ಶಾಸಕರಿಗೆ ಡಿಕೆಶಿಯಿಂದ ಭರ್ಜರಿ ಭೋಜನಕೂಟ

ಬೆಳಗಾವಿ :

      ಅಧಿವೇಶನ ನಡೆಯುತ್ತಿರುವ ಹಿನ್ನಲೆಯಲ್ಲಿ ಡಿ ಕೆ ಶಿವಕುಮಾರ್ ನಾಳೆ ಸಂಜೆ ಸರ್ವ ಪಕ್ಷದ ಶಾಸಕರಿಗೆ ಭೋಜನಕೂಟ ಆಯೋಜಿಸಿದ್ದಾರೆ.

      ಪ್ರತಿ ಬಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವಾಗ ಶಾಸಕರಿಗೆ ಜಾರಕೀಹೊಳಿ ಬ್ರದರ್ಸ್ ಭೋಜನಕೂಟ ಏರ್ಪಡಿಸುತ್ತಿದ್ದರು. ಈ ಬಾರಿ ಅಧಿವೇಶ ಆರಂಭವಾಗಿ ವಾರ ಕಳೆದರೂ ಜಾರಕಿಹೊಳಿ ಬ್ರದರ್ಸ್ ಅವರಿಂದ ಶಾಸಕರಿಗೆ ಉಟದ ವಿಚಾರ ಪ್ರಸ್ತಾಪವಾಗಿರಲಿಲ್ಲ. ಬೆಳಗಾವಿ ಉಸ್ತುವಾರಿ ಸಚಿವರಾದ್ರೂ ರಮೇಶ್ ಜಾರಕಿಹೊಳಿ ಮೌನ ವಹಿಸಿದ್ದಾರೆ.

      ಡಿಕೆಶಿ ಸರ್ವ ಪಕ್ಷದ ಸಚಿವರಿಗೆ ಭೋಜನಕೂಟ ಆಯೋಜಿಸಿದ್ದು ಜಾರಕೀಹೊಳಿ ಬ್ರದರ್ಸ್ ಗೆ ಟಾಂಗ್ ಕೊಡಲು ಮುಂದಾಗಿದ್ದಾರಾ ಎಂಬ ಮಾತು ಕೇಳಿ ಬರುತ್ತಿದೆ.

(Visited 9 times, 1 visits today)

Related posts

Leave a Comment