BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ನವೆ0ಬರ್ 18: ಕರ್ನಾಟಕ ನೌಕರರ ಮುಷ್ಕರ
  • ಕಡಿಮೆ ಅವಧಿಯ ತರಬೇತಿ, ಮೊದಲನೇ ಸ್ಪರ್ಧೆಯಲ್ಲೇ ಸಾಧನೆ
  • ದಿ ಕ್ಯಾಂಪ್ಕೋ ರೈತ ಸಂಪರ್ಕ ಸಪ್ತಾಹ
  • ಯುವಶಕ್ತಿಯೇ ವಿಕಸಿತ ಭಾರತದ ಭದ್ರ ಬುನಾದಿ
  • ಕಟ್ಟಡ ಕಾರ್ಮಿಕರಿಂದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ
  • ನ್ಯಾಯ ಪಡೆಯಲು ಹಣಕಾಸಿನ ಅಡಚಣೆ ಎಂದೂ ಇರಬಾರದು
  • ದೇಶದ ಅಭ್ಯುದಯಕ್ಕೆ ಭದ್ರ ಬುನಾಧಿ ಹಾಕಿದ ಮಹಾನಾಯಕ ನೆಹರು
  • ಕನ್ನಡದ ಬೆಳವಣಿಗೆಗೆ ಜಾತಿ, ಧರ್ಮಗಳ ಗಡಿಗಳಿಲ್ಲ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಬಾಲಕಿ ಮೇಲೆ ಅತ್ಯಾಚಾರ : ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಪ್ರತಿಭಟನೆ
Trending

ಬಾಲಕಿ ಮೇಲೆ ಅತ್ಯಾಚಾರ : ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಪ್ರತಿಭಟನೆ

By News Desk BenkiyabaleUpdated:October 09, 2019 6:49 pm

ತುಮಕೂರು:

      ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. 

      ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಮಾಯಿಸಿದ ವಿವಿಧ ಸಂಘಟನೆಗಳ ನೂರಾರು ಮಂದಿ ಅತ್ಯಾಚಾರಿಗೆ ಈ ಕೂಡಲೇ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಘೋಷಣೆಗಳನ್ನು ಕೂಗಿ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಅವರಿಗೆ ಮನವಿ ಪತ್ರ ಅರ್ಪಿಸಿದರು.

      ಕಳೆದ ಮೂರು ದಿನಗಳ ಹಿಂದೆ ನಗರದ ಈದ್ಗಾ ಮೊಹಲ್ಲಾ ಚಾಂದಿನಿ ಚೌಕ್‍ನಲ್ಲಿ 8 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಸ್ರುಲ್ಲಾ ಖಾನ್ ಎಂಬ ಆರೋಪಿ ಅತ್ಯಾಚಾರವೆಸಗಿದ್ದು, ಈ ಘಟನೆಯಿಂದ ಸದರಿ ಬಾಲಕಿ ಮತ್ತು ಕುಟುಂಬದವರು ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದಾರೆ. ಆದ್ದರಿಂದ ಸದರಿ ಬಾಲಕಿ ಮತ್ತು ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು. ಆರೋಪಿಗೆ ಯಾವುದೇ ರೀತಿಯ ಕರುಣೆ, ದಯೆ ತೋರದೆ ಕಠಿಣ ಕಾನೂನು ಕ್ರಮಕ್ಕೆ ಗುರಿಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

      ನ್ಯಾಯಾಲಯವು ಆರೋಪಿಗೆ ಕೊಡುವ ಶಿಕ್ಷೆಯಿಂದ ಅಥವಾ ತೀರ್ಪಿನಿಂದ ಮುಂದಿನ ದಿನಗಳಲ್ಲಿ ಯಾರೂ ಸಹ ಇಂತಹ ನೀಚ ಕೃತ್ಯವೆಸಗಲು ಭಯಭೀತರಾಗಬೇಕು. ಇಂಥ ನೀಚರಿಗೆ ಇದೊಂದು ಎಚ್ಚರಿಕೆಯ ಸಂದೇಶವಾಗಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

      ಈ ಹಂತದಲ್ಲಿ ತೀವ್ರ ಉದ್ವೇಗಕ್ಕೆ ಒಳಗಾದ ಪ್ರತಿಭಟನಾಕಾರರು ಈ ಕೂಡಲೇ ಅತ್ಯಾಚಾರಿಯನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಪಟ್ಟು ಹಿಡಿದರು. ಪರಿಸ್ಥಿತಿಯನ್ನು ಅರಿತ ಪೊಲೀಸರು ಪ್ರತಿಭಟನಾಕಾರರಿಗೆ ಮನವೊಲಿಸುವ ಪ್ರಯತ್ನ ನಡೆಸಿದರು.

      ಪ್ರತಿಭಟನೆಯ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಯಾವುದೇ ಕಾರಣಕ್ಕೂ ಈ ನೀಚ ಕೃತ್ಯವೆಸಗಿರುವ ಆರೋಪಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಂಥ ಅತ್ಯಾಚಾರಿಗಳಿಗೆ ಕಾನೂನು ಕಠಿಣ ಶಿಕ್ಷೆ ವಿಧಿಸಲಿದೆ ಎಂದು ಭರವಸೆಯ ಮಾತುಗಳನ್ನಾಡಿದರು.

      ಶಾಸಕರ ಭರವಸೆಯ ಮಾತುಗಳಿಂದ ಸಮಾಧಾನಗೊಂಡ ಪ್ರತಿಭಟನಾಕಾರರು ಅತ್ಯಾಚಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿಗೆ ಮತ್ತು ಆಕೆಯ ಕುಟುಂಬ ವರ್ಗದವರಿಗೆ ನ್ಯಾಯ ಕೊಡಿಸಲೇಬೇಕು ಎಂದು ಮನವಿ ಮಾಡಿದರು.

      ಪ್ರತಿಭಟನೆ ನಡೆದ ಜಿಲ್ಲಾಧಿಕಾರಿ ಕಚೇರಿ ಮುಂದೆ ಡಿವೈಎಸ್ಪಿ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ನಿಸಾರ್ ಅಹಮದ್, ಸೈಯದ್ ಬಹರುಹಾನುದ್ದೀನ್, ಮೊಹಮ್ಮದ್ ಆಸೀಫ್, ಸಿದ್ದೀಕ್ ಅಹಮದ್, ಜೀಯ್ ಉಲ್ಲಾ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

(Visited 16 times, 1 visits today)
Previous Articleಚಿಕ್ಕನಾಯಕನಹಳ್ಳಿ : ಮದನಿಂಗನ ಕಣಿವೆಯ ಪಕ್ಷಿನೋಟ
Next Article ಮಧುಗಿರಿ ಪುರಸಭೆಯಿಂದ ಸಿದ್ದಾಪುರ ಕೆರೆಯ ನೀರು ಮಲಿನ!
News Desk Benkiyabale

Related Posts

ನವೆ0ಬರ್ 18: ಕರ್ನಾಟಕ ನೌಕರರ ಮುಷ್ಕರ

November 16, 2026 5:26 pm news

ಕಡಿಮೆ ಅವಧಿಯ ತರಬೇತಿ, ಮೊದಲನೇ ಸ್ಪರ್ಧೆಯಲ್ಲೇ ಸಾಧನೆ

November 16, 2026 5:25 pm news

ದಿ ಕ್ಯಾಂಪ್ಕೋ ರೈತ ಸಂಪರ್ಕ ಸಪ್ತಾಹ

November 16, 2026 5:23 pm news
ತಾಜಾ ಸುದ್ಧಿಗಳು
news

ನವೆ0ಬರ್ 18: ಕರ್ನಾಟಕ ನೌಕರರ ಮುಷ್ಕರ

November 16, 2026 5:26 pm
news

ಕಡಿಮೆ ಅವಧಿಯ ತರಬೇತಿ, ಮೊದಲನೇ ಸ್ಪರ್ಧೆಯಲ್ಲೇ ಸಾಧನೆ

November 16, 2026 5:25 pm
news

ದಿ ಕ್ಯಾಂಪ್ಕೋ ರೈತ ಸಂಪರ್ಕ ಸಪ್ತಾಹ

November 16, 2026 5:23 pm
news

ಯುವಶಕ್ತಿಯೇ ವಿಕಸಿತ ಭಾರತದ ಭದ್ರ ಬುನಾದಿ

November 16, 2026 5:19 pm
news

ಕಟ್ಟಡ ಕಾರ್ಮಿಕರಿಂದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ

November 16, 2026 5:17 pm
news

ನ್ಯಾಯ ಪಡೆಯಲು ಹಣಕಾಸಿನ ಅಡಚಣೆ ಎಂದೂ ಇರಬಾರದು

November 14, 2026 5:39 pm
Our Youtube Channel
Our Picks

ನವೆ0ಬರ್ 18: ಕರ್ನಾಟಕ ನೌಕರರ ಮುಷ್ಕರ

November 16, 2026 5:26 pm

ಕಡಿಮೆ ಅವಧಿಯ ತರಬೇತಿ, ಮೊದಲನೇ ಸ್ಪರ್ಧೆಯಲ್ಲೇ ಸಾಧನೆ

November 16, 2026 5:25 pm

ದಿ ಕ್ಯಾಂಪ್ಕೋ ರೈತ ಸಂಪರ್ಕ ಸಪ್ತಾಹ

November 16, 2026 5:23 pm

ಯುವಶಕ್ತಿಯೇ ವಿಕಸಿತ ಭಾರತದ ಭದ್ರ ಬುನಾದಿ

November 16, 2026 5:19 pm

ಕಟ್ಟಡ ಕಾರ್ಮಿಕರಿಂದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ

November 16, 2026 5:17 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ZP CEO ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ನವೆ0ಬರ್ 18: ಕರ್ನಾಟಕ ನೌಕರರ ಮುಷ್ಕರ

By News Desk BenkiyabaleNovember 16, 2026 5:26 pm

ತುಮಕೂರು: ಎಲ್ಲಾ ಹಂತದ ನೌಕರರ ಹೊರಗುತ್ತಿಗೆ ನೇಮಕಾತಿ ರದ್ದು, ಬಡ್ತಿ ಒಪ್ಪಂದ ರದ್ದು ಏಕಪಕ್ಷೀಯವಾಗಿ ನಿರ್ಧಾರ ವಿರೋಧಿಸಿ,ಮರು ಸ್ಥಾಪನೆಗೆ ಒತ್ತಾಯಿಸಿ,…

ಕಡಿಮೆ ಅವಧಿಯ ತರಬೇತಿ, ಮೊದಲನೇ ಸ್ಪರ್ಧೆಯಲ್ಲೇ ಸಾಧನೆ

November 16, 2026 5:25 pm

ದಿ ಕ್ಯಾಂಪ್ಕೋ ರೈತ ಸಂಪರ್ಕ ಸಪ್ತಾಹ

November 16, 2026 5:23 pm

ಯುವಶಕ್ತಿಯೇ ವಿಕಸಿತ ಭಾರತದ ಭದ್ರ ಬುನಾದಿ

November 16, 2026 5:19 pm
News by Date
November 2026
M T W T F S S
 1
2345678
9101112131415
16171819202122
23242526272829
30  
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.