ತುರುವೇಕೆರೆ : ನೀರಿನಲ್ಲಿ ಮುಳುಗಿ ಯುವಕ ಸಾವು!!

ತುರುವೇಕೆರೆ:

      ತಾಲ್ಲೂಕಿನ ಮಲ್ಲಾಘಟ್ಟಕೆರೆಯಲ್ಲಿ ಬುಧುವಾರ ಸ್ನೇಹಿತರೊಂದಿಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

     ತಾಲ್ಲೂಕಿನ ತಾಳಕೆರೆ ಗ್ರಾಮದ ಲೇ. ಶಂಕರಪ್ಪ ರವರ ಪುತ್ರ ಟಿ.ಎಸ್.ಕಾರ್ತಿಕ್ (19 ವರ್ಷ) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಧೈವಿ.

 ಘಟನೆ ವಿವರ:

      ಕಾರ್ತಿಕ್ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ವಿದ್ಯಾಭ್ಯಾಸ ಮಾಡುತ್ತಿದ್ದು, ಬುಧವಾರದ ಗಾಂಧಿ ಜಯಂತಿ ಕಾರ್ಯಕ್ರಮ ಮುಗಿಸಿಕೊಂಡು ಸ್ನೇಹಿತರೊಂದಿಗೆ ಮಲ್ಲಾಘಟ್ಟ ಕೆರೆಗೆ ಈಜಲು ತೆರಳಿದ್ದಾರೆ. ಈ ವೇಳೆ ನೀರಿಗೆ ಹಾರುವ ಸಂದರ್ಭದಲ್ಲಿ ನೀರಿನೊಳಗಿನ ಬಂಡೆಗೆ ತಲೆ ಬಡಿದು ಕಾರ್ತಿಕ್ ಸಾವನ್ನಪ್ಪಿದ್ದಾನೆ. ಸ್ಥಳದಲ್ಲಿದ್ದ ಸಾರ್ವಜನಿಕರು ಆತನ ನೆರವಿಗೆ ದಾವಿಸಿ ದಡಕ್ಕೆ ಕರೆತರುವ ವೇಳೆಗೆ ಪ್ರಾಣ ಪಕ್ಷಿ ಹಾರಿಹೋಗಿತ್ತು ಎನ್ನಲಾಗಿದೆ. ಈ ಬಗ್ಗೆ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

(Visited 18 times, 1 visits today)

Related posts