ತುಮಕೂರು:

      ರೈತರು ಸ್ವಾವಲಂಬಿಯಾಗುವ ಮೂಲಕ ಸುಸ್ಥಿರ ಬದುಕು ಕಟ್ಟಿಕೊಂಡು ಆದಾಯದಲ್ಲಿ ದ್ವಿಗುಣ ಪಡೆಯುವಲ್ಲಿ ಮುಂದಾಗಬೇಕು ಎಂದು ಐಡಿಎಫ್ ಸಂಸ್ಥೆಯ ಯೋಜನಾ ನಿರ್ದೇಶಕ ಮು.ಲ ಕೆಂಪೇಗೌಡ ತಿಳಿಸಿದರು.

     ತಾಲ್ಲೂಕಿನ ಹೆಬ್ಬೂರು ಹೋಬಳಿ ಹೊನಸಿಗೆರೆ ಗೊಲ್ಲರಹಟ್ಟಿಯಲ್ಲಿ ಐಡಿಎಫ್ ಸಂಸ್ಥೆ ಬೆಂಗಳೂರು, ಸುಪ್ರಜಾ ಫೌಂಡೇಷನ್ ಮತ್ತು ಕೊಲ್ಲಾಪುರದಮ್ಮ ರೈತ ಉತ್ಪಾದಕರ ಕಂಪನಿಯ ಸಂಯುಕ್ತಾಶ್ರಯದಲ್ಲಿ ಪ್ರಗತಿ ರೈತ ವೆಂಕಟೇಶ್ ಜಮೀನಿನಲ್ಲಿ ಏರ್ಪಡಿಸಿದ್ದ ಬಾಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, ಸ್ಥಳಿಯ ಸಂಪನ್ಮೂಲ ಬಳಸಿಕೊಂಡು ಮಣ್ಣು ಮತ್ತು ನೀರನ್ನು ಸಂರಕ್ಷಿಸಬೇಕು. ಪ್ರತಿಯೊಬ್ಬ ರೈತರು ಬಾಳೆ ಬೆಳೆಯನ್ನು ಬೆಳೆಯುವಾಗ ಕಿರು ಬೆಳೆಗಳನ್ನು ಬೆಳೆದಾಗ ಬಾಳೆಯಿಂದ ಬರುವ ಸಮಯಕ್ಕೆ ಕಿರು ಬೆಳೆಯಿಂದ ಆದಾಯ ಬರುತ್ತದೆ ಎಂದರು.

      ಜೀವನ ಉತ್ತೇಜನಾಧಿಕಾರಿ ಹರ್ಷಿತ ಮಾತನಾಡಿ ರೈತರು ಪ್ರಥಮ ಹಂತದಲ್ಲಿ ತಿಪ್ಪೆಯನ್ನ ರಕ್ಷಣೆ ಮಾಡಿಕೊಂಡು ಕೃಷಿ ಮಾಡುಲು ಮಂದಾಗಬೇಕು ಎಂದರು.
ಹೊನಸಿಗೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರುದ್ರೇಶ್ ಮಾತನಾಡಿ, ಐಡಿಎಫ್ ಸಂಸ್ಥೆಯು ಹಣಕಾಸಿನ ಸೌಲಭ್ಯ ಕೊಡಿಸುವುದರ ಜತೆಯಲ್ಲಿ ಕೃಷಿ ಚಟುವಟಿಕೆಯ ಬಗ್ಗೆ ಮಾಹಿತಿ ನೀಡುತ್ತಾ ಬಂದಿರುವುದು ಶ್ಲಾಘನೀಯ ಎಂದರು.

      ಕ್ಷೇತ್ರೋತ್ಸವದಲ್ಲಿ ರೈತ ಉತ್ಪಾದಕರ ಕಂಪನಿಯ ನಿರ್ದೇಶಕ ಕುಮಾರ್, ಕಂಪನಿಯ ಮುಖ್ಯನಿರ್ವಾಹಣಾಧಿಕಾರಿ ಕೆ.ಎಸ್.ಸುರೇಶ್, ವ್ಯವಸ್ಥಾಪಕ ಡಿ.ಲೋಕೇಶ್, ಪ್ರಗತಿ ರೈತ ವೆಂಟೇಶ್, ನಿಂಜಾಕಾಟಾ ವ್ಯವಸ್ಥಾಪಕ ಅರಾಧ್ಯ, ಮಧು ಕ್ಷೇತ್ರಾಧಿಕಾರಿಗಳಾದ ಮೋಹನ್‍ಕುಮಾರ್.ಸಿ, ಮಧುಸೂಧನ್.ಕೆ, ನರಸಿಂಹಮೂರ್ತಿ, ಗ್ರಾಮದ ಮುಖಂಡರಾದ ಮತ್ತಿತರರು ಇದ್ದರು.

(Visited 26 times, 1 visits today)