ಕೊಲೊಂಬೋ: 

      ಸುಪ್ರೀಂಕೋರ್ಟ್ ಆದೇಶದಿಂದ ಕೊನೆಗೂ ಶ್ರೀಲಂಕಾದ ಪ್ರಧಾನಿ ಹುದ್ದೆಗೆ ಮಹೀಂದ್ರ ರಾಜಪಕ್ಸೆ ಶನಿವಾರ ರಾಜೀನಾಮೆ ನೀಡುವ ಮೂಲಕ ಲಂಕಾ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ವಿವಾದಿತ ನಿರ್ಧಾರದ ಜಟಾಪಟಿ ಅಂತ್ಯಗೊಂಡಂತಾಗಿದೆ.

      ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ಶನಿವಾರ ಬೆಳಗ್ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅಷ್ಟಕ್ಕೂ, ರಾಜಪಕ್ಸೆ ಅವರು ಶನಿವಾರ ರಾಜೀನಾಮೆ ನೀಡುವ ಬಗ್ಗೆ ಶುಕ್ರವಾರ ಸಂಜೆಯೇ ಎಲ್ಲೆಡೆ ಸುದ್ದಿ ಹರಿದಾಡಿತ್ತು. 

      ಈ ಹಿನ್ನೆಲೆಯಲ್ಲಿ ರನಿಲ್ ವಿಕ್ರಮಸಿಂಘೆ ಅವರ ಹಾದಿ ಸುಗಮವಾದಂತಾಗಿದ್ದು, ಭಾನುವಾರ ಲಂಕಾದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. 

      ಶುಕ್ರವಾರ ಮತ್ತೆ ಸುಪ್ರೀಂಕೋರ್ಟ್ ರಾಜಪಕ್ಸೆ ಕುರಿತಂತೆ ನೀಡಿರುವ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತ್ತು. ಇದರಿಂದ ಕಾನೂನು ಸಮರದಲ್ಲಿ ಸೋಲು ಕಂಡ ರಾಜಪಕ್ಸೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

 

 

(Visited 17 times, 1 visits today)