್ಕೆ ಮಾಡಬೇಕಿದ್ದು ಸಾಧ್ಯವಾದ ಮಟ್ಟಿಗೆ ಎರಡೂ ಸ್ಥಾನಗಳಿಗೂ ಒಂದೇ ರೀತಿಯ ವರ್ಗದ ಅಭ್ಯರ್ಥಿಗಳು ಆಯ್ಕೆ ಆಗದಂತೆ ಕ್ರಮವಹಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಎಂ.ಪಿ. ರಂಜಿತ ಮಾರ್ಗ ಸೂಚಿಯಲ್ಲಿ ತಿಳಿಸಿದ್ದಾರೆ.

(Visited 11 times, 1 visits today)