ಗುಬ್ಬಿ:
ಸಾರ್ವಜನಿಕರು ಲಾಕ್ ಡೌನ್ ಆದೇಶ ಸರಿಯಾಗಿ ಪಾಲನೆ ಮಾಡುತ್ತಿಲ್ಲ, ಅನಾವಶ್ಯಕವಾಗಿ ಓಡಾಟ ನಡೆಸುತ್ತಿದ್ದಾರೆ, ಅಧಿಕಾರಿಗಳು ಕ್ರಮವನ್ನು ತೆಗೆದುಕೊಳ್ಳದೆ ಜಾಣ ಕು ರುಡು ತೋರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ತುಮಕೂರು ಜಿಲ್ಲಾ ಎಸ್ಪಿಯವರೆ ಅಖಾಡಕ್ಕೆ ಇಳಿದು ಪರಿಶೀಲನೆ ನಡೆಸಿ ಅನಾವಶ್ಯಕವಾಗಿ ಓಡಾಡುವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇಂದು ತಿಪಟೂರಿಗೆ ಹೊರಟಿದ್ದ ಜಿಲ್ಲಾ ಪೊಲೀಸ್ ಅಧೀಕ್ಷಕ ವಂಶಿಕೃಷ್ಣ ರವರು ಮಾರ್ಗಮಧ್ಯದಲ್ಲಿ ಗುಬ್ಬಿ ಬಸ್ ನಿಲ್ದಾಣದ ಎದುರು ಬಿ.ಎಚ್. ರಸ್ತೆಯಲ್ಲಿ ಅನಾವಶ್ಯಕವಾಗಿ ಓಡಾಟ ನಡೆಸುತ್ತಿದ್ದ ವಾಹನಗಳನ್ನು ತಡೆದು ಪರಿಶೀಲನೆ ನಡೆಸಿ ಎಚ್ಚರಿಕೆ ನೀಡಿದ್ದಾರೆ.
(Visited 9 times, 1 visits today)
				
		
		
		
	
 
									 
					



