ತುಮಕೂರು :

       ಟಾಟಾಸುಮೋ ನಿಲ್ಲಿಸಿಕೊಂಡು ಮಾರಕಾಸ್ತ್ರಗಳಿಂದ ಬೆದರಿಸಿ ರಸ್ತೆಯಲ್ಲಿ ಬರುವ ವಾಹನಗಳನ್ನು ತಡೆದು ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ 5 ಜನರ ಗುಂಪೊಂದನ್ನು ಮಾರಕಾಸ್ತ್ರಗಳ ಸಮೇತ ಕ್ಯಾತ್ಸಂದ್ರ ಪೊಲೀಸ್ ಸಿಪಿಐ ನೇತೃತ್ವದಲ್ಲಿ ಬಂಧಿಸಲಾಗಿದೆ.

       ಆರೋಪಿಗಳನ್ನು ಬೆಂಗಳೂರಿನ ಶಾಂತಿನಗರದ ಜಫ್ರುದ್ದೀನ್(29), ಸಫೀರುದ್ದೀನ್(28), ಮೊಕದ್ದರ್ ಪಾಷಾ(35), ಮೊಹಮ್ಮದ್ ಸಲೀಂ(28), ಕಲೀಂ ಪಾಷಾ(24) ಎಂದು ಗುರುತಿಸಲಾಗಿದೆ. 

      ಆರೋಪಿಗಳು ನ.23 ರಂದು ಸುಮಾರು ಮಧ್ಯರಾತ್ರಿ 1 ಗಂಟೆ ವೇಳೆಯಲ್ಲಿ ತಾಲ್ಲೂಕಿನ ಹೆಬ್ಬೂರು ಪೊಲೀಸ್ ಠಾಣಾ ಸರಹದ್ದಿನ ರಸ್ತೆಯಲ್ಲ್ಲಿ ಹೋಗುತ್ತಿದ್ದ ವಾಹನಗಳನ್ನು ನಿಲ್ಲಿಸಿ ಕೈಗಳಲ್ಲಿ ಲಾಂಗ್, ಡ್ರಾಗನ್, ಪಿಸ್ತೂಲು ಮುಂತಾದ ಮಾರಕಾಸ್ತ್ರಗಳಿಂದ ದರೋಡೆ ಮಾಡುತ್ತಿದ್ದರು ಎಂಬ ಮಾಹಿತಿ ತಿಳಿದುಬಂದ ಹಿನ್ನೆಲೆಯಲ್ಲಿ ಕ್ಯಾತ್ಸಂದ್ರ ಸಿಪಿಐ ವೃತ್ತರವರ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.

      ವಿಚಾರಣೆ ವೇಳೆ ಆರೋಪಿಗಳು ಸುಮಾರು 25 ದಿನಗಳ ಹಿಂದೆ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್‍ನಲ್ಲಿ ಟಾಟಾ ಸುಮೋ, ಮೊಬೈಲ್ ಸುಲಿಗೆ, ಅದೇ ದಿನ ಮಾಗಡಿ ಬಳಿ ದೇವಸ್ಥಾನದಲ್ಲಿ ದೇವರ ವಿಗ್ರಹಗಳನ್ನು ಕಳವು ಪ್ರಕರಣ ಹಾಗೂ ಈಗ್ಗೆ ಸುಮಾರು 10 ತಿಂಗಳ ಹಿಂದೆ ಬೆಂಗಳೂರಿನ ಭಾರತಿ ನಗರದಲ್ಲಿ ಒಂದು ಟಾಟಾ ಸುಮೋವನ್ನು ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಿಳಿದುಬಂದಿದೆ. ಅಲ್ಲದೇ ಟಾಟಾ ಸುಮೋ ಹಾಗೂ ಅದರ ಇಂಜಿನ್ ಹಾಗೂ ಇತರೆ ಬಿಡಿ ಭಾಗಗಳು, 10 ಮೊಬೈಲ್ ಫೋನ್‍ಗಳು, ಒಂದು ನಾಡ ಪಿಸ್ತೂಲ್, 5 ಜೀವಂತ ಗುಂಡುಗಳು, ಲಾಂಗ್, 7 ಡ್ರಾಗರ್ ಮಾರಕಾಸ್ತ್ರಗಳನ್ನು ಹಾಗೂ 3 ದೇವರ ವಿಗ್ರಹಗಳನ್ನು ಆರೋಪಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತು 1 ದರೋಡೆ ಪ್ರಕರಣ, 1 ಸುಲಿಗೆ ಪ್ರಕರಣ, 2 ಕಳವು ಪ್ರಕರಣಗಳನ್ನು ಪತ್ತೆಹಚ್ಚಿರುತ್ತಾರೆ.

      ಆರೋಪಿಗಳನ್ನು ಮತ್ತು ಕಳವು ಮಾಲನ್ನು ವಶಪಡಿಸಿಕೊಳ್ಳಲು ಶ್ರಮಿಸಿದ ಪೊಲೀಸ್ ಸಿಬ್ಬಂಧಿಗಳನ್ನು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ||ಕೆ.ವಂಸಿಕೃಷ್ಣ ರವರು ಅಭಿನಂದಿಸಿರುತ್ತಾರೆ.

(Visited 234 times, 1 visits today)