ಚಿಕ್ಕನಾಯಕನಹಳ್ಳಿ :

      ಬೇವಿನಮರದಿಂದ ಹಾಲಿನಧಾರೆ ಹರಿದು ಬರುತ್ತಿದ್ದು, ಈ ಪ್ರಕೃತಿ ವಿಸ್ಮಯ ವೀಕ್ಷಣೆಗೆ ಜನರು ಮುಗಿಬಿದ್ದಿದ್ದಾರೆ.

     ತಾಲ್ಲೂಕಿನ ಕಂದಿಕೆರೆ ಹೋಬಳಿ ರಾಮನಹಳ್ಳಿ ಪಂಚಾಯಿತಿಯ ಹನುಮಂತನಹಳ್ಳಿಯ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಸೇರಿದ ಹೊಲದಲ್ಲಿರುವ ಬೇವಿನಮರವೊಂದರಲ್ಲಿ ಕಳೆದ ಹದಿನೈದು ದಿನದಿಂದ ಹಾಲಿನ ಧಾರೆಹರಿದು ಬರುತ್ತಿದೆ. ಮರದ ಕಾಂಡದಿಂದ ಬಿಳಿ ಬಣ್ಣದ ದ್ರವ ಹರಿಯುತ್ತಿರುವುದನ್ನು ಕಂಡ ಸ್ಥಳೀಯರು ಇದೊಂದು ದೈವ ಪವಾಡವೆಂದು ನಂಬಿ ಮರಕ್ಕೆ ಅರಿಶಿನ, ಕುಂಕುಮದಿಂದ ಪೂಜೆ ಸಲ್ಲಿಸಿ ದೈವತ್ವಹೊಂದಿದ ಮರವೆಂದು ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಈ ವಿಸ್ಮಯವನ್ನು ನೂಡಲು ಪ್ರತಿದಿನ ನೂರಾರು ಮಂದಿ ಧಾವಿಸುತ್ತಿದ್ದಾರೆ. ಈ ಮರವು ದೇವಾಲಯದ ಜಮೀನಿಗೆ ಸೇರಿದ್ದರಿಂದ ಈ ಘಟನೆ ಹೆಚ್ಚಿನ ಮಹತ್ವ ಪಡೆದಿದೆ. ಇದೇ ಜಾಗದಲ್ಲಿ ಶ್ರೀಅಯ್ಯಪ್ಪ ದೇಗುಲ ನಿರ್ಮಾಣಕ್ಕೆ ಊರಿನ ಭಕ್ತರು ಮುಂದಾಗಿದ್ದು ಈಗ ನಿರ್ಮಾಣ ಹಂತದಲ್ಲಿರುವಾಗಲೇ ಈ ವಿಸ್ಮಯ ಗೋಚರಿಸಿರುವುದು ಕಾಕತಾಳೀಯವೆನಿಸಿದೆ.

      ಮರದ ಕಾಂಡದಿಂದ ಬಿಳಿದ್ರವ ಹರಿಯುವುದು ಕೆಲವು ಮರಗಳಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯ ಪರಿಣಾಮವೆಂದು ಹಲವುಮಂದಿ ಅಭಿಪ್ರಾಯವ್ಯಕ್ತಪಡಿಸಿ, ಈ ಹಿಂದೆಯೂ ಕೆಲವುಕಡೆ ಮರದಲ್ಲಿ ಬಿಳಿದ್ರವ ಒಸರುವುದು ಕಂಡುಬಂದಿದ್ದು ಕೆಲವೇ ದಿನಗಳಲ್ಲಿ ಅದು ನಿಂತುಹೋಗುತ್ತದೆ ಎಂದು ತಿಳಿಸಿದರು. ಪಟ್ಟಣದ ಸಮೀಪದ ಕುರುಬರಹಳ್ಳಿಯ ಬೇವಿನಮರವೊಮದರಲ್ಲಿ ಕೆಲವು ವರ್ಷಗಳ ಹಿಂದೆ ಇದೇರೀತಿ ಹಾಲಿನಬಣ್ಣದ ದ್ರವ ಹರಿದು ಕೌತುಕಕ್ಕೆ ಕಾರಣವಾಗಿತ್ತು. ಕೆಲವುದಿನಗಳ ನಂತರ ಈಕ್ರಿಯೆ ನಿಂತುಹೋಗಿತ್ತೆಂದು ತಿಳಿಸಿದರು.

(Visited 30 times, 1 visits today)