ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ೨೬ಕೆರೆಗಳಿಗೆ ಹೇಮಾವತಿ ನಾಲೆಯಿಂದ ನೀರುಣಿಸುವ ಯೋಜನೆ ಜಾರಿಯಾಗಿ ಹಲವು ವರ್ಷಕಳೆದರೂ ಮುಗಿಯದ ಕಾರಣ ಯೋಜನೆಯ ಅನುಷ್ಠಾನಕ್ಕಾಗಿ ನಾಲಾ ಭಾಗದ ರೈತರಿಂದ ಪೂರ್ವಬಾವಿ ಸಭೆ ನಡೆಯಿತು.
ಶನಿವಾರ ತಾಲ್ಲೂಕಿನ ಶೆಟ್ಟಿಕೆರೆಯ ಶ್ರೀ ಕಟ್ಟೆರಂಗನಾಥಸ್ವಾಮಿ ದೇವಾಲಯದ ಬಳಿ ನಡೆದ ಸಭೆಯಲ್ಲಿ. ಸಾರ್ವಜನಿಕ ಸುರಕ್ಷಿತ ಸೇವಾ ಸಂಘದ ರಾಜ್ಯಾಧ್ಯಕ್ಷ ಎ.ಬಿ. ಶರತ್‌ಕುಮಾರ್ ಮಾತನಾಡಿ ಹೇಮಾವತಿ ನಾಲೆಯು ಈ ಭಾಗಕ್ಕೆ ಹರಿಯವಲ್ಲಿ ನಮ್ಮದೆ ಹೋರಾಟದ ಇತಿಹಾಸವಿದೆ, ಈ ಭಾಗಕ್ಕೆ ನೀರೇ ಹರಿಯುವುದಿಲ್ಲ ಎಂಬ ಭಾವನೆಯನ್ನು ಸುಳ್ಳು ಮಾಡಿ, ಸರ್ವೆ ಕಾರ್ಯಕ್ಕೆ ಸರ್ಕಾರದಿಂದ ಅನುಮೂದನೆ ಪಡೆದು, ನಂತರದ ವರದಿಯ ಆಧಾರದ ಮೇಲೆ ಜನಜಾನುವಾರುಗಳ ಕುಡಿಯುವ ನೀರಿಗಾಗಿ ಹಾಗೂ ಅಂತರ್ಜಲ ಅಭಿವೃದ್ದಿಗಾಗಿ ೨೬ಕೆರೆಗಳಿಗೆ ನೀರುಣಿಸು ಯೋಜನೆ ಸಿದ್ದವಾಯಿತೆಂದರು. ಆದರೆ ಈ ವರೆಗೂ ಯೋಜನೆಯ ಕಾಲುಭಾಗವೂ ಅನುಷ್ಠಾನವಾಗಿಲ್ಲ. ರಾಜಕೀಯ ನಾಯಕರು ಇದನ್ನು ದಾಳವಾಗಿ ಪರಿಗಣಿಸಿದರ ಫಲವನ್ನು ತಾಲ್ಲೂಕಿನ ರೈತರು ಅನುಭವಿಸುತ್ತಿದ್ದಾರೆ. ಈ ನೀರಿನ ಅಂತರ್ಜಲದ ಆಧಾರದಮೇಲೆ ಕೃಷಿ ಮಾಡುತ್ತಿರುವ ರೈತರು ಆತಂಕದಲ್ಲಿಯೇ ಇರುವಂತಾಗಿದೆ. ತಾಲ್ಲೂಕಿನ ರೈತರ ಶಾಶ್ವತ ನೀರಿನ ಕನಸು ರಾಜಕಾರಣಿಗಳ ರಾಜಕೀಯದ ಚದುರಂಗದಾಟದ ಕಾಯಿಗಳಾಗಿದೆ. ಈ ಕಾರಣದಿಂದ ಮೆತ್ತೆ ಹೋರಾಟದ ಹಾದಿ ಹಿಡಿಯುವ ಬಗ್ಗೆ ಚಿಂತನೆ ನಡೆಸಲು ಇಂದು ಭವಿಷ್ಯದ ನಾಲಾ ನೀರಿನ ಕನಸನ್ನು ಹೊತ್ತ ರೈತರೊಂದಿಗೆ ಪೂರ್ವಬಾವಿ ಸಭೆ ನಡೆಸಲಾಗುತ್ತಿದೆ. ಇಂದಿನ ಸಭೆಯ ಉದ್ದೇಶ ಅಪೂರ್ಣಗೊಂಡ ಯೋಜನೆ ಮುಂದುವರೆಯಬೇಕು, ಈಗಾಗಿರುವ ನಾಲೆಯಲ್ಲಿ ಹೂಳು ತುಂಬಿ ನಾಲೆಯೇ ಮಚ್ಚಿಹೋಗುವ ಸ್ಥಿತಿಯನ್ನು ಸರಿಪಡಿಸಿ ಶಾಶ್ವತವಾಗಿ ದೃಡಪಡಿಸಬೇಕು, ಎಲ್ಲಾ ೨೬ಕೆರೆಗಳಿಗೆ ನೀರು ಹರಿಸಲು ಅನುದಾನ ಬಿಡುಗಡೆಯಾಗಬೇಕು, ಭೂಸಂತ್ರಸ್ಥರಿಗೆ ನ್ಯಾಯಯುತ ಪರಿಹಾರ ದೊರೆಯಬೇಕು, ಗಣಿಸುಂಕದ ಹಣ ನ್ಯಾಯಯುತವಾಗಿ ಈ ಭಾಗದ ನೀರಾವರಿ ಯೋಜನೆಗೆ ಬಳಕೆಯಾಗಬೇಕು, ಮುಂತಾದ ಹಲವು ಅಂಶಗಳಬಗ್ಗೆ ಸಭೆಯಲ್ಲಿ ಚರ್ಚೆಯಾಗಿ ಇನ್ನೆರಡು ದಿನದಲ್ಲಿ ತಹಸೀಲ್ದಾರ್, ಉಪವಿಭಾಗಾಧಿಕಾರಿಗಳು, ಹೇಮಾವತಿವಲಯದ ಅಧಿಕಾರಿಗಳು, ಜನಪ್ರತಿನಿಧಿಗಳ ಸಮ್ಮುಖದಲ್ಲಿ ರೈತರ ಸಭೆಯನ್ನು ಪಟ್ಟಣದಲ್ಲಿ ನಡೆಸಿ, ನಾಲೆಗಾಗಿ ಭೂಮಿಬಿಟ್ಟುಕೊಟ್ಟ ರೈತರಿಗೆ ನ್ಯಾಯಯುತವಾಗಿ ನೀಡಬೇಕಾದ ಪರಿಹಾರಧನ ಹಾಗೂ ಅವಾರ್ಡ್ ಪಡೆದ ರೈತರು ಒದಗಿಸಬೇಕಾದ ದಾಖಲೆಗಳನ್ನು ಸ್ಥಳದಲ್ಲಿಯೇ ಹಾಜರಿಪಡಸಿ ಸಮಸ್ಯೆ ಪರಿಹರಿಸುವ ನಿಟ್ಟನಲ್ಲಿ ಮುದುವರೆಯವುದು ಹಾಗೂ ನಾಲಾ ಕಾಮಗಾರಿಗೆ ರಾಜಕೀಯವಾಗಿ ಹಾಕಬೇಕಾದ ಒತ್ತಡದಂತೆ ರೈತರು ಮುಂದಿನ ಹಾದಿಯಲ್ಲಿ ರೂಪಿಸಬೇಕಾದ ಹೋರಾಟದಬಗ್ಗೆ ಚರ್ಚೆ ನಡೆಸಿ ಅದರಂತೆ ರೈತರು ಒಗ್ಗಟ್ಟಾಗಿ ಮುಂದುವರೆಯಲು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೆಆರ್‌ಎಸ್ ಪಕ್ಷದ ಮುಖಂಡ ಭಟ್ಟರಹಳ್ಳಿ ಮಲ್ಲಿಕಾರ್ಜುನಯ್ಯ, ಚಲನಚತ್ರ ನಿರ್ದೇಶಕ ಬಿ.ಎಸ್. ಲಿಂಗದೇವರು, ವಕೀಲರಾದ ಎಂ.ಬಿ. ನಾಗರಾಜು, ನವಿಲೆ ಮಧು, ತೋಂಟಾರಾಧ್ಯ ಹಾಗೂ ನೂರಾರು ಮಂದಿ ರೈತರು ಭಾಗವಹಿಸಿದ್ದರು.
(Visited 1 times, 1 visits today)