ಮಕ್ಕಳಲ್ಲಿ ಸ್ವಾವಲಂಭನೆ ಬದುಕು ರೂಪಿಸಲು ಮಕ್ಕಳ ಸಂತೆ ಸಹಕಾರಿ

ತುರುವೇಕೆರೆ:

      ಮಕ್ಕಳಲ್ಲಿ ಲೆಕ್ಕಾಚಾರ, ವ್ಯಾಪಾರ ವಹಿವಾಟು, ಸ್ವಾವಲಂಭನೆ ಬದುಕು ರೂಪಿಸುವ ಸಲುವಾಗಿ ಇಂತಹ ವಿನೂತನ ಮಕ್ಕಳ ಸಂತೆಯನ್ನು ಪ್ರೋತ್ಸಾಹಿಸಲಾಗಿದೆ ಎಂದು ವಿಶ್ವವಿಜಯ ವಿಧ್ಯಾಶಾಲೆಯ ವ್ಯವಸ್ಥಾಪಕ ಮುಖ್ಯೋಪಾಧ್ಯಾಯಿಣಿ ಶ್ರೀಮತಿ ವಿಜಯಲಕ್ಷ್ಮಿಎಂ.ವಿಶ್ವೇಶ್ವರಯ್ಯ ತಿಳಿಸಿದರು.

      ಪಟ್ಟಣದ ವಿಶ್ವವಿಜಯ ವಿಧ್ಯಾಶಾಲಾ ಆವರಣದಲ್ಲಿ ಮಕ್ಕಳಿಂದ ಮಕ್ಕಳ ಸಂತೆ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಅವರು ಶಾಲೆಗಳಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಮಕ್ಕಳಿಗೆ ಪಾಠದ ಜೊತೆಗೆ ಒಂದು ಮನರಂಜನೆ ಸಿಗಲಿದ್ದು ವ್ಯವಹಾರಿಕ ಜ್ಞಾನ ವೃದ್ದಿಯಾಗಲಿದೆ. ಗಣಿತದಲ್ಲಿ ಹೆಚ್ಚು ಜ್ಞಾನ ಹೊಂದುವ ಜೊತೆಗೆ ತಮ್ಮ ವಸ್ತುಗಳನ್ನು ಮಾರಾಟ ಮಾಡುವಾಗ ಗ್ರಾಹಕರೊಂದಿಗೆ ಮಾತನಾಡುವ ನೈಪುಣ್ಯತೆ ಗಳಿಸಲಿದ್ದಾರೆ ಎಂದರು.

      ಶಿಕ್ಷಕರ ಮಾರ್ಗದರ್ಶಕರಂತೆ ಪ್ರತ್ಯೇಕ ಸಾಲುಗಳಲ್ಲಿ ಹಣ್ಣು, ತೆಂಗಿನಕಾಯಿ,ಕುಂಬಳಕಾಯಿ, ಪೆಪ್ಸಿ-ಕೋಲಾ ಸೇರಿದಂತೆ ವಿವಿದ ವಸ್ತುಗಳನ್ನು ಒಪ್ಪವಾಗಿ ಜೋಡಿಸಲಾಗಿತ್ತು. ಮತ್ತೊಂದೆಡೆ ತಿನಿಸು ಪದಾರ್ಥಗಳಾದ ಪಾನಿಪೂರಿ, ಚಿರುಮುರಿ, ಗೋಬಿಮಂಜೂರಿ ಇತ್ಯಾದಿಗಳನ್ನು ತಮ್ಮ ಪುಟ್ಟ ಪುಟ್ಟ ಕೈಗಳಿಂದ ಮಕ್ಕಳು ತಯಾರಿಸಿ ಕೊಡುವುದರೊಂದಿಗೆ ಸಂತೆಗೆ ಆಗಮಿಸಿದ್ದ ಸಾರ್ವಜನಿಕರ ಮೆಚ್ಚುಗೆ ಗಳಿಸಿದರು. ಮತ್ತೊಂದೆಡೆ ಸೊಪ್ಪು, ತರಕಾರಿ, ಹುರುಳಿಕಾಳು, ಜೋಳ ಸೇರಿದಂತೆ ದಿನೋಪಯೋಗಿ ವಸ್ತುಗಳನ್ನು ಮಕ್ಕಳು ಉತ್ಸಾಹದಿಂದ ಮಾರುವುದರೊಂದಿಗೆ ತಮ್ಮ ವ್ಯಾಪಾರಿ ಕೌಶಲ್ಯವನ್ನು ತೋರಿದರು. ಗ್ರಾಹಕರೊಂದಿಗೆ ಮಕ್ಕಳು ವ್ಯವಹರಿಸಿದ ರೀತಿ ನೀತಿ, ತೋರಿದ ಸೌಜನ್ಯ ಅವರ ಒಳ್ಳೆ ತನಕ್ಕೆ ಹಿಡಿದ ಕೈಗನ್ನಡಿ ಎನಿಸಿತ್ತು. ಬೆಳಿಗ್ಗೆ 10 ರ ವೇಳೆಗೆ ಪೋಷಕರ ಸಹಕಾರದೊಂದಿಗೆ ಎಲ್ಲಾ ಪರಿಕರಗಳನ್ನು ತಂದು ಸಜ್ಜಾಗಿ ಇಡುವುದರೊಂದಿಗೆ ಕೆಜಿ, ಅರ್ಧಕೆಜಿ, ಕಾಲು ಕೆಜಿ ಗೆ ತಗಲಬಹುದಾದ ಲೆಕ್ಕಾಚಾರದಲ್ಲಿ ತಮ್ಮ ಜಾಣ್ಮೆಯನ್ನು ತೋರಿದರು.

      ವಿಧ್ಯಾರ್ಥಿ ಸ್ವರೂಪ್ ಹಾಗೂ ವಿಧ್ಯಾರ್ಥಿನಿ ಹರ್ಷಿತ ಮಾತನಾಡಿ ನಾವು ತಂದ ವಸ್ತುಗಳು ಮಾರಾಟವಾಗಿ ಒಳ್ಳೆ ಲಾಭ ಬಂದಿದ್ದು ಇದರಿಂದ ತುಂಬಾ ಖುಷಿಯಾಗಿದೆ. ಈ ಮಕ್ಕಳ ಸಂತೆಯಿಂದ ವಿಧ್ಯಾರ್ಥಿ ದೆಸೆಯಿಂದಲೇ ನಮಗೆ ವ್ಯಾಪಾರಿ ಕೌಶಲ್ಯ, ಸಾರ್ವಜನಿಕರೊಂದಿಗೆ ವ್ಯವಹರಿಸುವ ರೀತಿ ನೀತಿಗಳ ಪರಿಚಯವಾಯ್ತು ಎಂದರು.

      ಗ್ರಾಹಕ ಶಂಕರಯ್ಯ ಮಾತನಾಡಿ ಮಕ್ಕಳಿಗೆ ಕಲಿಕೆ ಜೊತೆಗೆ ವ್ಯವಹಾರ ಜ್ನಾನ ಹೆಚ್ಚಿಸಲು ಮಕ್ಕಳ ಸಂತೆಯಂತಹ ವಿನೂತನ ಕಾರ್ಯಕ್ರಮ ಇದಾಗಿದೆ. ಇದರಿಂದ ಮಕ್ಕಳಲ್ಲಿ ಬುದ್ದಿಕೌಶಲ್ಯದ ಜೊತೆಗೆ ವಿವೇಚನಾ ಶಕ್ತಿಯೂ ಹೆಚ್ಚುವುದು ಎಂದರು.

       ವ್ಯವಸ್ಥಾಪಕ ಮುಖ್ಯೋಪಾದ್ಯಾಯಿನಿ ಶ್ರೀಮತಿ ವಿಜಯಲಕ್ಷ್ಮಿಎಂ.ವಿಶ್ವೇಶ್ವರಯ್ಯ ಮಕ್ಕಳಿಂದ ವಸ್ತು ಕೊಳ್ಳುವುದರೊಂದಿಗೆ ಸಂತೆ ಉಧ್ಘಾಟನೆ ಮಾಡಿದರು. ಶಿಕ್ಷಕಿಯರಾದ ಮಮತ, ಪ್ರೇಮ, ರಾಧಾ, ಲತಾ,ಯಶೋದ, ಸುಮಿತ್ರ, ಗೌರಿ, ಶೋಭಾ, ಚೈತ್ರ, ಚೇತನ ಸೇರಿದಂತೆ ಪೋಷಕರು, ಗ್ರಾಹಕರು ಹಾಗು ಮಕ್ಕಳುಗಳು ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು.

(Visited 62 times, 1 visits today)

Related posts

Leave a Comment