ತುಮಕೂರು : ಕೊರೋನಾ ಸೋಂಕು ಕುರಿತು ಜಾಗೃತಿ ಮೂಡಿಸಿದ ಚಿತ್ರ !!

ತುಮಕೂರು :

      ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ಕೆಲವರು ಮನೆಯಲ್ಲಿರದೆ ಸುಖಾ ಸುಮ್ಮನೆ ಓಡಾಡುತ್ತಿದ್ದಾರೆ.

      ಇಂಥವರಿಗೆ ಜಾಗೃತಿ ಮೂಡಿಸುವ ಸಲುವಾಗಿ ಗಜಸ್ಯ ಟೀಮ್‍ನ ಕಲಾವಿದರು ಮಂಗಳವಾರ ನಗರದ ಹೃದಯ ಭಾಗವಾದ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದ ಕೋಟೆ ಆಂಜನೇಯ ದೇವಸ್ಥಾನದ ಸರ್ಕಲ್ ಬಳಿ ರಸ್ತೆಯಲ್ಲಿ ಕೊರೋನಾ ಸೋಂಕು ಕುರಿತು “ಎಚ್ಚರಿಕೆ! ನಾನು ಕೊರೋನಾ”, “ನಿಮ್ಮ ಸುರಕ್ಷತೆ ನಿಮ್ಮ ಕೈನಲ್ಲಿ”, “ನಿಮ್ಮನ್ನು ಮತ್ತು ಇತರರನ್ನು ರಕ್ಷಿಸಿ!” ಎಂಬ ವಾಕ್ಯದೊಂದಿಗೆ ಕೆಮ್ಮು ಹಾಗೂ ಸೀನುವುದರಿಂದ ಕರೋನಾ ವೈರಸ್ ಹರಡುತ್ತದೆ ಎಂಬ ಸಂದೇಶ ಸಾರುವ ಚಿತ್ರವನ್ನು ಬಿಡಿಸಿದ್ದಾರೆ.

      ಕಲಾವಿದರಾದ ಮನು, ದುಶ್ಯಂತ ಕುಮಾರ್(ದ್ರುವ), ನಾಗಭೂಷಣ್, ಅಭಿ ಅವರು ಈ ಚಿತ್ರವನ್ನು ಬಿಡಿಸುವ ಮೂಲಕ ಜನರು ತಮ್ಮ ಮನೆಯಲ್ಲಿಯೇ ಇದ್ದು ಕೊರೋನಾ ವೈರಸ್ ಹರಡದಂತೆ ತಡೆಯಲು ಸಹಕರಿಸಬೇಕೆಂದು ಅರಿವು ಮೂಡಿಸಿದ್ದಾರೆ.

(Visited 11 times, 1 visits today)

Related posts

Leave a Comment