ತುಮಕೂರು : ಪಡಿತರ ವಿತರಣೆ ಮಾಡದ ಚಿಕ್ಕಪೇಟೆ ನ್ಯಾಯಬೆಲೆ ಅಂಗಡಿ ಲೈಸನ್ಸ್ ಅಮಾನತ್ತು!!

ತುಮಕೂರು:

      ನಗರದ ಚಿಕ್ಕಪೇಟೆಯಲ್ಲಿರುವ ನ್ಯಾಯಬೆಲೆ ಅಂಗಡಿ(ಸಂಖ್ಯೆ 250)ಯು ಏಪ್ರಿಲ್ 7 ರಂದು ತಾಲ್ಲೂಕು ಟಿ.ಎ.ಪಿ.ಸಿ.ಎಂ.ಎಸ್. ಸಗಟು ಮಳಿಗೆಯಿಂದ ಪಡಿತರ ಎತ್ತುವಳಿ ಮಾಡಿ ಏಪ್ರಿಲ್ 9ರ ಮಧ್ಯಾಹ್ನದವರೆಗೂ ಕಾರ್ಡುದಾರರಿಗೆ ವಿತರಣೆ ಪ್ರಾರಂಭ ಮಾಡದೆ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸದರಿ ಅಂಗಡಿಯ ಲೈಸನ್ಸ್‍ಅನ್ನು ತಕ್ಷಣದಿಂದ ಅಮಾನತ್ತುಪಡಿಸಿ ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಅವರು ಆದೇಶಿಸಿದ್ದಾರೆ.

       ಜಿಲ್ಲೆಯಲ್ಲಿರುವ ಎಲ್ಲಾ ನ್ಯಾಯಬೆಲೆ ಅಂಗಡಿಯವರು ಪಡಿತರ ಎತ್ತುವಳಿಯಾದ ಕೂಡಲೇ ವಿತರಣೆ ಪ್ರಾರಂಭ ಮಾಡಬೇಕು. ಸರ್ಕಾರ ನಿಗಧಿಪಡಿಸಿರುವ ಪ್ರಮಾಣದಂತೆ ಪಡಿತರ ಪದಾರ್ಥಗಳನ್ನು ಏಪ್ರಿಲ್ ಅಂತ್ಯದವರೆಗೆ ವಿತರಣೆ ಮಾಡಬೇಕು. ಪಡಿತರ ಪದಾರ್ಥಗಳಲ್ಲದೆ ಬೇರೆ ಪದಾರ್ಥಗಳನ್ನು ಖರೀದಿಸುವಂತೆ ಕಾರ್ಡುದಾರರನ್ನು ಒತ್ತಾಯಿಸಬಾರದು. ಹಾಗೂ ಕಾರ್ಡುದಾರರಿಂದ ಯಾವುದೇ ರೀತಿಯ ಹಣವನ್ನು ಪಡೆಯಬಾರದು ಎಂದು ಅವರು ತಿಳಿಸಿದ್ದಾರೆ.

      ಎಲ್ಲಾ ನ್ಯಾಯಬೆಲೆ ಅಂಗಡಿಗಳು ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಿರಂತರವಾಗಿ ಪಡಿತರ ವಿತರಣೆ ಮಾಡತಕ್ಕದ್ದು. ನ್ಯಾಯಬೆಲೆ ಅಂಗಡಿ ಬಳಿ ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ವಿತರಣೆ ಮಾಡಬೇಕು. ವಿತರಣೆಗೆ ಸಂಬಂಧಿಸಿದಂತೆ ದೂರುಗಳು ಬಂದರೆ ಅಂತಹ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಅವರು ಹೇಳಿದರು.

      ಸಾರ್ವಜನಿಕರು ಪಡಿತರ ವಿತರಣೆಯಲ್ಲಿ ತೊಂದರೆಯಾದರೆ ಆಯಾ ತಾಲ್ಲೂಕಿನ ಆಹಾರ ಶಾಖೆಯ ಆಹಾರ ಶಿರಸ್ತೇದಾರ್/ ಆಹಾರ ನಿರೀಕ್ಷಕರನ್ನು ಸಂಪರ್ಕಿಸಬೇಕು. ತಾಲ್ಲೂಕುವಾರು ಆಹಾರ ನಿರೀಕ್ಷಕರ/ ಶಿರಸ್ತೇದಾರರ ಹೆಸರು ಹಾಗೂ ಮೊಬೈಲ್ ಸಂಖ್ಯೆಯ ವಿವರವನ್ನು ಈ ಕೆಳಕಂಡಂತೆ ನೀಡಲಾಗಿದ್ದು, ದೂರು ನೀಡುವವರು ಸಂಪರ್ಕಿಸಬಹುದಾಗಿದೆ.

      ಚಿಕ್ಕನಾಯಕನಹಳ್ಳಿ ತಾಲ್ಲೂಕು: ಕಿರಣ್ ಕುಮಾರ್ ಟಿ.ಯು.(9611350376)/ ಗಿರಿಸುತೆ ಡಿ.(9008149950); ಗುಬ್ಬಿ ತಾಲ್ಲೂಕು: ಆರ್. ಜಗದೀಶಯ್ಯ(9880612025)/ ಸಿದ್ದೇಗೌಡ ಆರ್.(9535842027), ಹರೀಶ್ ಕುಮಾರ್ ಬಿ.ಎನ್.(9964521258); ಕೊರಟಗೆರೆ ತಾಲ್ಲೂಕು: ಜಯಸಿಂಹ(9739732412)/ ಕೃಷ್ಣಮೂರ್ತಿ ಜಿ.(9448782866), ಚೆನ್ನಾಂಬಿಕೆ ಹೆಚ್.ವಿ. (9740110390); ಕುಣಿಗಲ್ ತಾಲ್ಲೂಕು: ಮಲ್ಲಿಕಾರ್ಜುನ ಟಿ.ಎಂ.(9448220792)/ ನಾಗೇಂದ್ರ ಹೆಚ್.ಎಸ್.(9148869881); ಮಧುಗಿರಿ ತಾಲ್ಲೂಕು: ಹೆಚ್.ಆರ್.ಗಣೇಶ್(9741175118)/ ಮಹಮ್ಮದ್ ನಸರುದ್ದೀನ್(9620808870), ಪ್ರಸನ್ನ ಕುಮಾರ್ (9449653685); ಪಾವಗಡ ತಾಲ್ಲೂಕು: ಕೃಷ್ಣಮೂರ್ತಿ ಎಸ್.ಕೆ.(8660184016)/ ಬಸವರಾಜು ಎಂ.ಹೆಚ್.(9964435580), ಕೆ.ಹೆಚ್.ಮಂಜುನಾಥ್ (8073864473); ಶಿರಾ ತಾಲ್ಲೂಕು: ಮಹಮ್ಮದ್ ಬುಡೇನ್‍ಸಾಬ್ (9480065633)/ ಸುಜಾತ ಎಸ್.ಆರ್.(9731740902), ರೋಹಿಣಿ ಬಿ.(8105616999); ತಿಪಟೂರು ತಾಲ್ಲೂಕು: ತಿಮ್ಮಯ್ಯ ಜಿ.(9449422787)/ರೇಣುಕ ಕೆ.ಎಲ್.(9742572653); ತುಮಕೂರು ನಗರ: ನಾಗರಾಜು ಡಿ.(9448026816)/ ಸಚ್ಚಿನ್‍ಪ್ರಸಾದ್ ಎಸ್.ಆರ್.(8884854954); ತುಮಕೂರು ಗ್ರಾಮಾಂತರ: ಬಿ.ಕೆ.ಜಯಪ್ಪ(8147005573)/ ಬಿ.ಕಾಂತರಾಜಯ್ಯ(9482155670), ಪಿ.ಬಿ.ಯಶೋಧಮ್ಮ(9481932507); ತುರುವೇಕೆರೆ ತಾಲ್ಲೂಕು: ಜಿ.ಹೆಚ್.ಪ್ರೇಮ(7996438974)/ ಕೃಷ್ಣೇಗೌಡ(8951837064).

(Visited 51 times, 1 visits today)

Related posts

Leave a Comment