ತುಮಕೂರು :

      ಶಾಲೆಗೆ ಗೈರು ಹಾಜರಾಗಿ ಗುಬ್ಬಿ ಕೆರೆಯಲ್ಲಿ ಈಜಲು ಹೋದ ಮೂವರು ಶಾಲಾ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

       ಗುಬ್ಬಿ ಪಟ್ಟಣದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಲಯದಲ್ಲಿದ್ದ ವಿದ್ಯಾರ್ಥಿಗಳ ಪೈಕಿ 5 ವಿದ್ಯಾರ್ಥಿಗಳು ಬಯೋಮೆಟ್ರಿಕ್ ನೀಡಿದ ನಂತರ ಬೆಳಗಿನ ತಿಂಡಿಯನ್ನು ಸೇವಿಸಿ ಶಾಲೆಗೆ ತೆರಳುವಾಗಿ ಹೊರಟ ವಿದ್ಯಾರ್ಥಿಗಳು ಶಾಲೆಗೆ ಹೋಗದೇ ಗುಬ್ಬಿ ಕೆರೆಗೆ ಹೊಂದಿಕೊಂಡಿರುವ ಕೋಡಿಹಳ್ಳಿಯ ಕೆರೆಕೋಡಿಯ ಮಗ್ಗುಲಲ್ಲೇ ಈಜಲು ನೀರಿಗೆ ಇಳಿದ 3 ವಿದ್ಯಾರ್ಥಿಗಳು ಈಜಾಡುತ್ತ ಮುಂದೆ ಸಾಗಿದಾಗ ಜೆ.ಸಿ.ಬಿ.ಯಿಂದ ಮಣ್ಣನ್ನು ಅಗೆದ ಹಳ್ಳದಲ್ಲಿ ಬಿದ್ದು ಈಜಲಾಗದೇ ಸಾವನ್ನಪ್ಪಿರುತ್ತಾರೆ. ಜೊತೆಗೆ ತೆರಳಿದ 2 ವಿದ್ಯಾರ್ಥಿಗಳು ತಮಗೆ ಈಜಲು ಬರುವುದಿಲ್ಲ ಎಂಬ ಕಾರಣದಿಂದ ಪಕ್ಕದಲ್ಲೇ ಇರುವ ಆಂಜನೇಯ ದೇವಾಲಯಕ್ಕೆ ತೆರಳಿದ್ದು ನೀರಿನಲ್ಲಿ ಮುಳುಗುತ್ತಿದ್ದ ಗೆಳೆಯರನ್ನು ನೋಡಿ ಭಯಭೀತರಾಗಿ ಕೂಗಾಡುತ್ತಿದ್ದನ್ನು ಗ್ರಾಮಸ್ಥರು ಕಂಡು ಅಗ್ನಿಶಾಮಕ ತಂಡಕ್ಕೆ ವಿಷಯವನ್ನು ಮುಟ್ಟಿಸಿದ್ದು ಅಗ್ನಿಶಾಮಕದವರು ಸ್ಥಳಕ್ಕೆ ಆಗಮಿಸುವ ಸಮಯದಲ್ಲೇ ಉಸಿರುಗಟ್ಟಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

      ಶ್ರೀನಿವಾಸ್ 9ನೇತರಗತಿ ಮತ್ತು ನಂದನ್ 8ನೇತರಗತಿ ಈರ್ವರು ಆಶ್ರಮ ಶಾಲೆಯಲ್ಲಿ ಓದುತ್ತಿದ್ದು, ದರ್ಶನ್ 9ನೇತರಗತಿ ಜಿ.ಜೆ.ಸಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ವಿದ್ಯಾರ್ಥಿನಿಲಯದಲ್ಲಿದ್ದು ಎರಡು ದಿನಗಳಿಂದ ಶಾಲೆಗೆ ಹೋಗದೇ ಇರುವುದು ಒಂಡು ಕಾರಣವಾದರೆ ವಸತಿ ನಿಲಯದ ಮೇಲ್ವಿಚಾರಕರು ಪ್ರತಿನಿತ್ಯವೂ ವಿದ್ಯಾರ್ಥಿಗಳ ಹಾಜರಾತಿಯನ್ನು ತೆಗೆದುಕೊಳ್ಳಬೇಕಿದ್ದ ಮೇಲ್ವಿಚಾರಕನ ಕರ್ತವ್ಯವೇನು ? ತಮ್ಮ ಬಡತನದ ನಡುವೆಯೂ ತಮ್ಮ ಮಕ್ಕಳು ವಿದ್ಯಾವಂತರಾಗಬೇಕೆಂದು ಮಹದಾಸೆಯಿಂದ ಸರ್ಕಾರ ನೀಡುವ ಸೌಲಭ್ಯವನ್ನು ಪಡೆದು ವಿದ್ಯಾರ್ಥಿನಿಲಯಕ್ಕೆ ಸೇರಿಸಿದ ಹೆತ್ತ ತಂದೆತಾಯಿಗಳು ಮೇಲ್ವಿಚಾರಕರು ಹಾಗೂ ಶಾಲಾ ಶಿಕ್ಷಕರ ಮೇಲೆ ಹರಿಹಾಯ್ದ ಘಟನೆ ನಡೆದಿದೆ.

      ಸ್ಥಳಕ್ಕೆ ಈಜು ತಜ್ಞರು ಹಾಗೂ ಆರಕ್ಷಕ ಸಿಬ್ಬಂದಿ, ಗ್ರಾಮಸ್ಥರ ಸಹಕಾರದಿಂದ ಮಕ್ಕಳನ್ನು ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದು ಶವಾಗಾರಕ್ಕೆ ಸಿ.ಇ.ಒ ಶುಭಕಲ್ಯಾಣ್, ತಹಶೀಲ್ದಾರ್ ಮಮತಾ, ಸಿ.ಪಿ.ಐ ದೀಪಕ್, ಪಿ.ಎಸ್.ಐ. ಹರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಯ್ಯ, ವಿದ್ಯಾರ್ಥಿ ನಿಲಯದ ಸಹಾಯಕ ನಿರ್ದೇಶಕ ಗ್ರೇಡ್- 2 ರಾಮಯ್ಯ ಭೇಟಿ ನೀಡಿದರು. ಗುಬ್ಬಿ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Visited 11 times, 1 visits today)