ಮೈಸೂರು:   

      ಅರ್ಥಿಕ ಪರಿಸ್ಥಿತಿ ಹಿಂದುಳಿದ ಏರಿಯಾಗಳಿಗೆ ಶುದ್ಧ ಕುಡಿಯುವ ನೀರು ವ್ಯವಸ್ಥೆ ಮಾಡುತ್ತೇನೆ. ಹಾಗೆಯೇ ಸರ್ಕಾರದಿಂದ ಮಹಿಳೆಯರಿಗೆ ಬರುವ ಎಲ್ಲಾ ಸೌಲಭ್ಯ ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನೂತನ ಮೇಯರ್​ ಪುಷ್ಪಲತಾ ಹೇಳಿದರು.

      ಉಪ ಮೇಯರ್ ಆಗಿ ಅನುಭವ ಪಡೆದಿದ್ದೆ. ಈಗ ಮೇಯರ್ ಆಗಿರುವುದು ತುಂಬಾ ಖುಷಿ ತಂದಿದೆ. ಈ ಹಿಂದೆ ಕೆಲಸ ಮಾಡಿದ ರೀತಿಯಲ್ಲೇ ಕೆಲಸ ಮಾಡಿ ಪ್ರಾಮಾಣಿಕತೆಯಿಂದ ಇರುತ್ತೇನೆ. ನನ್ನ ಮೊದಲ ಆದ್ಯತೆ ಸ್ವಚ್ಛತೆ ಕಡೆಗೆ. ಸ್ವಚ್ಛತೆಯಲ್ಲಿ ಮೈಸೂರಿಗೆ ಮತ್ತೆ ಮೊದಲ ಸ್ಥಾನ ತರುವುದು ನನ್ನ ಗುರಿ ಎಂದರು.

     ಮಾಧ್ಯಮಗಳೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರ ಹಠ ಈ ಚುನಾವಣೆಯಲ್ಲಿ ಗೆದ್ದಿದೆ. ಅದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ಮೈಸೂರಿನಲ್ಲಿ ಕಾಂಗ್ರೆಸ್​ಗೆ ಅಧಿಕಾರ ಇರಲಿಲ್ಲ. ಆದರೆ ಮೈತ್ರಿ ಸರ್ಕಾರದಿಂದ ಈಗ ಮೇಯರ್ ಸ್ಥಾನ ಸಿಕ್ಕಿದೆ. ಮೇಯರ್ ಆಗಿ ಆಯ್ಕೆಯಾಗಿದ್ದಕ್ಕೆ ಜೆಡಿಎಸ್, ಕಾಂಗ್ರೆಸ್ ನಾಯಕರಿಗೆ ಧನ್ಯವಾದ ಅರ್ಪಿಸುತ್ತೇನೆ.  ಶಾಸಕರಾದ ವಾಸು, ತನ್ವೀರ್ ಸೇಠ್, ಸೋಮಣ್ಣ, ಸಚಿವರಾದ ಜಿ.ಟಿ.ದೇವೆಗೌಡರು ಮತ್ತು ಸಾ.ರಾ.ಮಹೇಶ್ ಅವರಿಗೆ ಧನ್ಯವಾದ ತಿಳಿಸಿದರು.

 

 

(Visited 20 times, 1 visits today)